ಜೂ.29ರಂದು ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ
Rotary Club's new office bearers to be sworn in on June 29
ಜಮಖಂಡಿ 27: ರೋಟರಿ ಕ್ಲಬ್ ಮತ್ತು ಇನ್ನರವ್ಹೀಲ್ ಸಂಸ್ಥೆಯ 2025-26 ನೇ ಸಾಲಿಗೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜೂ.29 ಭಾನುವಾರ ನಗರದ ಮುತ್ತೂರು ರಸ್ತೆಯ ಪಂಚಮಸಾಲಿ ಸಮುದಾಯ ಭವನದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಅಸಿಸ್ಟಂಟ್ ಗೌರನ್ನರ್ ಆರ್,ಪಿ, ನ್ಯಾಮಗೌಡ ಹೇಳಿದರು.
ನಗರದ ವಿಜಯಪೂರ ರಸ್ತೆಯ ಬಳಿ ಇರುವ ರೋಟರಿ ಸಂಸ್ಥೆಯ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರಿಯಾಗಿ ಬೆಳಗಾವಿಯ ಪಿಡಿಜಿ ಆನಂದ ಕುಲಕರ್ಣಿ, ಸಿಇಒ ಬಿಮ್ಸ ಬೆಳಗಾವಿಯ ಡಾ,ಸಿದ್ದು ಹುಲ್ಲೊಳಿ, ಡಾ,ರಾಜಶ್ರೀ ಕುಲಕರ್ಣಿ ಭಾಗವಹಿಸಲಿದ್ದಾರೆ ಎಂದರು.
2025-26 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ರಾಜಶೇಖರ ಕೂವಳ್ಳಿ, ಕಾರ್ಯದರ್ಶಿಯಾಗಿ ಎಂ,ಎಚ್,ಕಡ್ಲಿಮಟ್ಟಿ, ಇನ್ನರ್‌ವ್ಹಿಲ್ ಅಧ್ಯಕ್ಷರಾಗಿ ಗಿರಿಜಾ ಮೈತ್ರಿ, ಕಾರ್ಯದರ್ಶಿ ಮೇಘಾ ಮಾಹಬಳಶೆಟ್ಟಿ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ. ರೋಟರಿ ಸೇವಾ ಸಂಸ್ಥೆಯು ಪ್ರತಿವರ್ಷ ಅನೇಕ ಸಮಾಜ ಮುಖಿಯಾಗಿ ನಿಸ್ವಾರ್ಥ ಸೇವೆಗಳನ್ನು ಮಾಡುತ್ತಾ ಬಂದಿದೆ. ಬರುವ ವರ್ಷದಲ್ಲಿಯೂ ತನ್ನ ಸೇವಾ ಕಾರ್ಯವನ್ನು ಮುಂದುವರಿಸುತ್ತಿರುತ್ತದೆ ಎಂದರು.
ಅಧ್ಯಕ್ಷ ಕಿರಣ ಕುಮಾರ ದೇಸಾಯಿ ಮಾತನಾಡಿ, ತಮ್ಮ ಅವಧಿಯಲ್ಲಿ ಕಡಪಟ್ಟಿ ಕ್ರಾಸ್‌ಬಳಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಡಯಾಲಿಸಸ್ ಕೇಂದ್ರ, ಆರೋಗ್ಯ ಶಿಬಿರಗಳು, ರಕ್ತ ತಪಾಸಣಾ ಶಿಬಿರಗಳನ್ನು ಏರಿ್ಡಸಲಾಗಿತ್ತು. ಎಲ್ಲರ ಸಹಕಾರದಿಂದ ಒಂದು ವರ್ಷದ ಅವಧಿ ಮುಕ್ತಾಯಗೊಂಡಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ರಾಜಶೇಖರ ಕೂವಳ್ಳಿ ಮಾತನಾಡಿ, ಬನಶಂಕರಿ ಗಂಡು ಮಕ್ಕಳ ಶಾಲೆಯ ದತ್ತು ಪಡೆದುಕೊಂಡು ಅಲ್ಲಿನ ಮೂಲಭೂತ ಸೌಲಭ್ಯಗಳನ್ನು ಹಾಗೂ ಶಾಲೆಯ ನವೀಕರಣವನ್ನು ಮಾಡುವದು. ಮತ್ತು ಡಾ, ಬಿ,ಆರ್, ಅಂಬೇಡ್ಕರ್ ಸರ್ಕಲ್‌ನಲ್ಲಿನ ಬಸ್‌ನಿಲ್ದಾದವನ್ನು ನವೀಕರಣ ಮಾಡಲಾಗುತ್ತದೆ. ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ಕಾರ್ಯಕ್ರಮ ಸೇರಿದಂತೆ ಇನ್ನೂಅನೇಕ ಸಮಾಜ ಮುಖಿ ಕೆಲಸಗಳನ್ನು ಮಾಡುವ ಗುರಿಯನ್ನು ಹೊಂದಿದೆ ಎಂದರು.
ಇದೇ ಸಂದರ್ಭದಲ್ಲಿ ಗಿರಿಜಾ ಮೈತ್ರಿ ಮಾತನಾಡಿದರು. ರೋಟರಿ ಹಾಗೂ ಇನ್ನರ್‌ವೇಲ್ ಸಂಸ್ಥೆಯ ಸದಸ್ಯರು ಮತ್ತು ಪದಾಧಿಕಾರಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 