ಈದಗಾ ಕಮೀಟಿ ವತಿಯಿಂದ ನಿವೃತ್ತ ನೌಕರರಿಗೆ ಸನ್ಮಾನ

ಈದಗಾ ಕಮೀಟಿ ವತಿಯಿಂದ ನಿವೃತ್ತ ನೌಕರರಿಗೆ ಸನ್ಮಾನ  Retired employees honored by Eidga Committee

ಈದಗಾ ಕಮೀಟಿ ವತಿಯಿಂದ ನಿವೃತ್ತ ನೌಕರರಿಗೆ ಸನ್ಮಾನ  

ತಾಳಿಕೋಟಿ 03: ಪಟ್ಟಣದ ಈದಗಾ ಶಾದಿ ಮಹಲ್ ಶಾಪಿಂಗ್ ಕಾಂಪ್ಲೆಕ್ಸ್‌ ಕಮಿಟಿ ವತಿಯಿಂದ ವಯೋನಿವೃತ್ತಿ ಹೊಂದಿದ ಸಮಾಜದ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.ರವಿವಾರ ಪಟ್ಟಣದ ಈದಗಾ ಶಾದಿ ಮಹಲನಲ್ಲಿ ಹಮ್ಮಿಕೊಂಡ ಈ ಸನ್ಮಾನ ಸಮಾರಂಭದಲ್ಲಿ ವಯೋ ನಿವೃತ್ತಿ ಹೊಂದಿದ ಶಿಕ್ಷಕ ಆರ್‌.ಎಂ.ಡೋಣಿ, ಕೃಷಿ ಅಧಿಕಾರಿ ಎಂ.ಎಚ್‌.ಬೀಳಗಿ, ಮುಸ್ಲಿಂ ಬ್ಯಾಂಕ್ ವ್ಯವಸ್ಥಾಪಕ ಎ.ಎಚ್‌.ಢಾಲಾಯತ ಇವರನ್ನು ಕಮಿಟಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಈದಗಾ ಶಾದಿ ಮಹಲ್ ಕಾಂಪ್ಲೆಕ್ಸ್‌ ಕಮಿಟಿ ಅಧ್ಯಕ್ಷ ಮಾಸೂಮಸಾಬ ಕೆಂಭಾವಿ ಮಾತನಾಡಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯೆ ನಿಷ್ಠೆ ಹಾಗೂ ಪ್ರಾಮಾಣಿಕತೆಯೊಂದಿಗೆ ಸೇವೆಯನ್ನು ಸಲ್ಲಿಸಿ ಇತ್ತೀಚಿಗೆ ನಿವೃತ್ತರಾದ ನಮ್ಮ ಸಮಾಜದ ಈ ಮೂವರು ಸದಸ್ಯರು ನಿವೃತ್ತಿಯ ನಂತರ ಸಮಾಜ ಸೇವೆಯನ್ನು ಮಾಡುವ ಉದ್ದೇಶದಿಂದ ನಮ್ಮ ಕಮಿಟಿಯಲ್ಲಿ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಇದು ನಮಗೆಲ್ಲರಿಗೂ ಸಂತೋಷದ ವಿಷಯವಾಗಿದ್ದು ಇವರ ಅಪಾರ ಅನುಭವವನ್ನು ಸಮಾಜದ ಅಭಿವೃದ್ಧಿಗಾಗಿ ಬಳಸಿಕೊಳ್ಳಲು ಅವಕಾಶ ಸಿಕ್ಕಿದೆ ಎಂದರು.  

ಸನ್ಮಾನ ಸ್ವೀಕರಿಸಿ ನಿವೃತ್ತ ಶಿಕ್ಷಕ,ಕಮಿಟಿ ಖಜಾಂಚಿ ರೋಶನ್ ಡೋಣಿ ಮಾತನಾಡಿ ನಿವೃತ್ತಿಯ ನಂತರ ನಮಗೆ ಸಮಾಜ ಸೇವೆ ಮಾಡುವ ಅವಕಾಶವನ್ನು ನೀವು ಮಾಡಿಕೊಟ್ಟಿದ್ದೀರಿ ನಿಮಗೆ ನಾವು ಋಣಿಯಾಗಿದ್ದೇವೆ ಈ ಕಮಿಟಿಯ ಕಾರ್ಯ ಕೇವಲ ಮದುವೆಗಳನ್ನು ಮಾಡಲು ಅನುಕೂಲ ಮಾಡಿಕೊಡುವುದಕ್ಕೆ ಮಾತ್ರ ಸೀಮಿತ ಆಗಬಾರದು ಸಮುದಾಯದ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಂಡು ಕೆಲಸ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ನಾವು ನಿಮ್ಮ ಜೊತೆಯಲ್ಲಿದ್ದು ಹಗಲು ರಾತ್ರಿ ಎನ್ನದೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.  

ಸನ್ಮಾನಿತ ನಿವೃತ್ತ ನೌಕರರಾದ ಎಂ.ಎಚ್ ಬೀಳಗಿ ಹಾಗೂ ಎ.ಎಚ್‌.ಢಾಲಾಯತ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕಮಿಟಿ ಉಪಾಧ್ಯಕ್ಷ ಅಬ್ದುಲ್ ರಜಾಕ ಮನಗೂಳಿ, ಕಾರ್ಯದರ್ಶಿ ಅಬ್ದುಲ್ ರೆಹಮಾನ ಎಕೀನ, ಸದಸ್ಯರಾದ ಸಯ್ಯದ್ ಶಕೀಲ ಅಹಮದ ಖಾಜಿ, ಅಬ್ದುಲ್ ಗನಿಸಾಬ ಲಾಹೋರಿ, ಅಲ್ಲಾಭಕ್ಷ ನಮಾಜಕಟ್ಟಿ, ಸಿಕಂದರಸಾಬ ವಠಾರ, ಎಂ.ಎ.ಮೈತ್ರಿ, ನಿರಂಜನಶಾ ಮಕಾಂದಾರ, ಅಬ್ದುಲ್ ಸತ್ತಾರ ಅವಟಿ, ಮೋದಿನಸಾಬ ನಗಾರ್ಚಿ, ಮುನ್ನಾ ಅರ್ಜುಣಗಿ, ಅಬ್ದುಲ್ ರಜಾಕ ಕುಂಬಾರವಾಡಿ, ಮೊಹಮ್ಮದ್ ಬೇಪಾರಿ, ಮಿರಾಜ ಬೇಪಾರಿ, ಮಹಮ್ಮದ್ ಅತ್ತಾರ, ಮೋದಿನ ಹೊನ್ನುಟಗಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ಚೋರಗಸ್ತಿ, ಎ.ಎಸ್‌.ನಮಾಜ ಕಟ್ಟಿ, ಸಿಕಂದರ ಡೋಣಿ, ಫಯಾಜ್ ಉತ್ನಾಳ, ರಫೀಕ ಮನ್ಸೂರ, ನದೀಂ ಕಡು ಇದ್ದರು.