ಮಾನವ ಹಕ್ಕುಗಳನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ: ಡಾ. ಅಜಿತ ಪ್ರಸಾದ
Respecting human rights is the responsibility of every citizen: Dr. Ajit Prasad
ಲೋಕದರ್ಶನ ವರದಿ
ಧಾರವಾಡ 15: 1939 ರಿಂದ 45 ರವರೆಗೂ ನಡೆದ ಮಹಾಯುದ್ಧದ ಸಂದರ್ಭದಲ್ಲಿ ವಿಶ್ವದ ಬಹುತೇಕ ಜನರು ಅದರ ನೋವನ್ನು ಅನುಭವಿಸಿದರು. ಲಕ್ಷಾಂತರ ಜನರು ಮೃತಪಟ್ಟರು. ಈ ಕಾರಣದಿಂದ ಮಾನವ ಹಕ್ಕುಗಳ ಸಂರಕ್ಷಣೆ ಅವಶ್ಯಕತೆ ಅನಿವಾರ್ಯ ಎಂದು ವಿಶ್ವಸಂಸ್ಥೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು. ಡಿಸೆಂಬರ್ 10 1948 ರಂದು ಮೂವತ್ತು ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆ ಅಂಗೀಕರಿಸಿತು. ಇದರ ಮುಖ್ಯ ಉದ್ಧೇಶ ವಿಶ್ವದಲ್ಲಿ ಶಾಂತಿ ದೇಶದಲ್ಲಿ ಒಳ್ಳೆ ಸಂಬಂಧ ಬೆಳೆಸುವುದಾಗಿತ್ತು ಎಂದು ಸಂಸ್ಥೆ ಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ಜೆ.ಎಸ್.ಎಸ್. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಮಾನವ ಹಕ್ಕುಗಳ ಸಂಘ ಮತ್ತು ಎನ್.ಎಸ್.ಎಸ್. ಘಟಕದ ವತಿಯಿಂದ ಹಮ್ಮಿಕೊಂಡ ಮಾನವ ಹಕ್ಕುಗಳ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಮೂಲಕ ಮಾನವ ಹಕ್ಕುಗಳನ್ನು ಎತ್ತಿ ಹಿಡಿಯಲಾಯಿತು. ಮಾನವೀಯತೆ ಮೌಲ್ಯಗಳನ್ನು ಜನ ಬೆಳೆಸಿಕೊಂಡರೆ ಸುಖ ಶಾಂತಿ ನೆಮ್ಮದಿ ಕಾಣಬಹುದು. ವಿದ್ಯಾರ್ಥಿಗಳು ಈ ದಿನವನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಆರೋಗ್ಯಕರ ವಾತಾವರಣ ಸದ್ಭಾವ ಬೆಳೆಯಲು ಸಾಧ್ಯ ಎಂದರು.
ಮುಖ್ಯ ಅತಿಥಿ, ಹೈಕೋರ್ಟ ವಕೀಲರಾದ ಶ್ರೀ ಎ. ವೀರಣ್ಣ 2025 ರ ಮಾನವ ಹಕ್ಕುಗಳ ಘೋಷಣೆಯಾದ "ಮಾನವ ಹಕ್ಕುಗಳು ಪ್ರತಿ ನಿತ್ಯ ಜೀವನದಲ್ಲಿ "ಈ ವಿಷಯ ಕುರಿತು ಪ್ರತಿಯೊಬ್ಬ ವ್ಯಕ್ತಿ ತನ್ನ ದಿನದ ಚಟುವಟಿಕೆಯಲ್ಲಿ ಮಾನವ ಹಕ್ಕುಗಳ ಗೌರವಿಸಿ ನಡೆಯಬೇಕು. ಇದರಿಂದ ಸಮಾಜದಲ್ಲಿ ಶಾಂತಿ ಬೆಳೆಸಲು ಸಾಧ್ಯ. ಸಮಾನತೆ, ಜಾತ್ಯಾತೀತ, ವಾಕ್ ಸ್ವಾತಂತ್ರ್ಯ ಮುಂತಾದ ಮಾನವ ಹಕ್ಕುಗಳನ್ನು ಎತ್ತಿ ತೋರಿಸುತ್ತವೆ. ಜಾತಿ ಮತ ಧರ್ಮ ಇದನ್ನು ಯಾವುದೇ ಗಮನಕ್ಕೆ ತೆಗೆದುಕೊಳ್ಳದೆ ಸಮಾಜದಲ್ಲಿ ಮಾನವೀಯತೆಯನ್ನು ತರಲು ವಿದ್ಯಾರ್ಥಿಗಳು ಮುಂದಾಗಬೇಕೆಂದು ಹೇಳಿದರು
ಡಾ. ಸೂರಜ ಜೈನ್, ಮಹಾವೀರ ಉಪಾಧ್ಯೆ, ಪ್ರೊ. ಬಲಭೀಮ ಹಾವನೂರ, ಡಾ. ಆರ್.ವಿ.ಚಿಟಗುಪ್ಪಿ, ಉಪಸ್ಥಿತರಿದ್ದರು.
ಸೋನಿಯಾ ಸ್ವಾಗತಿಸಿದರು. ಚಾರುಲತಾ ಅತಿಥಿಗಳನ್ನು ಪರಿಚಯಿಸಿದರು. ಲಕ್ಷ್ಮೀ ನಿರೂಪಿಸಿದರು. ಅಶ್ವಿನಿ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 