ರಿಷಿ ನಿಧನಕ್ಕೆ ಕ್ರೀಡಾ ಪಟುಗಳ ಕಂಬನಿ

ನವದೆಹಲಿ, ಏ.30, ಹಿರಿಯ ನಟ ರಿಷಿ ಕಪೂರ್ ನಿಧನಕ್ಕೆ ಚಿತ್ರ ರಂಗ ಹಾಗೂ ಗಣ್ಯಾತಿ ಗಣ್ಯರು ಕಂಬನಿ ಮಿಡಿದಿದ್ದಾರೆ. ಭಾರತದ ಖ್ಯಾತ ನಾಮ ಕ್ರೀಡಾ ಪಟುಗಳು ಸಹ ರಿಷಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.“ನಿನ್ನೆ ಇರ್ಫಾನ್ ಖಾನ್, ಇಂದು ರಿಷಿ ಕಪೂರ್ ನಿಧನ. ಈ ಸುದ್ದಿ ಕೇಳಲೇ ತುಂಬ ನೋವಾಗುತ್ತಿದೆ. ರಿಷಿ ಅವರ ಆತ್ಮಕ್ಕೆ ಭಗಂವತ ಶಾಂತಿ ನೀಡಲಿ, ಕುಟಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹ ರಿಷಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ನಾನು ಅವರ ಚಿತ್ರವನ್ನು ನೋಡುತ್ತಲೆ ಬೆಳೆದಿದ್ದೇನೆ” ಎಂದು ಅವರು ರಿಷಿ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಬಾಕ್ಸರ್ ವಿಜೇಂದ್ರ ಸಿಂಗ್, ಮಾಜಿ ಟೆನಿಸ್ ಆಟಗಾರ ಮಹೇಶ್ ಭೂಪತಿ, ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್ ಆಟಗಾರ ಸೈನಾ ನೆಹ್ವಾಲ್, ಟರ್ಬನೇಟರ್ ಹರ್ಭಜನ್ ಸಿಂಗ್, ಕುಸ್ತಿ ಪಟುಗಳಾದ ಸಾಕ್ಷಿ ಮಲೀಕ್, ಸುಶೀಲ್ ಕುಮಾರ್, ಗೀತಾ ಪೋಗಟ್ ಅವರು ಸಹ ಸಂತಾಪ ಸೂಚಿಸಿದ್ದಾರೆ.