ಸೇವಾ ನಿವೃತ್ತಡಿ ಬೀಳ್ಕೊಡುಗೆ ಸಮಾರಂಭ
Retirement Farewell Ceremony
ಲೋಕದರ್ಶನ ವರದಿ
ರಬಕವಿ-ಬನಹಟ್ಟಿ 02 : ನಿವೃತ್ತಿ ಬೀಳ್ಕೋಡುಗೆ ಸಮಾರಂಭ ಒಂಥರಾ ಸಂತಸದ ಘಳಿಗೆಯು ಹೌದು, ಭಾವುಕದ ಕ್ಷಣವೂ ಹೌದು. 38 ವರುಷಗಳ ಕಾಲ ಸಹದ್ಯೋಗಿಗಳ ಜತೆಯಾಗಿ ದುಡಿದು, ನಿವೃತ್ತಿಯಾಗೋರ ಕಣ್ಣಲ್ಲಿ ನೀರು ತುಂಬೋದು ಸಹಜ. ಪ್ರಾಮಾಣಿಕತೆ, ದಕ್ಷತೆ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ, ನಿವೃತ್ತಿ ಹೊಂದಿರವರ ಜೀವನ ಸುಖಕರವಾಗಿ ಸಾಗಲಿ ಎಂದು ಹಿರಿಯ ಪತ್ರಕರ್ತ ಪ್ರಭು ಭಾ. ಕೋಪರ್ಡೆ ಹೇಳಿದರು. ಬನಹಟ್ಟಿಯ ಕೆ.ಎಚ್.ಡಿ.ಸಿ.ಯ ಮಗ್ಗ ಪೂರ್ವ ಸಂಸ್ಕರಣಾ ಘಟಕದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶ್ರೀನಿವಾಸ ಜ್ಯೋ. ಕೋಪರ್ಡೆ ಹಾಗೂ ಟಿಪ್ಪುಸುಲ್ತಾನ ಪಣಿಬಂಧ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಯೋಜನಾಡಳಿತಾಧಿಕಾರಿ ವಿಜಯಕುಮಾರ ಚಲವಾದಿ ಮಾತನಾಡಿ, ವೃತ್ತಿಯಿಂದ ನಿವೃತ್ತಿ ಅನಿವಾರ್ಯ, ನಿವೃತ್ತಿಯವರೆಗೆ ದುಡಿಮೆ ಅನಿವಾರ್ಯ. ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸೌಹಾರ್ದಯುತವಾಗಿ ನಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಸೇವೆ ಸಲ್ಲಿಸಿ, ಇಬ್ಬರೂ ಅಚ್ಚುಕಟ್ಟಾಗಿ ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೀರಿ. ನಿಮ್ಮ ಮುಂದಿನ ಜೀವನ ಆನಂದಮಯವಾಗಿರಲಿ ಎಂದರು. ಸುಧೀಂದ್ರ ಕುಲಕರ್ಣಿ, ಈರಣ್ಣ ಶಿರಹಟ್ಟಿ, ಶರತ್‌ಕುಮಾರ ಜಂಬಗಿ, ಮಲ್ಲು ದಾವಣಗೇರಿ, ಮೋಹನ ಮನವಾಡೆ, ಅಪ್ಪಣ್ಣ ಹನಗಂಡಿ, ಸಂಗಪ್ಪ ಕಾಂಬಳೆ, ನೌಶಾದ ಗೋಕಾಕ, ಕುಲಶೇಖರ ದಂದರಗಿ, ಗುಲಾಬ ಹುಸೇನ ಮಂಗಳವೇಡೆ, ಉಸ್ಮಾನ ಮುನ್ನೊಳಿ ಸೇರಿದಂತೆ ಕೆ.ಎಚ್.ಡಿ.ಸಿ.ಯ ಸಿಬ್ಬಂದಿ ಉಪಸ್ಥಿತರಿದ್ದರು.
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ 