ಅಂಡರ್ಸನ್ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡ ರೂಟ್

ಬರ್ಮಿಗ್ಹ್ಯಾಮ್, ಆ 6     ಹಿರಿಯ ವೇಗಿ ಜೇಮ್ಸ್ ಅಂಡರ್ಸನ್ ಅವರನ್ನು ಮೊದಲನೇ ಪಂದ್ಯ ಆಡಿಸುವ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಮೂಲಕ ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ಬೌಲರ್ಗಳ ಫಿಟ್ನೆಸ್ ಬಗ್ಗೆ ಎದ್ದಿದ್ದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು.  

   ಕೌಂಟಿ ಆಡುತ್ತಿದ್ದ ವೇಳೆ ಗಾಯಕ್ಕೆ ಒಳಗಾಗಿದ್ದ 37ರ ಪ್ರಾಯದ ಜೇಮ್ಸ್ ಅಂಡರ್ಸನ್ ಅವರು ಆ್ಯಶಸ್ ಆರಂಭವಾಗುವುದಕ್ಕೂ ಮುನ್ನ ಲಭ್ಯರಿರಲಿಲ್ಲ. ಆದರೆ, ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಪರಿಗಣಿಸಲಾಗಿತ್ತು. ಅದರಂತೆ, ಪ್ರಥಮ ಇನಿಂಗ್ಸ್ನಲ್ಲಿ ಕೇವಲ ನಾಲ್ಕು ಓವರ್ ಮಾತ್ರ ಬೌಲಿಂಗ್ ಮಾಡಿದ್ದರು. ನಂತರ ಗಾಯಕ್ಕೆ ಒಳಗಾಗಿ ಅಂಗಳದಿಂದ ಹೊರ ನಡೆದರು. ಇವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಬೌಲಿಂಗ್ ವಿಭಾಗ ಆಸ್ಟ್ರೇಲಿಯಾ ವಿರುದ್ಧ ವೈಫಲ್ಯತೆ ಅನುಭವಿಸಿತ್ತು. 251 ರನ್ ಭಾರಿ ಅಂತರದಲ್ಲಿ ಸೋಲು ಅನುಭವಿಸಿತ್ತು.  

    ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದ ನಾಯಕ ರೂಟ್, " ಅಂಡರ್ಸನ್ ಅವರು ಎಲ್ಲ ವೈದ್ಯಕೀಯ ಟೆಸ್ಟ್ಗಳನ್ನು ಉತ್ತೀರ್ಣರಾಗಿದ್ದು, ಆಡಲು ಸೂಕ್ತರಾಗಿದ್ದರು. ಆದರೆ, ಮೊದಲು ನಾಲ್ಕು ಓವರ್ ಬಳಿಕ ಅವರು ಅದೇ ಭಾಗದಲ್ಲಿ ನೋವು ಕಾಣಿಸಿಕೊಂಡಿರಬಹುದು. ಅದೇ ಭಾಗದಲ್ಲಿ ಗಾಯವಾಗಿರಬಹುದು ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಸ್ಕ್ಯಾನ್ ವರದಿಗಳು ಬರುವ ತನಕ ಈ ಬಗ್ಗೆ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

   "ಹಿಂದಿನದನ್ನು ಮತ್ತೇ ನೋಡುವುದು ಮತ್ತು ತಾವು ಪ್ರಕ್ರಿಯೆಗಳನ್ನು ವಿಭಿನ್ನವಾಗಿ ಪೂರ್ಣಗೊಳಿಸಿರಬಹುದು ಎಂದು ಹೇಳುವುದು ಸುಲಭದ ವಿಷಯ. ಆದರೆ, ತಾನು ಹೇಳಿದಂತೆ ಅವರು (ಅಂಡರ್ಸನ್) ಎಲ್ಲಾ ಟೆಸ್ಟ್ಗಳಲ್ಲಿ ಉತ್ತೀರ್ಣರಾಗಿದ್ದರು ಮತ್ತು ಅವರು ಆಡಿಸಿದ್ದು ಸರ್ವಾನುಮತದ ನಿರ್ಧಾರ" ಎಂದು ಅವರು ಹೇಳಿಕೊಂಡರು.  

ಜೇಮ್ಸ್ ಅಂಡರ್ಸನ್ ಅವರು ಇಂಗ್ಲೆಂಡ್ ತಂಡದ ಅತ್ಯಂತ ಮೌಲ್ಯಯುತ ಆಟಗಾರರಾಗಿದ್ದಾರೆ. ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಅವರು 575 ವಿಕೆಟ್ ಉರುಳಿಸಿದ್ದಾರೆ. ಅಲ್ಲದೇ, ಕೆಲವು ಕ್ಲಿಷ್ಟ ಸನ್ನಿವೇಶಗಳಲ್ಲಿಯೂ ಬ್ಯಾಟಿಂಗ್ನಲ್ಲೂ ಗಮನ ಸೆಳೆದಿದ್ದಾರೆ. ಆದರೆ, ಅವರು ಈ ವಾರ ನಡೆಯುವ ಎರಡನೇ ಟೆಸ್ಟ್ ಪಂದ್ಯವಾಡುವ ಕುರಿತು ಯಾವುದೇ ಸ್ಪಷ್ಟತೆ ಇನ್ನೂ ಇಲ್ಲ. ಒಂದು ವೇಳೆ ಅವರು ಸಂಪೂರ್ಣ ಫಿಟ್ ಇಲ್ಲದೇ ಹೋದಲ್ಲಿ ಅವರ ಸ್ಥಾನಕ್ಕೆ ಜೊಫ್ರಾ ಆರ್ಚರ್ಗೆ ಸ್ಥಾನ ಕಲ್ಪಿಸಲಾಗುತ್ತದೆ ಎಂದು ಸ್ಪಷಪಡಿಸಿದರು.  

   ಆರ್ಚರ್ ಅವರು ಇತ್ತೀಚೆಗೆ ಮುಕ್ತಾಯವಾಗಿರುವ ಐಇಸಿ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.  

"ನಾವು ಮುಂದಿನ ಪಂದ್ಯವನ್ನು ಹೇಗೆ ನಿಭಾಯಿಸಬೇಕು ಮತ್ತು ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಗ್ಗೆ ನಾವು ಸ್ಪಷ್ಟವಾಗಿ ತಿಳಿದುಕೊಂಡಿದ್ದೇವೆ. ನಾವು ಆಯ್ಕೆ ಫಲಕದ ಅನುಸಾರ ತಂಡವನ್ನು ಆಯ್ಕೆ ಮಾಡುತ್ತೇವೆ." ಎಂದು ತಿಳಿಸಿದರು.