ಕುಮಟಾದಲ್ಲಿ ರಸ್ತೆ ಸುರಕ್ಷತಾ ನಿಯಮಗಳು ಕಟ್ಟ್ಟುನಿಟ್ಟಾಗಿ ಜಾರಿ : ಉಪ ವಿಭಾಗಾಧಿಕಾರಿ.

 ಕುಮಟಾದಲ್ಲಿ ರಸ್ತೆ ಸುರಕ್ಷತಾ ನಿಯಮಗಳು ಕಟ್ಟ್ಟುನಿಟ್ಟಾಗಿ ಜಾರಿ : ಉಪ ವಿಭಾಗಾಧಿಕಾರಿ. Road safety rules are strictly enforced in Kumta: Deputy Divisional Officer.

ಲೋಕದರ್ಶನ ವರದಿ 

ಕುಮಟಾದಲ್ಲಿ ರಸ್ತೆ ಸುರಕ್ಷತಾ ನಿಯಮಗಳು ಕಟ್ಟ್ಟುನಿಟ್ಟಾಗಿ ಜಾರಿ : ಉಪ ವಿಭಾಗಾಧಿಕಾರಿ.  

 ಕಾರವಾರ, ನ.15 :- ಕುಮಟಾ ಪಟ್ಟಣ ವ್ಯಾಪ್ತಿಯ ವಿವಿಧ ವೃತ್ತಗಳಲ್ಲಿ, ಹೆದ್ದಾರಿಯ ಕೂಡು ರಸ್ತೆಗಳಲ್ಲಿ ಹಾಗೂ ಹೆದ್ದಾರಿಯಲ್ಲಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ವಾಹನಗಳನ್ನು ಚಲಾಯಿಸಿಕೊಂಡು ಬರುವುದು ಸಾಮಾನ್ಯವಾಗಿದ್ದು, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ದ್ವಿಚಕ್ರ ವಾಹನ ಸವಾರರು ಹೆಲ್ಮೇಟ್ ಧರಿಸದಿರುವುದು, 4 ಚಕ್ರದ ವಾಹನ ಸವಾರರು ಸೀಟ್ ಬೆಲ್ಟ್‌ ಧರಿಸದಿರುವುದು, ರಸ್ತೆಯ ಎಲ್ಲೆಂದರಲ್ಲಿ ಅನಧಿಕೃತವಾಗಿ ವಾಹನ ನಿಲುಗಡೆ, ರಸ್ತೆ ಬದಿಯ ವ್ಯಾಪಾರಿಗಳಿಂದ ಹೆದ್ದಾರಿ ರಸ್ತೆಯ ಅತಿಕ್ರಮಣದಂತಹ ವಿಷಢಯಗಳನ್ನು ಸೂಕ್ತ ರೀತಿಯಲ್ಲಿ ನಿಯಂತ್ರಣ ಮಾಡದೇ ಹೋದಲ್ಲಿ ವಾಹನ ಸವಾರರ ಹಾಗೂ ಅಮಾಯಕ ಜನರ ಪ್ರಾಣಕ್ಕೆ ಅಪಾಯವಾಗುವ ಹಿನ್ನೆಲೆಯಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶಕ್ಕಾಗಿ ಉಪವಿಭಾಗಾಧಿಕಾರಿ ಪಿ. ಶ್ರವಣ್ ಕುಮಾರ್ ಕೆಳಗಿನಂತೆ ಆದೇಶಿಸಿದ್ದಾರೆ.   

