ರಸ್ತೆ ಸಂಪರ್ಕ. ಒಳಚರಂಡಿ ಕನೆಕ್ಷನ್ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮನವಿ ಸಲ್ಲಿಕೆಹೊಂಬಳನಾಕಾ ಜನತಾ ಕಾಲೋನಿಗೆ 40 ವರ್ಷಗಳಿಂದ ಅನ್ಯಾಯ : ಕೃಷ್ಣಾ ಹಡಪದ ಆಕ್ರೋಶ

ರಸ್ತೆ ಸಂಪರ್ಕ. ಒಳಚರಂಡಿ ಕನೆಕ್ಷನ್ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮನವಿ ಸಲ್ಲಿಕೆಹೊಂಬಳನಾಕಾ ಜನತಾ ಕಾಲೋನಿಗೆ 40 ವರ್ಷಗಳಿಂದ ಅನ್ಯಾಯ : ಕೃಷ್ಣಾ ಹಡಪದ ಆಕ್ರೋಶ  Road connectivity, sewerage connection and basic facilities have been provided, petition filed, inju

ರಸ್ತೆ ಸಂಪರ್ಕ. ಒಳಚರಂಡಿ ಕನೆಕ್ಷನ್ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಮನವಿ ಸಲ್ಲಿಕೆಹೊಂಬಳನಾಕಾ ಜನತಾ ಕಾಲೋನಿಗೆ 40 ವರ್ಷಗಳಿಂದ ಅನ್ಯಾಯ : ಕೃಷ್ಣಾ ಹಡಪದ ಆಕ್ರೋಶ  

ಗದಗ 27: ಹೊಂಬಳನಾಕಾ ಜನತಾ ಕಾಲೋನಿಯ ನಿವಾಸಿಗಳು 40 ವರ್ಷಗಳಿಂದ ಅನ್ಯಾಯಕ್ಕೆ ಒಳಗಾಗಿದ್ದಾರೆ ಈ ಕಾಲೋನಿಯಲ್ಲಿ ರಸ್ತೆ ಸಂಪರ್ಕವಿಲ್ಲ ಒಳಚರಂಡಿ ಕನೆಕ್ಷನ್ ಇಲ್ಲ ಮೂಲಭೂತ ಸೌಕರ್ಯಗಳ ಕೊರತೆ, ಡೆಂಗ್ಯೂ ಮತ್ತು ಮಲೇರಿಯಾ ರೋಗಗಳ ಹರಡುವಿಕೆ, ಕುಡಿಯುವ ನೀರಿನ ಸಮಸ್ಯೆ ಮಕ್ಕಳಿಗೆ ಆಟ ಆಡಲು ಮೈದಾನದ ಸಮಸ್ಯೆ ಮಹಿಳೆಯರಿಗೆ ವೃದ್ಧರಿಗೆ ವಾಕ್ ಮಾಡಲು ನೇಮ್ಮದಿಯಿಂದ ಕಾಲ ಕಳೆಯಲು ಗಾರ್ಡನ್ ಸಮಸ್ಯೆ ಮತ್ತು ರಾಜಾ ಕಾಲುವೆಯ ಅರ್ಧಮರ್ಧ ಕಾಮಗಾರಿಯಾಗಿ ಸ್ಥಗಿತಗೊಂಡಿದ್ದು ಸೇರಿದಂತೆ ಮುಂತಾದ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದ ಅಧ್ಯಕ್ಷರಾದ  ಕೃಷ್ಣಾ ಎಚ್ ಹಡಪದ ತಮ್ಮ ಕಾಲೋನಿಯ ಸಮಸ್ಯೆ ಕುರಿತು ಅಳಲನ್ನು ತೋಡಿಕೊಂಡು ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದರು      ಅವರು ಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ಧಿ ಪರ ಸೇವಾ ಸಂಘದಿಂದ ಕಾಂಗ್ರೆಸ್ ಯುವ ನಾಯಕರ ಕೃಷ್ಣಗೌಡ್ರು ಪಾಟೀಲರಿಗೆ ಮನವಿ ಸಲ್ಲಿಸಿ, ಕಾಲೋನಿಯ ಸಮಸ್ಯೆಗಳನ್ನು ಪರಿಹರಿಸಲು ಕೋರಿ ಮಾತನಾಡಿ ಕಾಲೋನಿಯ ನಿವಾಸಿಗಳು ಸರ್ಕಾರಿ ಅಧಿಕಾರಿಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಕೃಷ್ಣ ಎಚ್ ಹಡಪದ ಅವರು ಗಂಭೀರವಾಗಿ  ಆರೋಪಿಸಿದರು    ಈ ಪ್ರದೇಶದಲ್ಲಿ ನಾಲ್ಕೂ ರಸ್ತೆಗಳಿಗೆ ಸಂಪರ್ಕ ಇಲ್ಲದ ಕಾರಣ, ನಮ್ಮ ಮಕ್ಕಳು ಶಾಲೆಗೆ ಹೋಗಲು ಮತ್ತು ನಾವು ಕೆಲಸಕ್ಕೆ ಹೋಗಲು ತುಂಬಾ ಕಷ್ಟವಾಗುತ್ತಿದೆ. ಅಷ್ಟೇ ಅಲ್ಲದೆ ತುರ್ತು ಪರಿಸ್ಥಿತಿಯಲ್ಲಿ ಆಂಬುಲೆನ್ಸ್‌, ಅಗ್ನಿಶಾಮಕ ಗಾಡಿ ನಗರಸಭೆಯ ಕಸದ ಗಂಟೆಗಾಡಿ ಮುಂತಾದ ವಾಹನಗಳು ಬರಲು ಸಾಧ್ಯವಾಗದೇ ಇರುವುದು ತುಂಬಾ ದುರದೃಷ್ಟಕರ ಇದರಿಂದ ನಮ್ಮ ಪ್ರದೇಶದ ಜನರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಯೂ ಸಹ ಇರುವುದು. ಪರಿಹಾರವಾಗಿ ರೈಲ್ವೆ ಹಳಿ ಪಕ್ಕದಲ್ಲಿ ಹಳೆ ಕೋರ್ಟ್‌ ನಿಂದ ಆರಂಭಗೊಂಡಿರುವ ರಸ್ತೆ ಈಗಾಗಲೇ ಡಿಸಿ.ಮಿಲ್ ಕಂಪೌಂಡಿಗೆ ಬಂದು ತಲುಪಿದೆ ಭಾಗಶಃ ಕಾಂಪೌಂಡ್ ಒಡೆದು ಹೊಂಬಳನಾಕಾ ಜನತಾ ಕಾಲೋನಿಗೆ ಸಂಬಂಧಿಸಿದ ನಾಲ್ಕು ರಸ್ತೆಗಳಿಗೆ ಸಂಪರ್ಕ ಕಲ್ಪಿಸಬೇಕು ಇದರಿಂದ 40ವರ್ಷಗಳ ಸಮಸ್ಯೆ ಬಗೆಹರಿದು ಹಳೆಕೋರ್ಟ್‌ ವೃತ್ತ. ರೈಲ್ವೆ ನಿಲ್ದಾಣ. ಸೇರಿದಂತೆ ಈ ಭಾಗಕ್ಕೆ ತೆರಳುವ ಎಲ್ಲಾ ವಾಹನಗಳಿಗೆ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ       

   ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರು ಪಾಟೀಲ ಅವರು ಸಂಘದ ಮನವಿ ಸ್ವೀಕರಿಸಿ, ಮಾತನಾಡಿ ನಗರಸಭೆ ಅಧಿಕಾರಿಗಳೊಂದಿಗೆ ಹೊಂಬಳನಾಕಾ ಜನತಾ ಕಾಲೋನಿಗೆ ಖುದ್ದಾಗಿ ಭೇಟಿ ನೀಡಿ, ಕಾಲೋನಿಯ ಸಮಸ್ಯೆಗಳನ್ನು ಪರೀಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಮುಂದಾಗುವುದಾಗಿ ಭರವಸೆ ನೀಡಿದರು       ಈ ಸಂದರ್ಭದಲ್ಲಿ ಸಂಘದ ಪ್ರಮುಖರುಗಳಾದ ಶರಣಪ್ಪ ಸೂಡಿ. ರಾಘವೇಂದ್ರ ಗಾಮನಗಟ್ಟಿ. ಚಾಂದಸಾಬ ಬದಾಮಿ. ರಾಜು ತಹಶೀಲ್ದಾರ. ಸದ್ದಾಂಹುಸೇನಭಾಷಾ ಲಕ್ಷ್ಮೇಶ್ವರ. ಉಮೇಶ ಬಳಧಡಿ. ರಾಮಣ್ಣ ಹೇಳವರ. ಮಂಜುನಾಥ ಕಕ್ಕೇರಿ. ಹಾಗೂ ಹೋಂಬಳನಾಕಾ ಜನತಾ ಕಾಲೋನಿಯ ಅನೇಕ ನಿವಾಸಿಗಳು ಉಪಸ್ಥಿತರಿದ್ದರು      ಒಳಚರಂಡಿ ಕನೆಕ್ಷನ್ ಇಲ್ಲದ ಕಾರಣ, ತುಂಬಾ ಅನ್ಯಾಯವಾಗಿದೆ. ನಮ್ಮ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ, ನಮ್ಮ ಜೀವನ ಕಷ್ಟಕರವಾಗಿದೆ ಅಲ್ಲದೆ ನಮ್ಮ ಪ್ರದೇಶದಲ್ಲಿ ಸೊಳ್ಳೆ ಮತ್ತು ಕೊಳಕು ಹೆಚ್ಚಾಗಿದೆ, ಇದರಿಂದ ಚಿಕ್ಕ ಮಕ್ಕಳಿಗೆ ವೃದ್ಧರಿಗೆ ಹಾಗೂ ನಮ್ಮೆಲ್ಲರ ಸಾರ್ವಜನಿಕರಿಗೆ ಆರೋಗ್ಯಕ್ಕೆ ಹಾನಿಯಾಗುತ್ತಿದೆ       ಪರಶುರಾಮ ಅಣ್ಣಿಗೇರಿ    ಕಾರ್ಯಾಧ್ಯಕ್ಷರುಹೊಂಬಳನಾಕಾ ಜನತಾ ಕಾಲೋನಿ ಅಭಿವೃದ್ದಿ ಪರ ಸೇವಾ ಸಂಘ -ಕಾಲೋನಿಯ ಸಮಸ್ಯೆಗಳು:- ರಸ್ತೆ ಸಂಪರ್ಕ ಕೊರತೆ- ಒಳಚರಂಡಿ ಕನೆಕ್ಷನ್ ಕೊರತೆ- ಮೂಲಭೂತ ಸೌಕರ್ಯಗಳ ಕೊರತೆ- ಡೆಂಗ್ಯೂ ಮತ್ತು ಮಲೇರಿಯಾ ರೋಗಗಳ ಹರಡುವಿಕೆ- ಕುಡಿಯುವ ನೀರಿನ ಸಮಸ್ಯೆ- ರಾಜ ಕಾಲುವೆಯ ಅರ್ಧಮರ್ಧ ಕಾಮಗಾರಿಯಾಗಿ ಸ್ಥಗಿತಗೊಂಡಿದ್ದು