ಮನೆ ಮನೆ ಭೇಟಿ ಮಾಡಿ ಜಾಬ್ ಕಾರ್ಡುಗಳನ್ನು ಪರಿಷ್ಕರಣೆ

ರಾಣಿಬೆನ್ನೂರ:16 ಗ್ರಾಮ ಪಂಚಾಯಿತಿ ವತಿಯಿಂದ ಮನೆ ಮನೆ ಭೇಟಿ ಮಾಡಿ ಜಾಬ್ ಕಾರ್ಡುಗಳನ್ನು ಪರಿಷ್ಕರಣೆ ಮಾಡುವುದರೊಂದಿಗೆ ಕೂಲಿ ಕೆಲಸಕ್ಕೆ ಬರುವಂತೆ ಪ್ರೇರೇಪಣೆ ನೀಡುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂ ಪಿಎಒಓ ಅಶೋಕ ಪೂಜಾರ ಹೇಳಿದರು. 

ತಾಲೂಕಿನ ಕಾಕೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಕ್ರಿಯವಲ್ಲದ ಜಾಬ್ ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 1666 ಕುಟುಂಬಗಳು ಜಾಬ್ ಕಾರ್ಡ್‌ ಹೊಂದಿದ್ದು ಅದರಲ್ಲಿ ಸುಮಾರು 504 ಜಾಬ್ ಕಾರ್ಡಗಳು ಸಕ್ರಿಯ ಗೊಂಡಿರುವುದಿಲ್ಲ ಈ ಕುಟುಂಬಗಳ ಮನೆಗಳಿಗೆ ಭೇಟಿ ಮಾಡಿ ಉದ್ಯೋಗ ಖಾತರಿ ಕೆಲಸಕ್ಕೆ ಬರುವಂತೆ ಮನವಿ ಮಾಡುವ ಮೂಲಕ ಪರಿಷ್ಕರಣೆ ಮಾಡಿದಂತಾಗುತ್ತದೆ ಎಂದು ತಿಳಿಸಿದರು 

ತಾಲೂಕ ಐಇಸಿ ಸಂಯೋಜಕ ದಿಂಗಾಲೇಶ ಅಂಗೂರ ಮಾತನಾಡಿ, ತಾಲೂಕಿನ 40 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 44831 ಕುಟುಂಬಗಳು ಜಾಬ್ ಕಾರ್ಡ್ಗಳನ್ನು ಹೊಂದಿದ್ದು ಅದರಲ್ಲಿ ಸುಮಾರು 10000 ಜಾಬ್ ಕಾರ್ಡ್‌ಗಳು ಸಕ್ರಿಯ ಗೊಂಡಿರುವುದಿಲ್ಲ ಈ ಕುಟುಂಬಗಳ ಭೇಟಿ ಮಾಡಿ ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಿ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳ ಕೆಲಸಕ್ಕೆ ಬರುವಂತೆ ಅವರ ಜಾಬ್ ಕಾರ್ಡ್ಗಳನ್ನು ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದರು 

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಜಗದೀಶ ಚಪ್ಪರದ, ಹುಚ್ಚಪ್ಪ ಮಾಳಗಿ,  ಜಿಪಂ ಎಸ್‌ಬಿಎಮ್ ಸಂಯೋಜಕ ಗೋವಿಂದರಾಜ, ತಾಂತ್ರಿಕ ಸಹಾಯಕ ಕೃಷ್ಣ ನಾಯಕ, ಗ್ರಾಪಂ ಕಾರ್ಯದರ್ಶಿ ಹನುಮಂತಪ್ಪ ಶಿಕಾರಿ, ಮಂಜುನಾಥ ಚಲವಾದಿ,   ಪ್ರಕಾಶ ಮುಗುದೂರ, ಶಿವಾನಂದ ಕಡೆಮನಿ, ಕರಬಸಪ್ಪ ಕಡೆಮನಿ, ರಾಘವೇಂದ್ರ ಮುಗದೂರು ಹಾಗೂ ಕೂಲಿ ಕಾರ್ಮಿಕರು ಇದ್ದರು