ಯೋಜನೆಗಳ ಯಶಸ್ವಿಗೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ : ಶಾಸಕ ಪಠಾಣ

ಯೋಜನೆಗಳ ಯಶಸ್ವಿಗೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ : ಶಾಸಕ ಪಠಾಣ Role of officials is crucial for the success of projects: MLA Pathana

ಶಿಗ್ಗಾವಿ 22: ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಹಂಚಿ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಈ ಯೋಜನೆಗಳ ಯಶಸ್ವಿಗೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಯಾಸೀರಖಾನ್‌ ಪಠಾಣ ಹೇಳಿದರು.  ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರೀಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮುಖ್ಯಮಂತ್ರಿಗಳು ಕ್ಷೇತ್ರದ ಗ್ಯಾರೆಂಟಿ ಯೋಜನೆಗಾಗಿ 500 ಕೋಟಿ ಅನುದಾನ ಬಿಡುಗಡೆ ಕಳಿಸಿದ್ದು, ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳು ಕ್ಷೇತ್ರದಲ್ಲಿ 97ಅ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಉಳಿದು ಉಳಿದ ಮೂರು ಪ್ರತಿಶತ ಅನುಷ್ಠಾನಕ್ಕೆ ಇರುವ ನೂನ್ಯತೆಗಳನ್ನು ಅಧಿಕಾರಿಗಳು ಪರೀಶೀಲಿಸಿ ಶೀಘ್ರದಲ್ಲಿಯೇ ನೂರಕ್ಕೆ ನೂರರಷ್ಟು ಸಾಧನೆಗೆ ಮುಂದಾಗ ಬೇಕೆಂದು ಹೇಳಿದರು.ಕ್ಷೇತ್ರದಲ್ಲಿ ಪಡಿತರ ವಿತರಣೆಯ ಸಮಸ್ಯೆ ಹೆಚ್ಚಾಗಿ ಕೇಳಿ ಬರುತ್ತಿದ್ದು, ಪಡಿತರ ವಿತರಕರು ಸಮಸ್ಯೆಯನ್ನು ಅರಿತು ಫಲಾನುಭವಿಗಳನ್ನು ಕಾಯಿಸದೆ ಪಡಿತರ ವಿತರಣೆ ಮಾಡಬೇಕು.

ತಾಲೂಕಿನಲ್ಲಿ 51 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳಿದ್ದು, ಕೇವಲ 69 ಪಡಿತರ ವಿತರಣೆ ಅಂಗಡಿಗಳಿವೆ, 500 ಪಡಿತರ ಚೀಟಿಗೆ ಒಂದು ಅಂಗಡಿಯಂತೆ ಹೆಚ್ಚುವರಿ ಅಂಗಡಿಗಳನ್ನು ತೆರೆಯಲು ಚಿಂತನೆ ನಡೆಸಿದ್ದು, ಈಗಿರುವ ಪಡಿತರ ವಿತರಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಪಡಿತರ ವಿತರಣೆ ಅಂಗಡಿ ತೆರೆಯುವ ಕುರಿತು ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು.ಶಿಗ್ಗಾವಿ ಪಟ್ಟಣದ ಕೊಳಗೇರಿ ನಿವಾಸಿಗಳಿಗೆ ಮತ್ತು ಗಂಜೀಗಟ್ಟಿಯ ಎಸ್ ಸಿ ಕಾಲೊನಿಯಲ್ಲಿ ಹಲವಾರು ನಿವಾಸಿಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ಗ್ರಹ ಜ್ಯೋತಿ ವಂಚಿತರಾಗಿದ್ದಾರೆ.. ಸ್ಥಳೀಯ ಗ್ರಾಪಂ ಅಧಿಕಾರಿಗಳು ಮತ್ತು ಹೆಸ್ಕಾಂ ಅಧಿಕಾರಿಗಳು ಸ್ಥಳೀಯವಾಗಿ ಪರೀಶೀಲಿಸಿ ಏನೇ ಸಮಸ್ಯೆ ಇದ್ದರೂ ಬಗೆಹರಿಸಿ ಶೀಘ್ರದಲ್ಲಿ ಅಲ್ಲಿನ ನಿವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಎಸ್ ಎಪ್ ಮಣಕಟ್ಟಿ, ಗುಡ್ಡಪ್ಪ ಜಲದಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವಿಕ್ರಮ ಸೊಳಂಕಿ ಸೇರಿದಂತೆ ತಾಲೂಕಿನ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರಾದ ಅತ್ತಾವುಲ್ಲಾಖಾನ ಖಾಜೇಖಾನವರ, ಪರುಶರಾಮ ಕಾಳೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು,ನ್ಯಾಯಬೆಲೆ ಅಂಗಡಿಗಳ ವಿತರಕರು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಂಡಿದ್ದರು.