‘ರಾಯಲ್'ನಿಂದ ಬಂತು ರಾಯಲ್ ಆದ ಟ್ರೇಲರ್

Royal trailer came from 'Royal'

ಜಯಣ್ಣ - ಭೋಗೇಂದ್ರ ನಿರ್ಮಾಣದ ಈ ಚಿತ್ರ ಜ. 24ರಂದು ತೆರೆಗೆ 

ಜಯಣ್ಣ ಫಿಲಂಸ್ ಬ್ಯಾನರ್‌ನಲ್ಲಿ ಜಯಣ್ಣ-ಭೋಗೇಂದ್ರ ಅದ್ದೂರಿಯಾಗಿ ನಿರ್ಮಾಣ ಮಾಡಿರುವ ‘ರಾಯಲ್‌’ ಚಿತ್ರ ಇದೇ ಜನವರಿ 24ರಂದು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಹಾಗಾಗಿ ನಿನ್ನೆಯಷ್ಟೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಜಾಲತಾಣದಲ್ಲಿ ಪ್ರಶಂಸೆ ಪಡೆಯುತ್ತಿದೆ. ‘ಕಿಸ್‌’ ಖ್ಯಾತಿಯ ವಿರಾಟ್ ಹಾಗೂ ಸಂಜನಾ ಆನಂದ್ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರವನ್ನು ದಿನಕರ್ ತೂಗುದೀಪ್ ನಿರ್ದೇಶನ ಮಾಡಿದ್ದಾರೆ. ‘ರಾಯಲ್‌’ ಆಗಿಯೇ ತಯಾರಾಗಿರುವ ಈ ಚಿತ್ರ ರಾಯಲ್ ಆಗಿಯೇ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಹಾಡುಗಳು ರೀಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿವೆ.  

ಸಿನಿಮಾ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ದಿನಕರ್ ತೂಗುದೀಪ್ ‘ನಾವಿಗ ಚಿತ್ರದ ಎಲ್ಲ ಕೆಲಸಗಳನ್ನು ಮುಗಿಸಿ ರೀಲೀಸ್‌ಗೆ ಸಿದ್ಧವಾಗಿದ್ದೇವೆ. ಈಗಾಗಲೇ ನಮ್ಮ ಸಾಂಗ್‌ಗೆ ಒಳ್ಳೆಯ ರೆಸ್ಪಾನ್ಸ್‌ ಬರತಾ ಇದೆ. ಚಿತ್ರಕ್ಕೆ ರಘು ನಿಡುವಳ್ಳಿ ಕಥೆ, ಸಂಭಾಷಣೆ ಬರೆದಿದ್ದಾರೆ. ಚರಣ್ ರಾಜ್ ಸಂಗೀತದ ಚಿಕ್ಕ ಝಲಕ್ ಸಾಂಗ್‌ಗಳಲ್ಲಿ ಇದ್ದು, ಹೆಚ್ಚಿನದನ್ನು ಸಿನಿಮಾದಲ್ಲಿ ನೋಡಬಹುದು. ಈ ಚಿತ್ರವನ್ನು ನಿರ್ಮಾಪಕರು ಇಂಡಸ್ಟ್ರಿಗೆ ಒಬ್ಬ ಒಳ್ಳೆಯ ಹೀರೋನನ್ನು ಕೊಡಬೇಕು ಎಂಬ ದೃಷ್ಠಿಯಿಂದ ನಿರ್ಮಾಣ ಮಾಡಿದ್ದಾರೆ. ನಾನು ಈ ಮೊದಲು ಜಯಣ್ಣ ಅವರ ಬ್ಯಾನರ್‌ನಲ್ಲಿ ಪುನೀತ್ ಜೊತೆ ಸಿನಿಮಾ ಮಾಡುವ ಪ್ಲ್ಯಾನ್ ಇತ್ತು. ಅದು ಆಗಿರಲಿಲ್ಲ. ಇದೀಗ ಜಯಣ್ಣ ವಿರಾಟ್‌ಗೆ ಸಿನಿಮಾ ಮಾಡುವ ಅವಕಾಶ ಕೊಟ್ಟರು. ‘ರಾಯಲ್‌’ಗಾಗಿ ಗೋವಾ, ಮಂಗಳೂರು, ಬೆಂಗಳೂರು ಮುಂತಾದ ಕಡೆ ಶೂಟಿಂಗ್ ಮಾಡಲಾಗಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ’ ಎಂದು ಹೇಳಿದ್ದಾರೆ.