ರೋಮ್, ಮಾ ೧೯, ಮಾರಣಾಂತಿಕ ಕೊರೊನಾ ವೈರಸ್ ,ದಾಳಿಗೆ ಐರೋಪ್ಯ ದೇಶಗಳು ತಲ್ಲಣಗೊಂಡಿದ್ದು, ಅದರಲ್ಲೂ ಇಟಲಿಯ ಪರಿಸ್ಥಿತಿ ತೀವ್ರ ಗಂಭೀರತೆಗೆ ತಿರುಗಿದೆ. ಸೋಂಕಿನಿಂದಾಗಿ ದೇಶದಲ್ಲಿ ಬುಧವಾರ ಒಂದೇ ದಿನದಲ್ಲಿ ೪೭೫ ಜನರು ಮೃತಪಟ್ಟಿದ್ದಾರೆ. ಕೊರೊನಾ ಕಾರಣದಿಂದ ಒಂದೇ ದಿನದಲ್ಲಿ ಇಷ್ಟೊಂದು ಸಾವುಗಳು ಈವರೆಗೆ ಯಾವುದೇ ದೇಶದಲ್ಲಿ ಸಂಭವಿಸಿಲ್ಲ. ಇದರೊಂದಿಗೆ ಇಟಲಿಯಲ್ಲಿ ಒಟ್ಟು ಸಾವಿನ ಸಂಖ್ಯೆ ೨,೯೭೮ಕ್ಕೆ ಏರಿಕೆಯಾಗಿದ್ದು. ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ೩೫,೭೧೩ ಕ್ಕೆ ಹೆಚ್ಚಳಗೊಂಡಿದೆ. ಮತ್ತೊಂದೆಡೆ ಮಾಧ್ಯಮ ವರದಿಗಳ ಪ್ರಕಾರ, ವಿಶ್ವಾದ್ಯಂತ ಕರೋನಾ ಸಂತ್ರಸ್ತರ ಸಂಖ್ಯೆ ೨ ಲಕ್ಷ ಸಮೀಪ ತಲುಪಿದೆ. ಬುಧವಾರ ಬೆಳಿಗ್ಗೆ, ಸುಮಾರು ೨,೦೦,೬೮೦ ಜನರು ಸೋಂಕಿಗೆ ಒಳಗಾಗಿದ್ದು, ೮,೦೯೨ ಸಾವಿರ ಮಂದಿ ಮೃತಪಟ್ಟಿದ್ದಾರೆ.ಸಾವಿನ ಸಂಖ್ಯೆಯಲ್ಲಿ ಯುರೋಪ್ ಏಷ್ಯಾವನ್ನು ಮೀರಿಸಿದೆ. ಏಷ್ಯಾದಲ್ಲಿ ಈವರೆಗೆ ೩,೩೮೪ ಮಂದಿ ಮೃತಪಟ್ಟಿದ್ದು, ಯುರೋಪ್ ನಲ್ಲಿ ೩,೪೨೨ ಜನರು ಸಾವನ್ನಪ್ಪಿದ್ದಾರೆ. ಅಮೆರಿಕಾದಲ್ಲಿ ಕೊರೊನಾ ಸಾವಿನ ಸಾವಿನ ಸಂಖ್ಯೆ ಬುಧವಾರ ೧೦೫ ಕ್ಕೆ ಏರಿದೆ. ಒಟ್ಟು ೫೦ ರಾಜ್ಯಗಳು ಈ ವೈರಸ್‌ಗೆ ತುತ್ತಾಗಿವೆ. ಸೋಂಕು ಪ್ರಕರಣಗಳ ಸಂಖ್ಯೆ ೬,೫೦೦ ಕ್ಕೆ ಏರಿದೆ. ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ೧೫೮ ತಲುಪಿದೆ. ಮಂಗಳವಾರದಿಂದ, ೧೪ ಹೊಸ ವೈರಸ್ ಪ್ರಕರಣಗಳು ವರದಿಯಾಗಿವೆ.