ಹಿರಿಯ ನಾಗರಿಕರಿಗೆ 1000 ರೂ ವಿಧವಾ ವೇತನ ಕಾರ್ಯಕ್ರಮ
Rs 1000 widow pension program for senior citizens
ಹೊಸಪೇಟೆ 17: ಇಂದು ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ (ರಿ) ಕಮಿಟಿಯ ವತಿಯಿಂದ ಮುಸ್ಲಿಂ ಸಮಾಜದ 100 ಮಹಿಳಾ ವಿಧವಾ ಹಾಗೂ ಹಿರಿಯ ನಾಗರಿಕರಿಗೆ 1000 ರೂ ವಿಧವಾ ವೇತನವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಹೆಚ್. ಎನ್. ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯು ಹಲವಾರು ಜನಪರ ಕಾರ್ಯಕ್ಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಅದರಲ್ಲೂ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ.
ಆರ್ಥಿಕವಾಗಿ ದುರ್ಬಲವಾದ ಕುಟುಂಬಗಳಿಗೆ ಹೊರೆ ಯಾಗದಂತೆ ಹಾಗೂ ಪ್ರತಿಯೊಂದು ಜಾತಿ ಜನಾಂಗದವರೆಗೂ ಅತ್ಯಂತ ಕಡಿಮೆ ರಿಯಾಯಿತಿ ದರದಲ್ಲಿ ಅಂಜುಮನ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನಮ್ಮ ಸಂಸ್ಥೆ ವತಿಯಿಂದ ನೀಡುತ್ತಿದ್ದೇವೆ. ಈ ಒಂದು ಅಂಜುಮನ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ದರ, ರಕ್ತ ಪರೀಕ್ಷೆ, ಓಷಧ ಇತ್ಯಾದಿಗಳನ್ನು ಸಹ ಅತ್ಯಂತ ಕಡಿಮೆ ರಿಯಾಯಿತಿ ದರದಲ್ಲಿ ಸೌಲಭ್ಯಗಳನ್ನು ಒದಗಿಸುತ್ತಿರುತ್ತೇವೆ. ಅಂಜುಮನ್ ಸಂಸ್ಥೆಯ ಟೈಲರಿಂಗ್ ತರಬೇತಿ ಸೆಂಟರ್, ಉಚಿತ ಕಂಪ್ಯೂಟರ್ ತರಬೇತಿ ಕೇಂದ್ರ, ಮತ್ತು ಸಿ ಎಸ್ ಸಿ ಸೆಂಟರ್ ಇನ್ನು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಿಶೇಷವಾಗಿ ಯುವಜನತೆ ಹಾಗು ವರ್ಗದ ಜನರು ಎಲ್ಲಾ ಸಮುದಾಯದವರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು
ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಹೆಚ್. ಎನ್. ಮೊಹಮ್ಮದ್ ಇಮಾಮ್ ನಿಯಾಜಿ ರವರು ಹಾಗೂ ಕಮಿಟಿಯ ಪದಾಧಿಕಾರಿಗಳು ವಿಧವಾ ವೇತನವನ್ನು ವಿತರಿಸಿದರು
ಇದೇ ಸಂಧರ್ಭದಲ್ಲಿ ಅಂಜುಮನ್ ಕಮಿಟಿಯ ಪದಾಧಿಕಾರಿಗಳಾದ ಅನ್ಸರ್ ಭಾಷ. ಎಮ್. ಫೈರೋಜ್ ಖಾನ್. ಡಾ. ದುರ್ವೇಶ್ ಮುಯೂದ್ದೀನ್ ಅವರು ಹಾಗೂ ಸದ್ಯಸರಾದ ಮೊಹಮ್ಮದ್ ಮೋಸಿನ್ ಸದ್ದಮ್ ಹುಸೇನ್ ಉಪಸ್ಥಿತರಿದ್ದರು
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 