ಗೌರಿ ಲಂಕೇಶ್ ಹತ್ಯೆ ಆರೋಪಿ ರಿಷಿಕೇಶ್ ಇಂದು ಬೆಂಗಳೂರಿಗೆ

ಬೆಂಗಳೂರು, ಜ. 12 :     ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಂಧಿತವಾಗಿದ್ದ  ರಿಷಿಕೇಶ್ ದೇವ್ಡೇಕರ್ ಅಲಿಯಾಸ್ ಮುರಳಿಯನ್ನು ಇಂದು ಎಸ್ ಐಟಿ ತಂಡ ಬೆಂಗಳೂರಿಗೆ ಕರೆತರಲಿದೆ.  

ಇದೇ ತಿಂಗಳು 9ರಂದು ಎಸ್ಐಟಿ ತಂಡ ಜಾರ್ಖಂಡ್ ನಲ್ಲಿ ರಿಷಿಕೇಶ್ ನನ್ನು ಬಂಧಿಸಿ, ಜಾರ್ಖಂಡ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಆತನನ್ನು ವಶಕ್ಕೆ ಪಡೆದಿದೆ.  

ಜಾರ್ಖಂಡ್ ನಿಂದ ರೈಲಿನ ಮೂಲಕ ರಿಷಿಕೇಶ್ ನನ್ನು ಅಧಿಕಾರಿಗಳು ಬೆಂಗಳೂರಿಗೆ ಕರೆತರುತ್ತಿದ್ದು, ಸುಮಾರು 36 ಗಂಟೆಗಳ ಬಳಿಕ ಇಂದು ಸಂಜೆ ಬೆಂಗಳೂರಿಗೆ ತಲುಪಲಿದ್ದಾರೆ.  

ನಂತರ ಆರೋಪಿಯನ್ನು ಎಸ್ ಐಟಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ವಶಕ್ಕೆ ಪಡೆಯಲಿದ್ದಾರೆ. 

ರಿಷಿಕೇಶ್ ಜಾರ್ಖಂಡ್ ನ ಧನ್ಬಾದ್ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದ್ದು, ಆತ ಸುಮಾರು 1 ವರ್ಷದಿಂದ ಕುಟುಂಬದವರ ಸಂಪರ್ಕದಿಂದ ದೂರವಿದ್ದ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ.