ಮೆಡ್ಲೇರಿ ಗ್ರಾಪಂನಲ್ಲಿ 1ಕೋಟಿ ರೂ. ಅವ್ಯವಹಾರ; ತನಿಖೆಗೆ ಅಗ್ರಹಿಸಿ ಪ್ರತಿಭಟನೆಗೆ ನಿರ್ಧಾರ- ಡಿಳ್ಳೇಪ್ಪ ಅಣ್ಣೀರ

Rs 1 crore misappropriation in Medleri Gram; Decision to protest demanding investigation - Dilleppa

ಮೆಡ್ಲೇರಿ ಗ್ರಾಪಂನಲ್ಲಿ 1ಕೋಟಿ ರೂ. ಅವ್ಯವಹಾರ; ತನಿಖೆಗೆ ಅಗ್ರಹಿಸಿ ಪ್ರತಿಭಟನೆಗೆ ನಿರ್ಧಾರ- ಡಿಳ್ಳೇಪ್ಪ ಅಣ್ಣೀರ

ರಾಣೇಬೆನ್ನೂರ  15:  ತಾಲೂಕಿನ ಮೆಡ್ಲೇರಿಗ್ರಾಪಂದಲ್ಲಿ 1-1-2020 ರಿಂದ  9-4-2025 ರ ವರೆಗೆ 14ನೇ ಹಣಕಾಸು ಹಾಗೂ 15ನೇ ಹಣಕಾಸು ಮತ್ತುಎನ್‌.ಆರ್‌.ಇ.ಜಿ. ಮತ್ತು ನಿಧಿ-1 ಹಾಗೂ ಇತರೆ ಖಾತೆಗಳಲ್ಲಿ ಗ್ರಾಮ ಪಂಚಾಯತಿಅಧ್ಯಕ್ಷರು, ಸದಸ್ಯರು ಅಧಿಕಾರ ದುರುಪಯೋಗ ಮಾಡಿಕೊಂಡು ಸುಮಾರು 1 ಕೋಟಿ ರೂ.ಗಳನ್ನು ಅವ್ಯವಹಾರ ಮಾಡಿದ್ದಾರೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಡಿಳ್ಳೆಪ್ಪ ಸಿ ಅಣ್ಣೇರ ಗಂಭೀರವಾಗಿ ಆರೋಪಿಸಿದರು. ಅವರು ಶುಕ್ರವಾರ ನಡೆದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.   ಈ ಕುರಿತುರಾಜ್ಯ ಮಟ್ಟದ ಲೆಕ್ಕ ಪರಿಶೋಧಕರ ತಂಡದಿಂದ ತನಿಖೆ ಕೈಗೊಳ್ಳಬೇಕು. ಇಲ್ಲವಾದರೆ ಮೇ 10 ರಂದು ಹಾವೇರಿ ಜಿಲ್ಲಾ ಪಂಚಾಯತಿ ಕಛೇರಿ ಎದುರು ಅಮರಣಾಂತಿಕ ಉಪವಾಸ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.ಇದೇ ಎ.1ರಿಂದ ಕೆಲ ಗ್ರಾಮ ಪಂಚಾಯತಿ ಸದಸ್ಯರು, ದೆಹಲಿ, ಜಮ್ಮು ಕಾಶ್ಮೀರ, ಅರುಣಾಚಲ ಪ್ರದೇಶ, ಪಂಜಾಬ್, ಗುಜರಾತ್ ಇತರೇ ರಾಜ್ಯಗಳಲ್ಲಿ ವಿಮಾನ ಪ್ರಯಾಣ ಮಾಡುತ್ತಿದ್ದು ,ಗ್ರಾಮ ಪಂಚಾಯತಿಯಲ್ಲಿ 15ನೇ ಹಣಕಾಸು ಕಾಮಗಾರಿಗಳು ಮಾಡದೇ ಕೇವಲ ಪೋಟೊ ಮತ್ತು ಖೊಟ್ಟಿ ಬಿಲ್ ತಯಾರಿಸಿ ಸರಿ ಸುಮಾರು ರೂ. 