ತುರ್ತು ವಿಚಾರಣೆಗೆ ರೋಹ್ಟಗಿ ಹಿಂದೇಟು: ಹೆಚ್ಚಿದ ಅನರ್ಹ ಶಾಸಕರ ಎದೆ ಬಡಿತ

ನವದೆಹಲಿ, ಆ. 26    ಹಿಂದಿನ  ಸ್ಪೀಕರ್ ರಮೇಶ್ ಕುಮಾರ್ ಅವರ  ಅನರ್ಹತೆ ಕ್ರಮ ಪ್ರಶ್ನಿಸಿದ್ದ ರಾಜ್ಯದ  ಅತೃಪ್ತ  17 ಶಾಸಕರ  ತುರ್ತು ಮನವಿಯನ್ನು ಕೈಗೆತ್ತಿಕೊಳ್ಳಲು  ಅವರ ಪರ ವಕೀಲ  ಮುಕುಲ್ ರೋಹ್ಟಗಿ ಹಿಂದೇಟು  ಹಾಕಿರುವುದು  ಅತೃಪ್ತ ಶಾಸಕರ ಎದೆ ಬಡಿತ ಹೆಚ್ಚಿಸಿದೆ.   

ಮುಕುಲ್ ರೋಹ್ಟಗಿ,   ಅನರ್ಹ ಶಾಸಕರ ಪರ ಮನವಿಯನ್ನು  ಕೈಗೆತ್ತಿಕೊಳ್ಳಲು ಇಂದು   ನಿರಾಕರಿಸಿದ  ಕಾರಣ ಸಚಿವರಾಗಬೇಕು, ಅಧಿಕಾರ ಹಿಡಿಯಬೇಕು ಎಂಬ ಕನಸು  ಹೊತ್ತಿದ್ದ ಅನರ್ಹ ಶಾಸಕರ ಯತ್ನಕ್ಕೆ ತೀವ್ರ ತಣ್ಣಿರು ಎರಚಿದಂತಾಗಿದೆ.   

ಈ ಮೂಲಕ  ಸಚಿವ ಸಂಪುಟ ಸೇರುವ ಆಕಾಂಕ್ಷೆ ಗೂ ತಣ್ಣೀರು ಬಿದ್ದಿದೆ. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟನ್ ಮುಖ್ಯ ನ್ಯಾಯಮೂರ್ತಿಯವರಿಗೆ  ನೇರ ಮನವಿ ಮಾಡಲು ಅತೃಪ್ತ ಶಾಸಕರ ಪರ ವಕೀಲರ ಚಿಂತನೆ ಮಾಡುತ್ತಿದ್ದಾರೆ ಎನ್ನಲಾಗಿದೆ. 

ಶಾಸಕ ಸ್ಥಾನದಿಂದ ಅನರ್ಹತೆ ಮಾಡಿದ್ದ ಹಿಂದಿನ  ಸ್ಪೀಕರ್ ರಮೇಶ್ ಕುಮಾರ್ ಅವರ  ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ತುರ್ತು ವಿಚಾರಣೆ ನಡೆಸುವಂತೆ ಅನರ್ಹ ಶಾಸಕರು ವಕೀಲರಿಗೆ ಪದೆ  ಪದೇ  ಮನವಿ ಮಾಡುತ್ತಾ ಬಂದಿದ್ದಾರೆ.    

ಕಡೆ ಕ್ಷಣದಲ್ಲಿ ಅನರ್ಹ ಶಾಸಕರ  ಅರ್ಜಿ ಮೆನ್ಷನ್ ಮಾಡಲು ವಕೀಲ ಮುಕುಲ್  ರೋಹ್ಟಗಿ ಹಿಂದೇಟು ಹಾಕಿದ್ದು  ನಾಳೆ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಬಹುದು ಕಾದುನೋಡಣ ಎಂದು   ಹೇಳಿರುವುದು ಅತೃಪ್ತ ಶಾಸಕರ ಎದೆ ಬಡಿತವನ್ನು  ನೂರುಪಟ್ಟು ಹೆಚ್ಚಿಸಿದೆ.