7,000 ಕೋಟಿ ರೂ ಬ್ಯಾಂಕ್ ವಂಚನೆ; ದೇಶಾದ್ಯಂತ 169 ಸ್ಥಳಗಳಲ್ಲಿ ಸಿಬಿಐ ದಾಳಿ

ನವದೆಹಲಿ, ನ 5:     ಸುಮಾರು  7 ಸಾವಿರ  ಕೋಟಿ ರೂ ಹೆಚ್ಚು  ಮೌಲ್ಯದ  ಬ್ಯಾಂಕ್ ವಂಚನೆ  ಪ್ರಕರಣ ಸಂಬಂಧ  ದೆಹಲಿ,  ಚಂಡೀಗಢ,  ಉತ್ತರಪ್ರದೇಶ,ಮಧ್ಯಪ್ರದೇಶ ಹಾಗೂ ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳ  169  ಸ್ಥಳಗಳಮೇಲೆ  ಕೇಂದ್ರೀಯ ತನಿಖಾ ಸಂಸ್ಥೆ  - ಸಿಬಿಐ ಮಂಗಳವಾರ  ದಾಳಿ ನಡೆಸಿದೆ. 7000 ಕೋಟಿರೂ ಹೆಚ್ಚು ಪ್ರಮಾಣದ  35 ಬ್ಯಾಂಕ್  ವಂಚನೆ ಪ್ರಕರಣಗಳನ್ನು ಸಿಬಿಐ ದಾಖಲಿಸಿಕೊಂಡು ಈ ದಾಳಿಗಳನ್ನು  ನಡೆಸುತ್ತಿದೆ. ದೇಶಾದ್ಯಂತ  169 ಸ್ಥಳಗಳಲ್ಲಿ  ದಾಳಿ ನಡೆಸಲಾಗಿದೆ ಎಂದು ಸಿಬಿಐ ನಿಂದ ಮಾಹಿತಿ ಲಭ್ಯವಾಗಿದೆ ದೆಹಲಿ, ಆಂಧ್ರ ಪ್ರದೇಶ, ಚಂಡೀಗಢ, ಗುಜರಾತ್,  ಹರಿಯಾಣ,  ಕರ್ನಾಟಕ, ಕೇರಳ, ಮಧ್ಯಪ್ರದೇಶ,ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು,  ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ್ ಹಾಗೂ ದಾದ್ರಾ ಮತ್ತು ನಗರ್ ಹವೇಲಿಯಲ್ಲಿ  ದಾಳಿಗಳನ್ನು  ನಡೆಸಲಾಗಿದೆ  ಎಂದು  ಸಿಬಿಐ ಮೂಲಗಳು ತಿಳಿಸಿವೆ.