10ಲಕ್ಷ ರೂಪಾಯಿ ಸರ್ಕಾರಿ ಹಣ ದುರುಪಯೋಗಪಡಿಸಿ ತಮ್ಮ ಸ್ವಂತ ಪ್ರವಾಸ ಖರ್ಚಿಗೆ ಅಧ್ಯಕ್ಷರನ್ನು ಒಳಗೊಂಡು ಪ್ರಯಾಣಕೈಗೊಂಡಿದ್ದಾರೆ ಎಂದವರು ಅಪಾದಿಸಿದರು. ಜೆ.ಜೆ.ಎ. ಕುಡಿಯುವ ನೀರಿನ ಯೋಜನೆಯು ಸುಮಾರು 5.00 ಕೋಟಿ ಅಂದಾಜು ಪತ್ರಿಕೆ ಇದ್ದು, ಕಾಮಗಾರಿ ಮುಗಿಯದೇ ಹಲವಾರು ಕಡೆ ನೀರಿನ ತೊಂದರೆ ಇದ್ದು, ಜನರು ಪಂಚಾಯತಿಗೆ ಬಂದು ಗಲಾಟೆ ಮಾಡುತ್ತಿದ್ದು, ಅಧ್ಯಕ್ಷರು, ಸದಸ್ಯರು ಕಂಟ್ರಾಕ್ಟರ ಜೊತೆಗೆ ಶಾಮಿಲಾಗಿ ಕೆಲಸ ಮುಗಿಯದೇ ಸುಮಾರು 10 ಲಕ್ಷ ಪಂಚಾಯತಿಗೆ ಹ್ಯಾಂಡ್‌ಒವರ್ ಮಾಡಿಕೊಂಡಿರುತ್ತಾರೆಂದು ಆರೋಪಿಸಿದರು. ನಿಧಿ.1 ತೆರಿಗೆ ವಸೂಲಿಮಾಡಿ ಹಲವಾರು ಕೊಟ್ಟಿ ಬಿಲ್ ತಯಾರಿಸಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಮಾಡಿಕೊಂಡಿರುತ್ತಾರೆ. ಮತ್ತುಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಜಿಯೋಟಾವರ್ ನಿರ್ಮಾಣಗೊಂಡಿದ್ದಾರೆ.ಕಾಮಗಾರಿ ಕೇಬಲ್ ಹಾಕುವಾಗ ಪಂಚಾಯತಿ ವ್ಯಾಪ್ತಿಯಕುಡಿಯುವ ನೀರಿನ ವ್ಯವಸ್ಥೆ ಹಾಳಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯರು ಜಿಯೋಟಾವರನೊಂದಿಗೆ 10 ಲಕ್ಷ ರೂಗಳಿಗೆ ರಾಜಿ ಮಾಡಿಕೊಂಡು ಹಣ ಪಡೆದಿದ್ದಾರೆ ಎಂದು ಅವರು ಅಪಾದಿಸಿದರು.  ಈ ಬಗ್ಗೆ ಯಾವುದೇ ಕಾಮಗಾರಿ ನಡೆದಿರುವುದಿಲ್ಲ. ಕೇವಲ ಕಾಗದ ಪತ್ರಗಳಲ್ಲಿ ಪೊಟೊ ತೋರಿಸಿ ಕೊಟ್ಯಾಂತರ ರೂಪಾಯಿ ಬಿಲ್ ಹಾಕಿ ಸರ್ಕಾರಕ್ಕೆ ಸಾರ್ವಜನಿಕರಿಗೆ, ರೈತರಿಗೆ, ಮಹಿಳೆಯರಿಗೆ, ಎಸ್‌.ಸಿ, ಎಸ್‌.ಟಿ. ಫಲಾನುಭವಿಗಳಿಗೆ ಮೋಸ ಮಾಡಿರುತ್ತಾರೆ.ಈ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ಮುಖ್ಯಮಂತ್ರಿ, ಸಚಿವ ಪ್ರೀಯಾಂಕಖರ್ಗೆ, ಶಿವಾನಂದ ಪಾಟೀಲ ಸೇರಿಇತರರಿಗೆ ಮಾಹಿತಿ ರವಾನಿಸಿದ್ದು, ಶೀಘ್ರವೇ ಲೋಕಾಯುಕ್ತಕ್ಕೆ ದೂರು ದಾಖಲಿಸುವುದಾಗಿ ಡಿಳ್ಳೆಪ್ಪ ಹೇಳಿದರು.