ಕುಡಿಯುವ ನೀರಿನ ಯೋಜನೆಗೆ ರೂ. 8.40 ಕೋಟಿ ಕಾಮಗಾರಿಗೆ ಚಾಲನೆ
Rs. 8.40 crore work for drinking water project launched
ಚಿಕ್ಕೋಡಿ 29: ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ನಿರ್ಮಿಸುವುದು ನಮ್ಮ ಮೊದಲ ಆದ್ಯತೆ. ಕುಠಾಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಬೇಸಿಗೆಯಲ್ಲಿಯೂ ನೀರು ಕೊರತೆ ಆಗದಂತೆ ಈ ಯೋಜನೆಯು ದೊಡ್ಡ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಹೇಳಿದರು.
ಚಿಕ್ಕೋಡಿ ಹಿಸದಲಗಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕುಠಾಳಿ, ನವಲಿಹಾಳ, ಸಂಕನವಾಡಿ ಹಾಗೂ ತಪಕರವಾಡಿ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ನಿವಾರಣೆಗಾಗಿ ರೂ. 8.40 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ಈ ಹಿಂದೆ ಖಡಕಲಾಟ ಬಹು ಗ್ರಾಮಗಳ ಯೋಜನೆಯ ವ್ಯಾಪ್ತಿಯಲ್ಲಿ ಈ ನಾಲ್ಕು ಗ್ರಾಮಗಳು ಸೇರಿದ್ದರೂ, ಸಮರ್ಕ ನೀರು ಪೂರೈಕೆ ಆಗದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ನಾನು ಮತ್ತು ಶಾಸಕರಾದ ಗಣೇಶ ಹುಕ್ಕೇರಿ ಅವರ ಪ್ರಯತ್ನದ ಫಲವಾಗಿ ಸರ್ಕಾರದಿಂದ ಅನುದಾನ ಮಂಜೂರಾತಿ ದೊರೆತಿದೆ ಎಂದರು.ಈ ಯೋಜನೆಯಡಿ ಬೇಡಕಿಹಾಳ ಗ್ರಾಮದ ಹತ್ತಿರದ ದೂಧಗಂಗಾ ನದಿ ಮೂಲದಿಂದ ಸುಮಾರು 14.5 ಕಿ.ಮೀ ದೂರದವರೆಗೆ 150 ಎಮ್.ಎಮ್ ವ್ಯಾಸದ ಡಿ.ಐ. ಪೈಪ್ ಅಳವಡಿಕೆ, 5 ಎಚ್.ಪಿ ವ್ಯಾಸದ 2 ಪ್ರೇಶರ್ ಫಿಲ್ಟರ್, 28 ಎಚ್.ಪಿ. 2 ಹಾಗೂ 45 ಎಚ್.ಪಿ. 2 ಮೋಟಾರ್ ಪಂಪ್‌ಸೆಟ್‌ಗಳನ್ನು ಜಾಕ್‌ವೆಲ್ ಮತ್ತು ಕ್ಲೋರ್‌ಟ್ರೀಟ್‌ಮೆಂಟ್ ಪ್ಲಾಂಟ್‌ನಲ್ಲಿ ಅಳವಡಿಸುವ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. ಯೋಜನೆ ಪೂರ್ಣಗೊಂಡ ಬಳಿಕ ಕುಠಾಳಿ, ನವಲಿಹಾಳ, ಸಂಕನವಾಡಿ ಹಾಗೂ ತಪಕರವಾಡಿ ಗ್ರಾಮಗಳಿಗೆ ಬೇಸಿಗೆಯಲ್ಲಿಯೂ ನಿರಂತರವಾಗಿ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನವಲಿಹಾಳ ಗ್ರಾಮದ ಮುಖಂಡರಾದ ಜಯರಾಮರಾವ ಘೋರೆ್ಡ ಸರಕಾರ, ರಾಕೇಶ್ ಚಿಂಚಣೆ, ಸತೀಶ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಚಿನ್ ಹುಕ್ಕೇರಿ, ಮನೋಹರ ವಾಘಮೋಡೆ, ಮಾರುತಿ ಕೌಲಾಪೂರೆ, ಕಲಗೌಡಾ ಪಾಟೀಲ, ರಾಜು ಢಂಗ, ಬಾಳಗೌಡಾ ಜಯಪ್ಪಗೋಳ, ಶಿವಗೌಡಾ ಪಾಟೀಲ, ತಾತ್ಯಾಸಾಬ ಪಾಟೀಲ, ಲಗಮಣ್ಣಾ ಖೋತ, ಅಪ್ಪಾಸಾಬ ಖಡ್ಡ, ಬಾಳಗೌಡಾ ಧೆಮನ್ನವರ, ತಮ್ಮಣ್ಣಾ ತೋಡಕರ, ದಿಲಾವರ ಪಠಾಣ, ಅಶೋಕರ ಘೋರೆ್ಡ, ರಾಮಾ ವಾಘಮೋಡೆ, ರಸುಲ ಪಠಾಣ, ಉಮರ ಪಠಾಣ, ಅಶೋಕ ಕಾಮಗೌಡಾ, ವರ್ಧಮಾಣ ಹುವನ್ನವರ ಸೇರಿದಂತೆ ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 