ಪಂಚಮಸಾಲಿ ಸಮಾಜಕ್ಕೆ ಮೀಸಲಾತಿಗೆ ಹೋರಾಟ
Reservation struggle for the Panchamasali community
ಸಿಂದಗಿ 29: ಪಂಚಮಸಾಲಿ ಸಮಾಜವನ್ನು ಇಡೀ ಜಗತ್ತಿಗೆ ಪರಿಚಿಯಿಸಿ ಸಮಾಜದ ಮಕ್ಕಳಿಗೆ ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಮೀಸಲಾತಿಕ್ಕಾಗಿ ಹೊರಾಡುತ್ತಿರುವ ಜಗದ್ಗುರು ಜಯಬಸವ ಮೃತುಂಜಯ ಮಹಾಸ್ವಾಮಿಗಳನ್ನು ಪೀಠದಿಂದ ಉಚ್ಚಾಟನೆ ಮಾಡಿ ಬಹಳ ಅವಮಾನ ಮಾಡಿದ ಶಾಸಕ ವಿಜಯ ಕಾಶಪ್ಪನವರಿಗೆ ಮುಂದೆ ಸಮಾಜದ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಾಲೂಕು ಅಧ್ಯಕ್ಷ ಎಂ.ಎಂ. ಹಂಗರಗಿ ಅವರು ಕುಟುಕ್ಕಿದ್ದಾರೆ.
ಪಟ್ಟಣದ ಬಸವ ಮಂಟಪದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ವಾಮಿಗಳು ಸಮಾಜಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸರಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದರೆ ಕಾಶಪ್ಪನವರು ಕಳೇದ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಹೊರಾಟ ನಡೆಸಿದ್ದರು ತಾವೆ ಸರಕಾರದಲ್ಲಿರುವಾಗ ಸಮಾಜಕ್ಕೆ ನ್ಯಾಯ ಕೊಡಿಸುವಲ್ಲಿ ವಿಫಲರಾಗಿ ಸರಕಾರದ ಒಬ್ಬ ಪ್ರತಿನಿಧಿಯಾಗಿ ಮುಖ್ಯಮಂತ್ರಿಗಳಿಗೆ ಅಡಿಯಾಳಾಗಿ ಸಮಾಜಕ್ಕೆ ಅನ್ಯಾಯವೆಸಗುತ್ತಿದ್ದಾರೆ ಸಮಾಜದ ಸ್ವಾಮಿಜಿಗಳನ್ನು ಪೀಠದಿಂದ ಉಚ್ಚಾಟನೆ ಮಾಡಿ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದಿರಿ ಇದನ್ನು ಸಮಾಜ ಎಂದು ಮರೆಯುವುದಿಲ್ಲ ಮೂಂದಿನ ದಿನಮಾನಗಳಲ್ಲಿ ಸಮಾಜ ತಕ್ಕ ಉತ್ತರ ನೀಡುತ್ತದೆ ಎಂದು ಏಚ್ಚರಿಕೆ ನೀಡಿದ್ದಾರೆ.
ಉದ್ಯಮ ಘಟಕದ ರಾಜ್ಯಾಧ್ಯಕ್ಷ ಶಿವರಾಜ್ ಪೊಲೀಸ್ ಪಾಟೀಲ್ (ಭಾಸಗಿ) ಅವರು ಮಾತನಾಡಿ ಕಾಶಪ್ಪನವರು ಕಟ್ಟಿದ ಪೀಠ ಮತ್ತು ಟ್ರಸ್ಟ್ ಕುಟುಂಬದಾಗಿದೆ ಅವರ ವೈಯಕ್ತಿಕ ಹಿತಾಸಕ್ತಿ ಗೋಸ್ಕರ ಪೀಠ ಮತ್ತು ಟ್ರಸ್ಟನ್ನು ಮಾಡಿರುತ್ತಾರೆ. ಕಾಶಪ್ಪನವರು ಮತ್ತು ಟ್ರಸ್ಟಿಗಳು ಇವಾಗೇನು ಪೀಠದಿಂದ ಉಚ್ಚಾಟನೆ ಮಾಡಿದನ್ನು ಉಗ್ರವಾಗಿ ಖಂಡಿಸಿದ್ದಾರೆ.
