ಕಪ್ಪಲಗುದ್ದಿ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿಎಂ ದಿವಾಕರ ರವರ ನಿವೃತ್ತಿ ಸಮಾರಂಭಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಡುವುದು ಇಂದು ಬಹಳ ಮುಖ್ಯ: ರೇವತಿ ಮಠದ
Retirement ceremony of PM Diwakar, Headmaster of Kappalaguddi Government Higher Secondary School. Gi
ಪಾಲಬಾವಿ 03 : ಗುರುಗಳು ಎಂದರೆ ನೌಕರರಲ್ಲ ಬಿಲ್, ಬಿಲ್ ಎರಡನ್ನು ಗೊತ್ತಿಲ್ಲದವರು ಗುರುಗಳು. ಗ್ರಾಮಸ್ಥರು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಡುವುದು ಇಂದು ಬಹಳ ಮುಖ್ಯವಾಗಿದೆ. ನಾವು ಎಷ್ಟು ಕಲೀತೀವಿ ಎನ್ನುವುದು ಮುಖ್ಯವಲ್ಲ. ಹೇಗೆ ಕಲಿತಿದ್ದೇವೆ ಎನ್ನುವುದು ಮುಖ್ಯವಾಗಿದೆ. ಇಂದು ಸಾಕ್ಷರತೆಗಿಂತ ಸಂಸ್ಕಾರ ಬಹಳ ದೊಡ್ಡದು.ದೂರದ ದೇಶಗಳಲ್ಲಿ ಓದಲು ಹೋದ ಮಕ್ಕಳು ಹೆತ್ತವರನ್ನು ಮರೆಯುತ್ತಿರುವುದು ವಿಷಾದನೀಯ, ಖಾಸಗಿ ಶಾಲೆಗಳನ್ನು ಮೀರಿಸುವಂತೆ ಕಪ್ಪಲಗುದ್ದಿ ಸರ್ಕಾರಿ ಶಾಲೆಯನ್ನು ಬೆಳೆಸಿರುವ ಮುಖ್ಯ ಶಿಕ್ಷಕ ಪಿಎಂ ದಿವಾಕರ ರವರ ಕಾರ್ಯವು ಶ್ಲಾಘನೀಯವಾದದ್ದು, ಅವರ ವೃತ್ತಿಜೀವನವು ಸುಖಕರವಾಗಿರಲಿ ಎಂದು ಜಿಲ್ಲಾ ಯೋಜನಾ ಸಮಾನವ ಸಮನ್ವಯಾಧಿಕಾರಿ ಶ್ರೀಮತಿ ರೇವತಿ ಮಠದ ಹೇಳಿದರು.ಅವರು ಸಮೀಪದ ಕಪ್ಪಲಗುದ್ದಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆ, ಎಸ್ಡಿಎಂಸಿ ಪದಾಧಿಕಾರಿಗಳ ಬಳಗ, ನಮ್ಮ ಶಾಲೆ ನಮ್ಮ ಹೆಮ್ಮೆ ಬಳಗದ ವತಿಯಿಂದ ಮುಖ್ಯ ಶಿಕ್ಷಕ ಪ್ರಕಾಶ ದಿವಾಕರರವರು ಸತತವಾಗಿ 42 ವರ್ಷಗಳ ಕಾಲ ಸುದೀರ್ಘ ಸೇವೆಸಲ್ಲಿಸಿದ ಜಿಲ್ಲಾ ಮಟ್ಟದ ’ಅತ್ಯುತ್ತಮ ಶಿಕ್ಷಕ" "ಡಾ:ಸ.ಜ.