ಪಂಚಮಸಾಲಿ ಗುರುಪೀಠದ ಶ್ರೀಗಳಿಂದ ಚೆನ್ನಮ್ಮ ವೃತ್ತ ಮರುಸ್ಥಾಪನೆ

ಸಿಂದಗಿ01: ಪಟ್ಟಣದ ವಿಜಯಪುರಕ್ಕೆ ಹೋಗುವ ಮಾರ್ಗಮದ್ಯ ಚಿಕ್ಕಸಿಂದಗಿ ರಸ್ತೆಯ ಮಧ್ಯದಲ್ಲಿ ಮೇ. 31 ರಂದು ನಿಮರ್ಿಸಲಾದ ವೀರರಾಣಿ ಚೆನ್ನಮ್ಮ ವೃತ್ತವನ್ನು ತಾಲೂಕಾಡಳೀತ ರಾತ್ರೋರಾತ್ರಿ ನೆಲಸಮ ಮಾಡಿದೆ ಇದಕ್ಕೆ ಸಮಾಜದ ಮುಖಂಡರು ವೃತ್ತ ಸ್ಥಳಕ್ಕೆ ದೌಡಾಯಿಸಿ ನಂತರ ತಹಶೀಲ್ದಾರ ಕಛೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆಯಿತು.

    ಕಳೆದ ಮೇ. 30ರ ರಾತ್ರಿ ಏಕಾಎಕಿಯಾಗಿ ವೀರವನಿತೆ ರಾಣಿ ಚೆನ್ನಮ್ಮ ವೃತ್ತವನ್ನು ತಾಲೂಕಾಡಳಿತ ನೆಲಸಮ ಮಾಡಿತ್ತು. ಅದನ್ನು ಮತ್ತೆ 31 ರಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಸ್ವಾಮಿಗಳ ನೇತೃತ್ವದಲ್ಲಿ ಮರುಸ್ಥಾಪನೆ ಮಾಡಲಾಗಿತ್ತು ಆದರೆ ಇದಕ್ಕೆ ತಾಲೂಕಾಡಳಿತವಾಗಲಿ, ಪುರಸಭೆಯಾಗಲಿ ಂಯಾವದೇ ರೀತಿಯ ಅಡ್ಡಿ ಪಡಿಸಿರಲ್ಲಿಲ್ಲ ಅಂದೇ 31 ಸಾಯಂಕಾಲ ಇಂಡಿ ಉಪವಿಭಾಗಾಧಿಕಾರಿ ನಿಹಾಲ್ ಲೋಖಂಡೆ, ಸಿಂದಗಿ ತಹಶೀಲ್ದಾರ ಸಂಜೀವಕುಮಾರ ದಾಸರ, ಸಿಪಿಐ ಸತೀಶಕುಮಾರ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಸೇರಿದಂತೆ ಸಮಾಜದ ಮುಖಂಡರ ಸಮ್ಮುಖದಲ್ಲಿ ಸಭೆ ಸೇರಿಸಿ ಆ ಜಾಗೆಯು ರಾಜ್ಯ ಹೆದ್ದಾರಿಯ ಆದೀನಕ್ಕೊಳಪಡುವದರಿಂದ ಅದನ್ನು ಹೊರತು ಪಡಿಸಿ ಚಿಕ್ಕಸಿಂದಗಿ ಬೈಪಾಸ್ದಿಂದ ಬಸವೇಶ್ವರ ವೃತ್ತ್ದ ವರೆಗಿನ ಪುರಸಭೆಯ ವ್ಯಾಪ್ತಿಯ ಸ್ಥಳವನ್ನು ಮೂತರ್ಿ ಪ್ರತಿಸ್ಥಾಪನೆಗೆ ಸ್ಥಳವಕಾಶ ಮಾಡಿಕೊಡುತ್ತೇವೆ  ಎಂದು ಭರವಸೆ ನೀಡಿದ ನಂತರ ಸಮಾಜದ ಮುಖಂಡರು ಪಯರ್ಾಯ ಸ್ಥಳ ಗುರುತಿಸಿ ಅಲ್ಲಿ ತಾಲೂಕಾ ಅಧಿಕಾರಿಗಳಿಂದಲೇ ಪೂಜೆ ಮಾಡಿ ವೃತ್ತಕ್ಕೆ ಚಾಲನೆ ನೀಡಬೇಕು ತದನಂತರವೇ ಸದ್ಯ ಇರುವ ವೃತ್ತವನ್ನು ತೆರವುಗೊಳಿಸಬೇಕು ಎನ್ನುವ ಶರತ್ತು ಬದ್ಧ ಒಪ್ಪಿಗೆ ನಂತರ ಸಭೆ ಮುಕ್ತಾಯ ಗೊಳಿಸಲಾಯಿತು.

