ಬೆಂಗಳೂರು, ಅ 11: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಸುರಿದ ಮಳೆ, ಪ್ರವಾಹದಿಂದ ರಾಜ್ಯದಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಶಾಲಾ ಕಟ್ಟಡಗಳಿಗೆ ಹಾನಿಯಾಗಿದ್ದು ಇವುಗಳ ದುರಸ್ತಿಗೆ 500 ,ಕೋಟಿ ಪರಿಹಾರ ಬಿಡುಗಡೆಮಾಡಬೇಕೆಂದು ಶಿಕ್ಷಣ ಸಚಿವರು ಮನವಿ ಮಾಡಿದ್ದು, ಸರಕಾರ ಮೊದಲಕಂತಿನಲ್ಲಿ 150 ಕೋಟರೂಪಾಯಿ ಬಿಡುಗಡೆ ಮಾಡಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ ಮಾದುಸ್ವಾಮಿ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಅತಿವೃಷ್ಟಿ ಕುರಿತ ಚರ್ಚೆಯಲ್ಲಿ ಮಧ್ಯಪ್ರವೇಶ ಮಾಡಿ ಮಾತನಾಡಿದ ಅವರು, ಸಚಿವರ ಮನವಿ ಮೇರೆಗೆ ಮೊದಲ ಕಂತಿನಲ್ಲಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರಕಾರಕ್ಕೆ ಯಾವುದೇ ಹೆದರಿಕೆಯಿಲ್ಲ. ಜಿಲ್ಲಾಡಳಿತದ ಮನವಿ ಮೇರೆಗೆ ಪರಿಹಾರ ಕಾರ್ಯಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅಧಿವೇಶನವನ್ನು ಅಲ್ಲಿ ನಡೆಸಲು ಹೋಗಿಲ್ಲ ಎಂದು ಸಚಿವರು ಸ್ಪಷ್ಪಪಡಿಸಿದರು. ಜನತೆ ಕೋಪಕ್ಕೆ ಹೆದರಿ ಪಲಾಯನ ಮಾಡಲಾಗಿದೆ ಎಂಬ ವಾದದಲ್ಲಿ ಯಾವ ಹುರುಳಿಲ್ಲ ಎಂದು ಸಚಿವರು ಹೇಳಿದರು.