 ಕುಮಟಾ ತಾಲೂಕಿನಾದ್ಯಂತ ಸವಾರರು ಹಾಗೂ ಹಿಂಬದಿ ಸವಾರರು (4 ್ರ್ಝ್ಟ ಮೇಲ್ಪಟ್ಟವರು) ಒಳಗೊಂಡಂತೆ ಎಲ್ಲಾ ವಾಹನ ಸವಾರರು ಕಡ್ಡಾಯವಾಗಿ ಐ.ಎಸ್‌.ಐ ಪ್ರಮಾಣೀಕೃತ ಶಿರಸಾೊಣ (ಊಜಟಟಜಣ)ಧರಿಸುವುದು ಕಡ್ಡಾಯವಾಗಿರತಕ್ಕದ್ದು. ಪೊಲೀಸ್ ಇಲಾಖೆಯವರು ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸತಕ್ಕದ್ದು. ತಾಲೂಕಿನ ಎಲ್ಲಾ ಪೆಟ್ರೋಲ್ ಬಂಕ್ ಗಳಲ್ಲಿ ಶಿರಸಾೊಣ (ಊಜಟಟಜಣ) ಧರಿಸದೇ ಇರುವ ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಸೀಟ್ ಬೆಲ್ಟ್‌ ಧರಿಸದೇ ಇರುವ ವಾಹನಗಳಿಗೆ ಇಂಧನವನ್ನು ನೀಡತಕ್ಕದ್ದಲ್ಲ ಹಾಗೂ ಓಓ ಊಇಐಒಇಖಿ/ಖಇಂಖಿಃಇಐಖಿ, ಓಓ ಈಗಇಐ ಎಂಬುದನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಹಾಗೂ ಈ ಕುರಿತು ಸೂಚನಾ ಫಲಕಗಳನ್ನು ಅಳವಡಿಸತಕ್ಕದ್ದು. ಪೊಲೀಸ್ ನೀರೀಕ್ಷಕರು ಕುಮಟಾ ಹಾಗೂ ಗೋಕರ್ಣರವರು ಹಾಗೂ ಆಹಾರ ನೀರೀಕ್ಷಕರು ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸತಕ್ಕದ್ದು. ರಾಷ್ಟ್ರೀಯ ಹೆದ್ದಾರಿಯ ಮೇಲೆ ಅನಧಿಕೃತವಾಗಿ ಇರುವಂತಹ ಪೆಟ್ಟಿಗೆ ಅಂಗಡಿ, ತಳ್ಳುಗಾಡಿಗಳನ್ನು ಹಾಗೂ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸತಕ್ಕದ್ದು ಹಾಗೂ ಹೊಸದಾಗಿ ಇಂತಹ ಯಾವುದೇ ವ್ಯಾಪಾರ ವಹಿವಾಟನ್ನು ನಡೆಸುವಂತಹ ಅಂಗಡಿಗಳನ್ನು ನಿರ್ಮಾಣ ಮಾಡತಕ್ಕದ್ದಲ್ಲ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐ.ಆರಿ​‍್ಬ ಅಧಿಕಾರಿಗಳು ಇದನ್ನು ಕಟ್ಟುನಿಟ್ಟಾಗಿ ಅನುಷ್ಠ್ಠಾನಗೊಳಿಸತಕ್ಕದ್ದು.   

 ದ್ವಿ ಚಕ್ರ ವಾಹನಗಳನ್ನು ಬಾಡಿಗೆಗೆ ಕೊಡುವ ಸೇವೆ ನೀಡುವವರು ಸಹ ಕಡ್ಡಾಯವಾಗಿ ಸವಾರರಿಗೆ ಎರಡು ಶಿರಸಾೊಣ (ಊಜಟಟಜಣ) ಗಳನ್ನು ನೀಡಲು ಕ್ರಮ ಕೈಗೊಳ್ಳುವುದು. 18 ಿ ಕಡಿಮೆ ವಯಸ್ಸಿನ ಅಪ್ರಾಪ್ತರು ವಾಹನ ಚಾಲನೆ ಮಾಡುವುದರಿಂದ ಉಂಟಾಗುವ ಪರಿಣಾಮಗಳಿಗೆ ಅಂತಹ ವಾಹನಗಳ ಮಾಲೀಕರು ಹಾಗೂ ಅಪ್ರಾಪ್ತರು ವಾಹನಗಳನ್ನು ಶಾಲಾ-ಕಾಲೇಜುಗಳಿಗೆ ತರುವುದರಿಂದಾಗುವ ಪರಿಣಾಮಗಳಿಗೆ ಆಯಾ ಶಾಲಾ-ಕಾಲೇಜಿನ ಪ್ರಾಂಶುಪಾಲರು ಜವಾಬ್ದಾರರಾಗಿರುತ್ತಾರೆ. ಎಲ್ಲಾ ರೀತಿಯ ವಾಹನ ಸವಾರರು ಹಾಗೂ ಪಾದಚಾರಿಗಳು, ಸಾರ್ವಜನಿಕರೆಲ್ಲರೂ ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.  

 ಈ ಆದೇಶದಿಂದ ಭಾದಿತರಾಗುವವರು ಅಥವಾ ಸಂಬಂಧಪಟ್ಟವರು ಈ ಆದೇಶ ಹೊರಡಿಸಿದ 7 ದಿನಗಳ ಒಳಗೆ ಉಪ-ವಿಭಾಗೀಯ ದಂಡಾಧಿಕಾರಿ ಕುಮಟಾ ಉಪ-ವಿಭಾಗ, ಕುಮಟಾ ಇವರ ಸಮಕ್ಷಮ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿತಕ್ಕದ್ದು. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗದಿದ್ದಲ್ಲಿ ಸದರಿ ಆದೇಶವು ಜಾರಿಯಾಗಲಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.