     ಮಾತು ತಪ್ಪಿದ ತಾಲೂಕಾಡಳಿತ ಇಷ್ಟೆಲ್ಲಾ ಭರವಸೆ ನೀಡಿದ  ತಾಲೂಕಾಡಳಿತ 31ರ ರಾತ್ರಿ ಏಕಾಎಕಿ ಮರುಸ್ಥಾಪನೆಯಾದ ಚೆನ್ನಮ್ಮ ವೃತ್ತವನ್ನು ನೆಲಸಮ ಮಾಡಿದ್ದು ಸ್ವಾತಂತ್ರ ಹೋರಾಟಗಾತರ್ಿಗೆ ಮಾಡಿದ ಅವಮಾನವಾಗಿದೆ ಇಲ್ಲಿ ಚೆನ್ನಮ್ಮಳನ್ನು ತಾಲೂಕಾಡಳಿತ ಒಂದು ಸಮೂದಾಯಕ್ಕೆ ಸಿಮೀತಗೊಳಿಸಿದೆ ವಿನ:ಹ ಅವಳನ್ನೊಬ್ಬ ದೇಶಕ್ಕಾಗಿ ವೀರಮರಣ ಹೊಂದಿದ ಸ್ವಾತಂತ್ರಗಾತರ್ಿಯನ್ನಾಗಿ ಗುರುತಿಸದೇ ಇದ್ದದ್ದು ಖೇದಕರ ಸಂಗತಿಯಾಗಿದೆ ಇದರಲ್ಲಿ ತಾಲೂಕಾಡಳಿತವು ಯಾರದೋ ಒತ್ತಾಯಕ್ಕೆ ಮಣಿದು ಮತ್ತು ಯಾರನ್ನೋ ಮೆಚ್ಚಸಲಿಕ್ಕಾಗಿ ಈ ಹೇಯ ಕೃತ್ಯಕ್ಕೆ ಇಳಿದಿದೆ ಎಂದು ಸಮಾಜದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

 ಈ ಘಟನೆಯ ಹಿನ್ನಲೆಯಲ್ಲಿ ಮತ್ತೆ ಜೂ.2 ರಂದು 11 ಗಂಟೆಗೆ ಬಸವ ಮಂಟಪದಲ್ಲಿ ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಸಮಾಜದ ಮುಖಂಡರ ಸಭೆ  ಕರೆಯಲಾಗಿದ್ದು ಮುಂದಿನ ಬೆಳವಣಿಗಳ ಕುರಿತು ಚಚರ್ೆ ಹಾಗೂ ನಿರ್ಣಯ ಕೈಕೊಳ್ಳಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದರು.        

               ಈ ಸಂದರ್ಭದಲ್ಲಿ ಅಶೋಕ ಮನಗೂಳಿ, ಸಂತೋಷ ಪಾಟೀಲ ಡಂಬಳ, ಸೋಮನಗೌಡ ಬಿರಾದಾರ, ಗುರು ಬಸರಕೋಡ, ಎಸ್.ಬಿ.ಪಾಟೀಲ ಗುಂದಗಿ, ಮುತ್ತು ಶಾಬಾದಿ, ಮಲ್ಲು ಬಾದನ್, ಚಂದ್ರುಗೌಡ ಪಾಟೀಲ, ಶ್ರೀಶೈಲ ಯಳಮೇಲಿ, ಆನಂದ ಶಾಬಾದಿ, ನಿಂಗರಾಜ ಅತನೂರ, ದಾನಪ್ಪಗೌಡ ಚೆನ್ನಗೊಂಡ, ಶಿವರಾಜ ಪಾಟೀಲ, ಜಿಪಂ ಸದಸ್ಯ ಗುರುರಾಜ ಪಾಟೀಲ, ಜಗು ದೇಸಾಯಿ, ಅರವಿಂದ ಹಂಗರಗಿ, ಮಹೇಶ ದೇಸಾಯಿ, ಚೇತನಗೌಡ ಪಾಟೀಲ, ಚೇತನ ರಾಂಪೂರ, ಮಲ್ಲು ಬಿರಾದಾರ, ರಾಮು ಯಳಮೇಲಿ, ಶ್ರೀಶೈಲ ಚಳ್ಳಗಿ, ಶಂಕರ ಬೋರಗಿ, ನಿಂಗನಗೌಡ ಬಿರಾದಾರ, ಬಾಪುಗೌಡ ಬಿರಾದಾರ ನಾಗಾವಿ,  ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು.