ಬೆಂಗಳೂರು, ಸೆ 17 ಕೆಜಿಎಫ್ -1 ರ ಅದ್ಭುತ ಪ್ರದರ್ಶನದಿಂದ ನ್ಯಾಷನಲ್ ಸ್ಟಾರ್ ಆಗಿ ಮಿಂಚಿದ ರಾಕಿ ಭಾಯ್ ಯಶ್, ಸದ್ಯಕ್ಕೆ ಕೆಜಿಎಫ್-2ರಲ್ಲಿ ಫುಲ್ ಬ್ಯುಸಿ ಇದಾದ ನಂತರ ಮತ್ತೊಮ್ಮೆ ದೇಶಾದ್ಯಂತ ಹವಾ ಎಬ್ಬಿಸೋಕೆ ರೆಡಿಯಾಗ್ತಾರೆ ಹೇಗೆ ಅಂತೀರಾ? ಈ ಸ್ಟೋರಿ ಓದಿ.
ಕೆಜಿಎಫ್ -2 ನಂತರ ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅವರ ಕಾಂಬಿನೇಷನ್ ನಲ್ಲಿ ಯಶ್ ಸಿನಿಮಾ ಮಾಡುವುದು ಖಚಿತವಾಗಿದ್ದು, ರಾಕಿ ಭಾಯ್ ಹವಾ ಮತ್ತಷ್ಟು ಹೆಚ್ಚಾಗಲಿದೆ
ಪುರಿ ಜಗನ್ನಾಥ್ ಅವರು ನಟ ವಿಜಯ್ ದೇವರಕೊಂಡ ಜೊತೆ ಹೊಸ ಸಿನಿಮಾ ಘೋಷಿಸಿದ ಮಾಡಿದ ನಂತರ ಯಶ್ ಅವರ 'ಜನ ಗಣ ಮನ' ಸಿನಿಮಾದಿಂದ ಯಶ್ ಹೊರಬಂದಿದ್ದಾರೆ ಎಂದು ಹೇಳಲಾಗಿತ್ತು
ಆದರೆ ಸದ್ಯ ವಿಜಯ್ ದೇವರಕೊಂಡಗೆ ನಿರ್ದೇಶಿಸುತ್ತಿರುವುದು ಫೈಟರ್ ಎನ್ನುವ ಬೇರೆ ಕಥೆಯಂತೆ 'ಜನ ಗಣ ಮನ' ಚಿತ್ರ ಯಶ್ ಗಾಗಿಯೆ ಇಟ್ಟಿದ್ದಾರಂತೆ ಪುರಿ ಜಗನ್ನಾಥ್ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬರುವ 'ಜನ ಗಣ ಮನ' ದೇಶದ ಸಿನಿಮಾ ರಂಗದಲ್ಲಿ ಹೊಸ ಅಲೆ ಸೃಷ್ಟಿಸಲಿದೆಯಂತೆ.
ಈ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದ್ದು, ಉಳಿದಂತೆ ಬೇರೆ ಭಾಷೆಗಳಿಗೆ ಡಬ್ ಆಗಲಿದೆ ಸಿನಿಮಾಗಾಗಿ ಯಶ್ ಮತ್ತು ಪುರಿ ಜಗನ್ನಾಥ್ ನಡುವೆ ಎರಡು ಸುತ್ತಿನ ಮಾತುಕತೆ ನಡೆದಿದ್ದು, ಕಥೆಯನ್ನು ರಾಕಿಂಗ್ ಸ್ಟಾರ್ ಇಷ್ಟಪಟ್ಟಿದ್ದಾರಂತೆ ಹೀಗಾಗಿ ಶೀಘ್ರದಲ್ಲೇ ಚಿತ್ರದ ಅನೌನ್ಸ್ ಮೆಂಟ್ ಕೂಡ ಹೊರಬೀಳಲಿದೆಯಂತೆ
'ಜನ ಗಣ ಮನ' ಚಿತ್ರದ ಬಗ್ಗೆ ಕಳೆದ 8 ತಿಂಗಳಿನಿಂದ ಸುದ್ದಿ ಹರಿದಾಡುತ್ತಿದೆ ನಟ ಮಹೇಶ್ ಬಾಬು ಅವರ ಜತೆ ಈ ಚಿತ್ರ ಮಾಡಲು ಪುರಿ ಜಗನ್ನಾಥ್ ಮುಂದಾಗಿದ್ದರು ಆದರೆ ಮಹೇಶ್ ಬಾಬು ಕಥೆ ಇಷ್ಟಪಡದ ಕಾರಣ ಯಶ್ ಬಳಿಗೆ ಕಥೆ ತೆಗೆದುಕೊಂಡು ಬಂದಿದ್ದರು ಎನ್ನಲಾಗಿದೆ.