ನಾಗಲೋಟಿಮಠ" ಪ್ರಶಸ್ತಿ ಪುರಸ್ಕೃತ ಕಪ್ಪಲಗುದ್ದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಉನ್ನತೀಕರಿಸಿದ ಪ್ರೌಢಶಾಲೆಯ ಮುಖ್ಯಶಿಕ್ಷಕ ಪ್ರಕಾಶ ದಿವಾಕರರವರು ಇದೇ ಮೇ.31ರಂದು ಸೇವಾ ನಿವೃತ್ತಿಯಾಗುತ್ತಿಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮಹಾಲಿಂಗಪುರ ಕೆಎಲ್‌ಇ ಕಾಲೇಜಿನ ಉಪನ್ಯಾಸಕ ಶಿವಲಿಂಗ ಸಿದ್ನಾಳ, ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ರೇವತಿ ಮಠದ, ಬಿಇಓ ಬಸವರಾಜಪ್ಪ.ಆರ್ ಮಾತನಾಡಿದರು.ಪಾಲಬಾವಿ ಶಾಂತಮಲ್ಲ ಕುಟೀರದ ಪೀಠಾಧಿಪತಿ ವೀರಯ್ಯ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಎಸ್ಡಿಎಂಸಿ ಅಧ್ಯಕ್ಷ ಗುರು ಅಂಗಡಿ ಅಧ್ಯಕ್ಷತೆವಹಿಸಿದ್ದರು. ವೇದಿಕೆಯ ಮೇಲೆ ಮಹಾದೇವಪ್ಪ ನಾಯಿಕ ಮಹಾರಾಜರು, ತಾಪಂ ಮಾಜಿ ಸದಸ್ಯ ಶಿವಪ್ಪ ದಡ್ಡಿಮನಿ, ಗಂಗಪ್ಪ ಕುರನಿಂಗ, ಪ್ರಗತಿಪರ ರೈತರ ಪರ್ಪ ಬಂಗಿ, ಪರಮಹಂಸ ಬಂಗಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಅಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣಕೂಡಲಗಿ ಪುಟ್ಟಗೌಡ ನಾಯಿಕ, ಭೀಮಪ್ಪ ಮಂಟೂರ, ಡಾ. ಎಂಬಿ ಶಿರೋಳ, ಸಮಾಜ ಸೇವಕ ಸಿದ್ಧಾರ್ಥ ವಾಡೆನ್ನವರ, ಮಾಜಿ ಗ್ರಾಪಂ ಉಪಾಧ್ಯಕ್ಷ ಕೆಂಪಣ್ಣ ಕುರನಿಂಗ, ಮಂಜು ಮೇತ್ರಿ, ಕೆಂಪಣ್ಣ ಕುರನಿಂಗ, ಬರಮಪ್ಪ ಬಾಗೋಜಿ, ಪಿಕೆಪಿಎಸ್ ಸಂಘದ ಅಧ್ಯಕ್ಷ ಮಹಾದೇವ ಅಂಗಡಿ, ಸ್ಡಿಎಂಸಿ ಮಾಜಿ ಅಧ್ಯಕ್ಷ ಸದಾಶಿವ ಸಣದಿ, ಮುತ್ತಪ್ಪ ಬದ್ರಶೆಟ್ಟಿ, ಬರಮಪ್ಪ ಉದ್ದಪಗೋಳ, ಬಾಳಪ್ಪ ಐದಮಣಿ, ಸುರೇಶ ಸಿಂಗಾಡಿ, ಯಮನಪ್ಪ ಮೆಳವಂಕಿ, ಪಿಡಿಓ ಶ್ರೀಕಾಂತ ಯಡ್ರಾವಿ, ಧರೆಪ್ಪ ಬ್ಯಾಕೂಡ, ಗಂಗಪ್ಪ ಐದಮಣಿ, ಪ್ರಭಾ ದಿವಾಕರ, ಬಾಲಚಂದ್ರ ಮೇತ್ರಿ, ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಹಿರಿಯ ಶಿಕ್ಷಕ ರವಿ ಹರಕಂತ್ರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸತೀಶ್ ಬಂದಿ ನಿರೂಪಿಸಿದರು. ಹಿರಿಯ ಶಿಕ್ಷಕ ಎಂ.ಬಿ.ಬಡಿಗೇರ ವಂದಿಸಿದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 