ಕಾರ್ಮಿಕ ವಿರೋಧಿ ನೀತಿ ರದ್ದತಿಗೆ ಒತ್ತಾಯಿಸಿ ರಸ್ತೆ ತಡೆ: ಕಾರ್ಮಿಕ ಮುಖಂಡರ ಬಂಧನ

ಕಾರ್ಮಿಕ ವಿರೋಧಿ ನೀತಿ ರದ್ದತಿಗೆ ಒತ್ತಾಯಿಸಿ ರಸ್ತೆ ತಡೆ:  ಕಾರ್ಮಿಕ ಮುಖಂಡರ ಬಂಧನ   Roadblock demanding cancellation of anti-labour policy: Labor leaders arrested

ಕೊಪ್ಪಳ  09 : ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕೊಪ್ಪಳ (ಎಅಖಿಗ) ಹಾಗೂ ಸಂಯುಕ್ತ ಹೋರಾಟ ಹಿ ಕರ್ನಾಟಕ ಜಿಲ್ಲಾ ಸಮಿತಿಯಿಂದ ಕೇಂದ್ರ ಸರ್ಕಾರವು ಜಾರಿ ಮಾಡಿರುವ ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಕೊಪ್ಪಳದ ಕಾವ್ಯಾನಂದ (ಈಶ್ವರ)ಪಾರ್ಕಿನಿಂದ ಮೆರವಣಿಗೆ ಹೊರಟು ಅಶೋಕ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸುತ್ತಿದ್ದ ವೇಳೆ ಕಾರ್ಮಿಕ ಮುಖಂಡರನ್ನು ಬಂಧಿಸಿದ ಪೊಲೀಸರು ಅವರನ್ನು ಜಿಲ್ಲಾ ಕ್ರೀಡಾಂಗಣಕ್ಕೆ ಸಾಗಿಸಿದರು.    

ಕಾರ್ಮಿಕ ಮುಖಂಡರು ಮಾತನಾಡಿ ಸಂಪತ್ತನ್ನು ಸೃಷ್ಟಿಸುವ ಶ್ರಮಜೀವಿಗಳನ್ನು ಶಾಶ್ವತವಾಗಿ ಗುಲಾಮರನ್ನಾಗಿಸುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೇಂದ್ರ ಸರ್ಕಾರ ರದ್ದು ಗೊಳಿಸಬೇಕು.ಕರ್ನಾಟಕ ಸರ್ಕಾರ ಈ ಸಂಹಿತೆಗಳನ್ನು ತಿರಸ್ಕರಿಸಬೇಕು.ಕನಿಷ್ಠ ವೇತನವನ್ನು ಅಂತಿಮಗೊಳಿಸಬೇಕೆಂದು ಒತ್ತಾಯಿಸಿದರು.ಎಲ್ಲಾ ರೀತಿಯ ಜಮೀನು ಭೂಸ್ವಾಧೀನ ಮಾಡಬಾರು. ಜುಲೈ 9 ರಂದು ಬುಧವಾರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟಿತು. ಈ ಕರೆಯ ಮೇರೆಗೆ ಕೊಪ್ಪಳದಲ್ಲಿ ಎಅಖಿಗ ಹಾಗೂ ಖಏಒನ ಎಲ್ಲಾ ಸಂಘಟನೆಗಳು ಕೆಲಸವನ್ನು ಸ್ಥಗಿತಗೊಳಿಸಿ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಕೊಪ್ಪಳದ ಕಾವ್ಯಾನಂದ (ಈಶ್ವರ) ಪಾರ್ಕನಲ್ಲಿ ಸಮಾವೇಶಗೊಂಡು.ಅಶೋಕ  ವೃತ್ತದವರೆಗೆ ಮೆರೆವಣಿಗೆ ನಡೆಸಿ ಮಾನವ ಸರಪಳಿ ರಚಿಸಿ ಕಾರ್ಮಿಕ ರೈತ ವಿರೋಧಿ ನೀತಿಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. 

