ಇಂದಿನಿಂದ ರುದ್ರಾವಧೂತರ ಪುಣ್ಯಾರಾಧನೆ, ವೇದಾಂತ ಪರಿಷತ್ ಕಾರ್ಯಕ್ರಮ
ಜಮಖಂಡಿ 10: ರುದ್ರಾವಧೂತರ 94ನೇ ಪುಣ್ಯಾರಾಧನೆ, 39ನೇ ವೇದಾಂತ ಪರಿಷತ್ ಕಾರ್ಯಕ್ರಮ ಡಿ.11 ರಿಂದ 13 ರವರಗೆ ಜರುಗಲಿದೆ ಎಂದು ರುದ್ರಾವಧೂತ ಮಠದ ಪೀಠಾಧಿಕಾರಿ ವೇದಾಂತಾಚಾರ್ಯ ಸಹಜಾನಂದ ಅವಧೂತರು, ಕೃಷ್ಣಾನಂದ ಅವಧೂತರು ಹೇಳಿದರು.
ನಗರದ ರುದ್ರಾವಧೂತ ಮಠದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಡಿ.11ರಂದು ಮುಂಜಾನೆ 6ಗಂಟೆಗೆ ಓಂಕಾರ ನಡೆಯುವುದು. ಸಾಯಂಕಾಲ 4ಗಂಟೆಗೆ ನಗರದ ಪ್ರಮುಖ ರಸ್ತೆ ಮೂಲಕ ರುದ್ರಾವಧೂತರ ಭಾವಚಿತ್ರ ಹಾಗೂ ಮಹಾತ್ಮರ ಮೆರವಣಿಗೆ ನಡೆಯುವುದು. ಸಂಜೆ 7 ಗಂಟೆಗೆಯಿಂದ 10 ಗಂಟೆಯವರೆಗೆ ಮಹಾತ್ಮರಿಂದ ಪ್ರವಚನ ಜರುಗುತ್ತದೆ ಎಂದರು.
ಡಿ.12ರಂದು ಮುಂಜಾನೆ 10 ಗಂಟೆಯಿಂದ 12.30 ರವಗೆ ಮಹಾತ್ಮರ ಪ್ರವಚನ ನಂತರ 1 ಗಂಟೆಗೆ ಅನ್ನಪ್ರಸಾದ ಸೇವೆ ಜರುಗುವುದು. ಸಾಯಂಕಾಲ 7 ಗಂಟೆಯಿಂದ 10 ಗಂಟೆಯವರೆಗೆ ಪ್ರವಚನ ಹಾಗೂ 10 ರಿಂದ ಭಜನಾ ಕಾರ್ಯಕ್ರಮ ನಡೆಯುವುದು. 13ರಂದು 10ರಿಂದ 12 ವರಗೆ ಪ್ರವಚನ. ಮಧ್ಯಾಹ್ನ 12 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ರಾಜ್ಯ ಹಾಗೂ ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆಂದು ತಿಳಿಸಿದರು.
ಮಠದ ಕಾರ್ಯಕರ್ತರು ಹಾಗೂ ಪ್ರಮುಖರು ಇದ್ದರು.