ಐತಿಹಾಸಿಕ ಮಲ್ಲಯ್ಯ ರಾವುತರಾಯ ದೇವಸ್ಥಾನದ ಯಾತ್ರಿ ನಿವಾಸ ಕಟ್ಟಡಕ್ಕೆ 5ಲಕ್ಷ ರೂ ದೇಣಿಗೆ
Rs 5 lakh donation for the pilgrim residence building of the historic Mallaiah Ravutaraya Temple
ದೇವರಹಿಪ್ಪರಗಿ 27: ಪಟ್ಟಣದ ಐತಿಹಾಸಿಕ ಮಲ್ಲಯ್ಯ ರಾವುತರಾಯ ದೇವಸ್ಥಾನದ ಟ್ರಸ್ಟ್ ವತಿಯಿಂದ ನಿರ್ಮಿಸಲಾಗುತ್ತಿರುವ ಯಾತ್ರಿ ನಿವಾಸದ ಕಟ್ಟಡಕ್ಕೆ ಭಕ್ತರು ಹಾಗೂ ದೇವಸ್ಥಾನದ ಟ್ರಸ್ಟ್ ಸದಸ್ಯರಾದ ನಾಗರಾಜ ಸಂಗಣ್ಣನವರ ಅವರು ಸುಮಾರು 5ಲಕ್ಷ ರೂ ದೇಣಿಗೆ ನೀಡುವ ಮೂಲಕ ಭಕ್ತಿ ಮೆರೆದಿದ್ದಾರೆ.
ಪಟ್ಟಣದ ಜನರ ಆರಾಧ್ಯ ದೈವ ಶ್ರೀ ಮಲ್ಲಯ್ಯ ರಾವುತರಾಯ ದೇವಸ್ಥಾನಕ್ಕೆ ಬರುವ ಯಾತ್ರಿಕರಿಗೆ ಸಮಸ್ಯೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ದೇವಸ್ಥಾನದ ಟ್ರಸ್ಟ್ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿಕೊಡುವ ಸಲುವಾಗಿ ಯಾತ್ರಿ ನಿವಾಸ ಸೇರಿದಂತೆ ಭಕ್ತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಟ್ರಸ್ಟ್ ಸದಸ್ಯರಾದ ನಾಗರಾಜ ಸಂಗಣ್ಣನವರ 5 ಲಕ್ಷ ರೂ, ದೇಣಿಗೆ ನೀಡುವ ಮೂಲಕ ದೇವಸ್ಥಾನದಿಂದ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲು ನೆರವಾಗಿದ್ದಾರೆ.ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರಾದ ವಿನೋದಗೌಡ ಪಾಟೀಲ, ಉಪಾಧ್ಯಕ್ಷರಾದ ಶ್ರೀಧರ ನಾಡಗೌಡ ಹಾಗೂ ಪದಾಧಿಕಾರಿಗಳು ಜಂಟಿ ಹೇಳಿಕೆ ನೀಡಿ ದೇವಸ್ಥಾನಕ್ಕೆ ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಹಾಗೂ ಭಕ್ತರ ಸಂಖ್ಯೆ ದ್ವಿಗುಣವಾಗುತ್ತಿದೆ. ಆದರೆ ದೂರದ ಪ್ರದೇಶದಿಂದ ಆಗಮಿಸುವವರಿಗೆ ರಾತ್ರಿ ಉಳಿದುಕೊಳ್ಳಲು ಎಲ್ಲಿಯೂ ಯಾತ್ರಿ ನಿವಾಸ ಇಲ್ಲ. ಅಕ್ಕ ಪಕ್ಕ ವಾಸ್ತವ್ಯಕ್ಕೆ ಹೋಟೆಲ್ ವ್ಯವಸ್ಥೆಯೂ ಇಲ್ಲ. ಹೀಗಾಗಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಟ್ರಸ್ಟ್ ವತಿಯಿಂದ ಯಾತ್ರೆ ನಿವಾಸ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇಣಿಗೆ ನೀಡಿದ ಭಕ್ತರಿಗೆ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟ್ ಕಮಿಟಿಯ ಕಾರ್ಯದರ್ಶಿಯಾದ ಮಲ್ಲು ನಾಟಿಕಾರ, ಸದಸ್ಯರುಗಳಾದ ಕಾಶಿನಾಥ ತಳಕೇರಿ, ಮಲ್ಲು ಜಮಾದಾರ, ಪ್ರಕಾಶ ಮಲ್ಹಾರಿ, ರಮೇಶ ಮ್ಯಾಕೇರಿ, ರಾಜು ಮೆಟಗಾರ, ರಾವುತಪ್ಪ ದೇವರಮನಿ, ಅಪ್ಪಾಜಿ ದೇಸಾಯಿ, ಶಿವನಗೌಡ ಯರನಾಳ, ಬಾಬುಗೌಡ ಹತ್ತಳ್ಳಿ, ಬಾಬುಗೌಡ ಸೌದಿ, ನಿಂಗಪ್ಪ ಯಂಭತ್ನಾಳ, ಯಮನೂರ್ಪ ಸಣ್ಣಕ್ಕಿ, ಗಂಗಾಧರ ಬಬಲೇಶ್ವರ ಸೇರಿದಂತೆ ಪ್ರಮುಖರು, ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 