ರೋಹಿತ್ ಶರ್ಮಾ ತಂಡದ ಮಡಿಲಿಗೆ ಫ್ರೆಂಡ್ಶಿಪ್ ಕಪ್

ಲೋಕದರ್ಶನ ವರದಿ

ಕೊಪ್ಪಳ 28: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನರ್ಾಟಕ ವಾರಿಯಸರ್್ ಸ್ಪೋಟ್ರ್ಸ ಕ್ಲಬ್ ಈಚೆಗೆ ಆಯೋಜಿಸಿದ ಫ್ರೆಂಡ್ಶಿಪ್ ಕಪ್-2019 ಕ್ರಿಕೆಟ್ ಟೂರ್ನಮೆಂಟ್ ಮುಗಿದಿದ್ದು, ಈ ವರ್ಷದ ಫ್ರೆಂಡ್ಶಿಪ್ ಕಪ್ ರೋಹಿತ್ ಶಮರ್ಾ ತಂಡದ ಮಡಿಲು ಸೇರಿದೆ. 

ಟೂರ್ನಮೆಂಟ್ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶಮರ್ಾ ತಂಡಗಳ ನಡುವೆ ಅಂತಿಮ ಪಂದ್ಯ ನಡೆಯಿತು. ಟಾಸ್ ಗೆದ್ದ ವಿರಾಟ್ ಕೊಹ್ಲಿ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ಮೊದಲು ಬ್ಯಾಟ್ ಮಾಡಿದ ರೋಹಿತ್ ಶಮರ್ಾ ತಂಡ 12 ಓವರಗಳಲ್ಲಿ 5 ವಿಕೆಟ್ ನಷ್ಟಕ್ಕೆ 105 ರನ್ ಕಲೆ ಹಾಕಿತು.  

106 ರನ್ಗಳ ಗುರಿ ಬೆನ್ನತ್ತಿದ ವಿರಾಟ್ ಕೊಹ್ಲಿ ತಂಡ, ರೋಹಿತ ಶಮರ್ಾ ತಂಡದ ಮಾರಕ ದಾಳಿಗೆ ತತ್ತರಿಸಿ 12 ಓವರ್ಗಳಲ್ಲಿ ತನ್ನ 9 ವಿಕೆಟ್ ಕಳೆದುಕೊಂಡು 95 ರನ್ ಗಳಿಸಲಷ್ಟೇ ಶಕ್ತವಾಗಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಭರ್ಜರಿ 9 ರನ್ಗಳ ಗೆಲುವಿನೊಂದಿಗೆ ರೋಹಿತ್ ಶಮರ್ಾ ಈ ವರ್ಷದ ಫ್ರೆಂಡ್ಶಿಪ್ ಟ್ರೋಫಿ ಮುಡಿಗೇರಿಸಿಕೊಂಡಿತು.  

ಟೂರ್ನಮೆಂಟ್ನ ಅತ್ಯುತ್ತಮ ಬೌಲರ ಆಗಿ ವಿಜೇತ ರೋಹಿತ್ ಶಮರ್ಾ ತಂಡದ ಆಟಗಾರ ಶಿವಕುಮಾರ ನಾಲ್ವಾಡ ಹಾಗೂ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ರನ್ನರ್ ಅಪ್ ವಿರಾಟ್ ಕೊಹ್ಲಿ ತಂಡದ ಆಟಗಾರ ಗವಿ ಭಾಗ್ಯನಗರ ಹೊರಹೊಮ್ಮಿದರು.  

ವಿಜೇತ ತಂಡದ (ರೋಹಿತ್ ಶಮರ್ಾ) ನಾಯಕ  ಪ್ರಶಾಂತ ಸಹ ಆಟಗಾರರೊಂದಿಗೆ ಟ್ರೋಫಿ ಎತ್ತಿ ಹಿಡಿದರು. ಎರಡನೇ ಸ್ಥಾನ ಗಳಿಸಿದ (ವಿರಾಟ್ ಕೂಹ್ಲಿ) ತಂಡದ ನಾಯಕ ಜಗದೀಶ್ ಹೀರೆಮಠ ಸಹ ಆಟಗಾರರೊಂದಿಗೆ ರನ್ನರ್ ಅಪ್ ಟ್ರೋಫಿ ಸ್ವೀಕರಿಸಿದರು.  

ಈ ವೇಳೆ ಕನರ್ಾಟಕ ವಾರಿಯಸರ್್ ಸ್ಪೋಟ್ರ್ಸ ಕ್ಲಬ್ನ್ ಮಾಧ್ಯಮ ಸಲಹೆಗಾರ ಬಸವರಾಜ ಕರುಗಲ್, ಪ್ರವೀಣ ಇಟಗಿ, ಗಿರೀಶ್ ಮುಂಡಾ, ಮಹೇಶ ಸಜ್ಜನ್, ಗಂಗಾಧರ, ಮಂಜುನಾಥ, ಪರಶುರಾಮ, ಸಿದ್ದು ಇತರರು ಇದ್ದರು.