ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ?23.21 ಕೋಟಿ ರೂ ಅನುದಾನ ಮಂಜೂರಾತಿ : ಪ್ರಕಾಶ ಹುಕ್ಕೇರಿ
Rs 23.21 crore grant sanctioned in Chikkodi-Sadalaga constituency: Prakash Hukkeri
ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ?23.21 ಕೋಟಿ ರೂ ಅನುದಾನ ಮಂಜೂರಾತಿ : ಪ್ರಕಾಶ ಹುಕ್ಕೇರಿ
ಚಿಕ್ಕೋಡಿ : ಚಿಕ್ಕೋಡಿ-ಸದಲಗಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ವಿಶೇಷ ಪ್ರಯತ್ನದಿಂದ ಒಟ್ಟು 23.21 ಕೋಟಿ ರೂ ಅನುದಾನವನ್ನು ರಾಜ್ಯ ಸರ್ಕಾರದಿಂದ ಮಂಜೂರು ಮಾಡಲಾಗಿದೆ ಎಂದು ಕರ್ನಾಟಕ ದೆಹಲಿ ಪ್ರತಿನಿಧಿ ಹಾಗೂ ವಿಪ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದರು.ಈ ಕುರಿತು ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಅಯಾ ಗ್ರಾಮಸ್ಥರಿಗೆ ಅನುದಾನದ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.20.75 ಕೋಟಿ ರೂ ವೆಚ್ಚದಲ್ಲಿ ಕೇರೂರ ಗ್ರಾಮಕ್ಕೆ 110 ಕೆ.ವಿ ವಿದ್ಯುತ ವಿತರಣಾ ಕೇಂದ್ರ: ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿರುವ 33/11 ಕೆ.ವಿ ವಿದ್ಯುತ ವಿತರಣಾ ಕೇಂದ್ರವನ್ನು 110 ಕೆ.ವಿ ವಿತರಣಾ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸುವ ಯೋಜನೆಗೆ 20.75 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.ಈ ಕುರಿತು ಗ್ರಾಮಸ್ಥರ ಹಾಗೂ ರೈತರ ದೀರ್ಘಕಾಲದ ಬೇಡಿಕೆಯನ್ನು ಪರಿಗಣಿಸಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ಈಗಾಗಲೇ ಟೆಂಡರ್ ಕರೆಯಲಾಗಿದೆ. ಯೋಜನೆ ಪೂರ್ಣಗೊಂಡ ನಂತರ ಕೇರೂರ, ಕಾಡಾಪೂರ, ಜೋಡಕುರಳಿ, ಅಂಕಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರಿಗೆ ವಿದ್ಯುತ್ ಪೂರೈಕೆಯಲ್ಲಿ ಸುಗಮತೆ ಲಭಿಸಲಿದ್ದು, ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ.ಯಕ್ಸಂಬಾ ಪಟ್ಟಣ ಪಂಚಾಯತ ವ್ಯಾಪ್ತಿಯ ಚನ್ನಮ್ಮ ಸರ್ಕಲ್ ಹಿ ಅಂಜಲಿ ಟಾಕೀಸ್ ರಸ್ತೆ ಪೇವರ್ ಬ್ಲಾಕ್ ಕಾಮಗಾರಿಗೆ 1.46 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ. ಮಲಿಕವಾಡ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗೆ ಈ ಹಿಂದೆ 5 ಲಕ್ಷ ಮಂಜೂರಾಗಿದ್ದು, ಈಗ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು 30.ಲಕ್ಷ ಹೆಚ್ಚುವರಿ ಅನುದಾನ ನೀಡಿ ಒಟ್ಟು 35ಲಕ್ಷ ಮಂಜೂರಾಗಿದೆ ಎಂದರು.ಅದೇ ರೀತಿ ಇಂಗಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಸಮುದಾಯ ಭವನದ 1ನೇ ಅಂತಸ್ತಿನ ಕಾಮಗಾರಿಗೆ ಈಗ 50 ಲಕ್ಷ ಹೆಚ್ಚುವರಿ ಅನುದಾನ ನೀಡಿ ಒಟ್ಟು 1.10 ಕೋಟಿ ಮಂಜೂರಾಗಿದೆ.ಇಂಗಳಿ ಗ್ರಾಮದ ಮರಾಠ ಸಮಾಜದ ಯಾತ್ರಿನಿವಾಸ (ಸಮುದಾಯ ಭವನ) ಕಾಮಗಾರಿಗೆ ಈ ಹಿಂದೆ 50 ಲಕ್ಷ ಮಂಜೂರಾಗಿದ್ದು, ಪೇವರ್ ಬ್ಲಾಕ್ ಹಾಗೂ ಬಣ್ಣ ಕಾಮಗಾರಿಗೆ 20ಲಕ್ಷ ಹೆಚ್ಚುವರಿ ಅನುದಾನ ನೀಡಿ ಒಟ್ಟು 70 ಲಕ್ಷ ಮಂಜೂರಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ, ಮಲ್ಲಪ್ಪ ಬಾಗಿ, ವೀರೇಂದ್ರ ಪಾಟೀಲ, ವಿಠ್ಠಲ ವಾಳಕೆ, ಬಿ.ಡಿ ಪಾಟೀಲ, ಚನಗೌಡಾ ಪಾಟೀಲ, ರವಿ ಪಾಟೀಲ, ಸುರೇಶ ಬಾಡಕರ, ನಿಂಗಪ್ಪಾ ಪಾಟೀಲ, ಪ್ರಕಾಶ ಬ್ಯಾಳೆ, ಅಲಿ ಮುಲ್ಲಾ, ಮಹೇಶ ಪಾಟೀಲ, ಸಂತೋಷ ವಡ್ಡರ. ಯಕ್ಸಂಬಾ ಪ.ಪಂ ಅಧ್ಯಕ್ಷರಾದ ಸುನಿಲ ಸಪ್ತಸಾಗರ, ಉಪಾಧ್ಯಕ್ಷೆ ಸುಜಾತ ವಿನೋದ ಚಿತಳೆ, ಸದಸ್ಯರಾದ ಚಿದಾನಂದ ಬೆಳ್ಳೆ, ಮಹಾದೇವ ಮಾಳಗೆ, ಉಮೇಶ ಸಾತ್ವರ, ಶಿವಗೌಡಾ ಬಾವಚೆ, ಮತ್ತಿತರರು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.ಪೋಟೋ: ಚಿಕ್ಕೋಡಿ: ಕೇರೂರ ಗ್ರಾಮದ ಅಭಿವೃದ್ಧಿಗೆ ಮಂಜೂರಾದ ಆದೇಶ ಪತ್ರವನ್ನು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹಸ್ತಾಂತರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 