ಗ್ರಾಮಸ್ಥರಿಗೆ ಉಪಯುಕ್ತವಾಗದ ರಸ್ತೆ ಕಾಮಗಾರಿ
Road works that are not useful for villagers
ಯಮಕನಮರಡಿ 07: ಸಮೀಪದ ಹತ್ತರಗಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಇಂದಿರಾ ನಗರದಲ್ಲಿ ಲೋಕೋಪಯೋಗಿ ಇಲಾಖೆಯ ನಾಲ್ಕುವರಿ ಕೋಟೆ ಅನುದಾನದಲ್ಲಿರಸ್ತೆ ಕಾಮಗಾರಿ ಮಾಡುತ್ತಿದ್ದು ಈ ರಸ್ತೆಯಿಂದ ಗ್ರಾಮಸ್ಥರಿಗೆ ಅನುಕೂಲವಾಗಬಹುದೇ ಎಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ ಮಳೆ ನೀರು ಚರಂಡಿಗೆ ಸೇರದೆ ಇರುವದು ಚರಂಡಿ ನಿರ್ಮಾಣ ಮಾಡಿದ್ದು ಚಿತ್ರದಲ್ಲಿ ಕಾಣಬಹುದು ಮಳೆಯಿಂದ ಸುರಿಯುವ ಮನೆಗಳ ನೀರು ಮನೆ ಅಂಗಳದಲ್ಲಿ ಬಿದ್ದು ಮನೆಯಲ್ಲಿಯೇ ಹರಿಯುವ ಪರಸ್ಥಿತಿ ಇಲ್ಲಿ ಎದ್ದು ಕಾಣುತ್ತಿದೆ ಅಲ್ಲದೆ ಸುಮಾರು ಮನೆಗಳಲ್ಲಿ ಬಹಳಷ್ಟು ಜನ ಅಂಗವಿಕಲರು ವಯೋವೃದ್ಧರು ಇರುತ್ತಾರೆ ಅವರು ಚರಂಡಿ ಮೇಲಿದ್ದ ಅಂಗಳಕ್ಕೆ ಹೇಗೆ ಬರುವುದು ಎಂಬುದನ್ನುವಿಚಾರಿಸಬಹುದಾಗಿದೆಲೋಕೋಪಯೋಗಿ ಸಚಿವರಾದ ಸತೀಶ್ ಅಣ್ಣ ಜಾರಕಿಹೊಳಿ ಅವರು ಈ ರಸ್ತೆ ಕಾಮಗಾರಿಗೆ 4:30 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿದ್ದು ಇರುತ್ತದೆ.
ಆದರೆ ಈ ರಸ್ತೆ ಕಾಮಗಾರಿಯು ಬಹುತೇಕ ಸಾರ್ವಜನಿಕರಿಗೆ ಗ್ರಾಮಸ್ಥರಿಗೆ ಅನುಕೂಲಕರವಾದದ್ದು ಅಲ್ಲವೆಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ ರಸ್ತೆ ಚರಂಡಿ ಮೇಲೆ ಮನೆಗಳು ಮಾತ್ರ ಕೆಳಗೆ ಹೀಗಿರುವಾಗ ಮಳೆ ನೀರು ಎಲ್ಲಿಗೆ ಹೋಗಬೇಕು ಎಂಬುದನ್ನು ಗುತ್ತಿಗೆದಾರರು ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ ಈ ಕುರಿತು ಸಂಬಂಧ ಪಟ್ಟ ಗ್ರಾಮ ಪಂಚಾಯಿತಿಗೆ ತಿಳಿಸಿದರು ಸಹಿತ ಯಾವುದೇ ತರದ ಪರಿಣಾಮವಾಗಿಲ್ಲ ಅಲ್ಲದೆ ಸದರಿ ಇಂದಿರಾನಗರದಲ್ಲಿ ಸಮರ್ಕ ರಸ್ತೆ ದೀಪದ ವ್ಯವಸ್ಥೆಯು ಸಹಿತ ಇರುವುದಿಲ್ಲ ರಾತ್ರಿ ವೇಳೆಯಲ್ಲಿ ಯಾರಾದರೂ ಚರಂಡಿಯಲ್ಲಿ ಆಯ್ತಪ್ಪಿ ಬಿದ್ದರೆ ಅವರು ಇಡೀ ರಾತ್ರಿ ಚರಂಡಿಯಲ್ಲಿ ಉಳಿಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಕಾರಣ ಗ್ರಾಮಸ್ಥರು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದರು ಸಹಿತ ಇದಕ್ಕೆ ಯಾರು ಗಮನಿಸುತ್ತಿರುವದಿಲ್ಲ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 