22ನೇ ವಾರ್ಡಿನಲ್ಲಿ ಮೂಲಭೂತ ಸೌಲಭ್ಯ ನೀಡುವಂತೆ ನಿವಾಸಿಗಳ ಒತ್ತಾಯ

22ನೇ ವಾರ್ಡಿನಲ್ಲಿ ಮೂಲಭೂತ ಸೌಲಭ್ಯ ನೀಡುವಂತೆ ನಿವಾಸಿಗಳ ಒತ್ತಾಯ   Residents demand basic facilities in Ward 22

ಲಕ್ಷ್ಮೇಶ್ವರ"  07: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ 22ನೇ ವಾರ್ಡಿನಲ್ಲಿ ಸೂಕ್ತ ರಸ್ತೆ ಇಲ್ಲದೆ ನಿವಾಸಿಗಳು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದು ಮಳೆ ಬಂದರೆ ಸಾಕು ರಸ್ತೆಗಳೆಲ್ಲ ಕೆಸರುಗದ್ದೆಗಳಂತೆ ಆಗುತ್ತವೆ ಅಂತಾ ರಸ್ತೆಯಲ್ಲಿ ವೃದ್ಧರು ಮಕ್ಕಳು ಓಡಾಡುವುದು ದುಸ್ತರವಾಗಿದೆ ಹಾಗೂ ವಾರ್ಡಿನಲ್ಲಿ ಸರಿಯಾದ ಚರಂಡಿಗಳು ವ್ಯವಸ್ಥೆ ಬೀದಿ ದೀಪಗಳ ನಿರ್ವಹಣೆ ಸಹ ಸರಿಯಾಗಿ ಇಲ್ಲಾ  ಪುರಸಭೆಗೆ ಟ್ಯಾಕ್ಸ್‌ ಕಟ್ಟುತ್ತೇವೆ ನಮ್ಮ ವಾರ್ಡಿನಲ್ಲಿ ಹೆಚ್ಚಿನ ಟ್ಯಾಕ್ಸ್‌ ತೆಗೆದುಕೊಳ್ಳುತ್ತಾರೆ ಆದರೂ ಸಹ ಮೂಲಭೂತ ಸೌಲಭ್ಯಗಳಾದ ಚರಂಡಿ ರಸ್ತೆ ಕುಡಿಯುವ ನೀರು ಬೀದಿ ದೀಪ ಉದ್ಯಾನವನ ನಿರ್ವಹಣೆ ಇಲ್ಲದೆ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದೇವೆಇದೇ ವಿಷಯವಾಗಿ ಈಗಾಗಲೇ ಪುರಸಭೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನ ವಾಗುತ್ತಿಲ್ಲ ಎಂದು ನಿವಾಸಿಗಳು ಪುರಸಭೆ ವಿರುದ್ಧ ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ಸಮಯದಲ್ಲಿ ವಾರ್ಡಿನ ನಿವಾಸಿಗಳಾದ ಉದಯ ಮಾಂಡ್ರೆ ಮಲ್ಲಿಕಾರ್ಜುನ್ ನಾಗಲೋಟಿ ರಮೇಶ್ ನೆಗಳೂರು ಎಂ ಎಚ್ ಹಣಗಿ ಪರಶುರಾಮಸಾ ಧರ್ಮದಾಸ  ಲಕ್ಷ್ಮಣಸಾ ಧರ್ಮದಾಸ ಎಂ ಎಂ ಅಣ್ಣಿಗೇರಿ ಸಂಜೀವ್ ಮಾಂಡ್ರೆ ನರಸಿಂಹರಾವ್ ದೇವಗಿರಿಕರ ರೂಪಾ ಮಾಂಡ್ರೆ ಪ್ರೇಮಾ ಧರ್ಮದಾಸ ಮಹೇಶ ಮಾಂಡ್ರೆ ಸುಮಾ ಮಾಂಡ್ರೆ ಅಕ್ಷತಾ ಮಾಂಡ್ರೆ ಕಸ್ತೂರಿಬಾಯಿ ಹಂಚಾಟೆ ಗಂಗಾಧರ ಮಾಂಡ್ರೆ ಮಧು ಮಾಂಡ್ರೆ ಗಂಗೂಬಾಯಿ ಎಲ್ ಧರ್ಮದಾಸ ಅಕ್ಷತಾ ಧರ್ಮ ದಾಸ ಅರ​‍್ಿತ ಬಾಂಡಗೆ ವಿಶಾಲ ಧರ್ಮದಾಸ್ ರಾಜೀವ ಕುರಿ ರಶೀದ್ ಮುಂಡರಗಿ ಗಂಗಮ್ಮ ನಾಗಲೋಟಿ ಸೇರಿದಂತೆ 22ನೇ ವಾರ್ಡಿನ ನಿವಾಸಿಗಳು ಇದ್ದರು.