ದಿನದ ಕೆಲಸದ ಅವಧಿ 12 ಗಂಟೆಗೆ ವಿಸ್ತರಣೆ ಹಾಗೂ ರಾತ್ರಿ ಪಾಳಿಯಲ್ಲಿ ಮಹಿಳಾ ಕಾರ್ಮಿಕರ ದುಡಿಮೆಗೆ ಅವಕಾಶ ನೀಡಿ ಕಾರ್ಖಾನೆ ಕಾಯ್ದೆಗೆ ಮಾಡಿರುವ ತಿದ್ದುಪಡಿ ಹಾಗೂ ನಿಶ್ಚಿತ ಕಾಲಾವಧಿ ಕಾರ್ಮಿಕ (ಈಖಿಇ)ನೇಮಕಕ್ಕೆ ಅವಕಾಶ ನೀಡುವ ಮಾದರಿ ಸ್ಥಾಯಿ ಆದೇಶಗಳ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕು. ರಾಜ್ಯ ಸರ್ಕಾರವು ಕಾರ್ಮಿಕರ ನಿವೃತ್ತಿ ವಯಸ್ಸು 60 ವರ್ಷವನ್ನು ಸಮರ​‍್ಕವಾಗಿ ಜಾರಿ ಮಾಡಬೇಕು ಹಾಗೂ ಎಲ್ಲಾ ವಿಭಾಗದ ದುಡಿಯುವ ಮಹಿಳೆಯರಿಗೆ ವಾರ್ಷಿಕ 12 ದಿನ ವೇತನ ಸಹಿತ ಮುಟ್ಟಿನ ರಜೆ ನೀಡಬೇಕು.ಐಟಿ ಕಂಪನಿಗಳಿಗೆ ಸ್ಥಾಯಿ ಆದೇಶಗಳ ಕಾಯಿದೆಯಿಂದ ನೀಡಿರುವ ವಿನಾಯಿತಿ ರದ್ದುಪಡಿಬೇಕು. ಕಾನೂನುಬದ್ಧ ಸೇವಾ ನಿಯಮಗಳನ್ನು ಜಾರಿಗೆ ತರಬೇಕು.ರೈತರ ಒಪ್ಪಿಗೆ ಇಲ್ಲದೆ ಬಲವಂತದ ಭೂ ಸ್ವಾಧೀನ ಹಾಗೂ 3 ಕರಾಳ ಕೃಷಿ ಕಾಯಿದೆ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ವಾಪಸ್ಸು ಪಡೆಯಬೇಕು. ಬೆಂಗಳೂರಿನಲ್ಲಿ ಪ್ರತಿಭಟನೆ ಮತ್ತು ಮೆರವಣಿಗೆಗೆ ಇರುವ ನಿರ್ಬಂಧವನ್ನು ಹಿಂಪಡೆಯಬೇಕು.ಕನಿಷ್ಟ ಕೂಲಿ ಮಾಸಿಕ 36,000 ರೂ. ನೀಡಬೇಕು ಎಂದು ಆಗ್ರಹಿಸಿದರು.    

ಹೋರಾಟದಲ್ಲಿ ಜೆಸಿಟಿಯು ಹಾಗೂ ಎಸ್‌.ಕೆ.ಎಮ್ ಜಿಲ್ಲಾ ಸಮಿತಿಯ ಮುಖಂಡ ಖಾಸಿಮ್ ಸರ್ದಾರ್‌. ಬಂಡಾಯ ಸಾಹಿತಿ ಹಿರಿಯ ಹೋರಾಟಗಾರ ಅಲ್ಲಮ ಪ್ರಭು ಬೆಟ್ಟದೂರು.ಬಸವರಾಜ್ ಶೀಲವಂತರಿ​‍್ಜ.ನಾಗರಾಜ್‌.ಶರಣು ಗಡ್ಡಿ.ಎಸ್‌.ಎ.ಗಫಾರ್‌. ಕೆ.ಬಿ.ಗೋನಾಳ.ಗಾಳೆಪ್ಪ ಮುಂಗೋಲಿ.ಹನುಮೇಶ ಕಲ್ಮಂಗಿ.ಸುಂಕಪ್ಪ ಗದಗ್‌. ರಾಜು ಮುನಿರಾಬಾದ್‌.ಡಿ.ಹೆಚ್‌. ಪೂಜಾರ.ಅಮರೇಶ್ ಡಾಣಿ. ಮಖಬೂಲ್ ರಾಯಚೂರು.ಅನ್ನಪೂರ್ಣ ಬೃಹನ್ಮಠ. ಶಿವಲೀಲಾ ಅಗಳಕೇರಾ.ಸಂಜಯ್ ದಾಸ್ ಕೌಜಗೇರಿ.ಬಸವರಾಜ್ ಕಂಠಿ. ಕರೀಮ್ ಪಾಶಾ ಗಚ್ಚಿನಮನಿ. ಮಲ್ಲಿಕಾರ್ಜುನ್ ಬೃಂಗಿ. ಕೊಟ್ರಮ್ಮ ಕೇಸಲಾಪುರ. ಮುದುಕಪ್ಪ ಎಂ.ಹೊಸಮನಿ. ಸೈಯ್ಯದ್ ಅಬ್ದುಲ್ ಖಾದರ್ ಪೀರಝಾದೆ.ಜಿ.ಪಿ.ವಿಜಯ ಭಾಸ್ಕರ್ ರೆಡ್ಡಿ. ಬಸವರಾಜ ಹಾಸ್ಟೆಲ್‌. ಅಂಜಮ್ಮ ಹಾಸ್ಟೆಲ್‌. ಮಲ್ಲಮ್ಮ ಬಿಸರಹಳ್ಳಿ. ಜಾಫರ್ ಕುರಿ. ಶಾಬುದ್ದೀನ್ ಜವಳಗೇರಾ. ಮಂಗಳೇಶ್ ರಾಥೋಡ್ ಮುಂತಾದ ಅನೇಕ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.