ಮಿಸಲಾತಿ ಹೊರಾಟ ಒಕ್ಕೂಟದ ಅದ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಮಾತನಾಡಿ, ಕಾಶಪ್ಪನವರು ಟ್ರಸ್ಟ್ ಮಾಡಿಕೊಂಡು ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ಭದ್ರಭೂನಾದಿಗೋಸ್ಕರ 750 ಕೀಮಿ ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಿ ಗುರುಗಳ ಮೆಚ್ಚುಗೆಗೆ ಗಳಿಸಿ ಹುನಗುಂದದ ಶಾಸಕರಾಗಿ ಮೊದಲು ನಮ್ಮ ಸರ್ಕಾರ ಬಂದ ಮೇಲೆ 2ಬಿ ಅಥವಾ ಟು ಡಿ ಕೊಡುತ್ತೇವೆ ಅದೇ ರೀತಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ನಮ್ಮ ಪಕ್ಷ ಆಡಳಿತ ಬಂದ ಮೇಲೆ 2ಎ 2ಡಿ ಎಂದು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿದ್ದರು ಕೂಡಲಶ್ರೀಗಳ ಹಾಗೂ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ಇತರ ಪಂಚಮಸಾಲಿ ನಾಯಕರನ್ನು ಸುವರ್ಣ ಸೌಧದ ಮುಂದೆ ಲಾಟಿ ಏಟು ಕೊಡಿಸಿ ಹೋರಾಟವನ್ನು ಹತ್ತಿಕ್ಕಲು ಮುಂದಾಗಿದ್ದರು. ತಮ್ಮ ಬೆಂಬಲಿಗರನ್ನು ಹೇಳಿ ಪೀಠಕ್ಕೆ ಬೀಗ ಹಾಕಿ ರಾಜಕೀಯ ಜೀವನ ಗೋಸ್ಕರ ಸಮಾಜವನ್ನು ಬಲಿ ಕೊಡುತ್ತಿದ್ದಾರೆ ಕೂಡಲ ಶ್ರೀಗಳು 8ನೇ ಹಂತದ ಹೋರಾಟ ಪ್ರಾರಂಭ ಮಾಡಿದ್ದಾರೆ ಇದನ್ನು ಸಹಿಸದ ಗುರುಗಳನ್ನು ಪೀಠದಿಂದ ಉಚ್ಚಾಟನೆ ಮಾಡಿ ಪರಮಾಧಿಕಾರ ವೆಸಗಿದ್ದಾರೆ ಎಂದು ದೂರಿದರು.
ನಿವೃತ್ತ ಕೃಷಿ ಅಧಿಕಾರಿ ವಿ ಬಿ ಕುರುಡೆ ಮಾತನಾಡಿ, ಮಳೆ ಗಾಳಿ ಚಳಿ ಹಗಲು ರಾತ್ರಿ ಎನ್ನದೆ ಸಮಾಜಕ್ಕೋಸ್ಕರ ದುಡಿದಿದ್ದಾರೆ ಮತ್ತು ಹೋರಾಟ ನಡೆಸುತ್ತಿದ್ದಾರೆ ಸುಮಾರು ಒಂದು ಕೋಟಿ 50 ಲಕ್ಷ ಪಂಚಮಸಾಲಿ ಸಮಾಜದ ಬಾಂಧವರು ಗುರುಗಳಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಕೂಡಲಶ್ರೀಗಳು ಮಠ ಕಟ್ಟಿಲ್ಲ ಸಮಾಜ ಕಟ್ಟಿದ್ದಾರೆ. ಹಣ ಗಳಿಸಿಲ್ಲ ಜನಗಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ್ ಅಗಸಬಾಳ, ಆರ್ ಡಿ ದೇಸಾಯಿ, ಆನಂದ್ ಶಾಬಾದಿ, ಮಲ್ಲನಗೌಡ ಪಾಟೀಲ್ ಇಬ್ರಾಹಿಂಪುರ್, ಶಿವಾನಂದ ಬಡಾನೂರ, ಶಂಕರ್ ಬಿರಾದಾರ್, ದಾನಪ್ಪ ಜೋಗುರ್, ಗುರ್ಪಣ್ಣ ಮಳ್ಳಿ, ಗುರಣ್ಣ ಶಾಪುರ್, ದಾನೇಶ್ ಪರಂಪುರ್, ಬಸವರಾಜ ಐರೋಡಗಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 