ಮೀಸಲಾತಿ ನಮ್ಮ ಹಕ್ಕು ಅದನ್ನು ಪಡದೇ ತೀರುತ್ತೇವೆ : ಬಸವಜಯ ಮೃತ್ಯುಂಜಯ ಸ್ವಾಮೀಜಿ

ಮೀಸಲಾತಿ ನಮ್ಮ ಹಕ್ಕು ಅದನ್ನು ಪಡದೇ ತೀರುತ್ತೇವೆ : ಬಸವಜಯ ಮೃತ್ಯುಂಜಯ ಸ್ವಾಮೀಜಿ Reservation is our right: : Basavajaya Mrityunjaya Swamiji

ವಿಜಯಪುರ16: ನಗರದ ಸಿದ್ಧೇಶ್ವರ ದೇವಾಲಯ ಆವರಣದ ನೂತನ ಕಲ್ಯಾಣ ಮಂಟಪದಲ್ಲಿ ರವಿವಾರ ದಿ. 13ರಂದು ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ ಕೂಡಲ ಸಂಗಮ ಜಿಲ್ಲಾ ಘಟಕ ವಿಜಯಪುರ ವತಿಯಿಂದ ರಾಜ್ಯ ಮಟ್ಟದ ಕಾರ್ಯಕಾರಿ ಚಿಂತನಾಸಭೆ ಮುಂಬರುವ ಜಾತಿ ಜನಗಣತಿಯಲ್ಲಿ ಪಂಚಮಸಾಲಿ ಸಮಾಜ ಯಾವುದನ್ನು ನಮೂದಿಸಬೇಕು ಎಂಬುದರ ಕುರಿತು ಒಂದು ದಿನದ ಚರ್ಚೆ ಯಶಸ್ವಿಯಾಗಿ ಜರುಗಿತು.ಸಾನಿಧ್ಯ ವಹಿಸಿದ್ದ ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿ ಆಡಳಿತಕ್ಕೆ ಬಂದ ಯಾವುದೇ ಪಕ್ಷದ ಸರ್ಕಾರ ಪಂಚಮಸಾಲಿ ಸಮಾಜದ ಬಡ ರೈತರ, ಕೂಲಿ ಕಾರ್ಮಿಕರ, ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಹಿತಕ್ಕಾಗಿ ಸ್ಪಂದಿಸಿಲ್ಲ. ಹಿಂದಿನ ಬಿಜೆಪಿ ಸರ್ಕಾರ 2ಡಿ ಮೀಸಲಾತಿ ಕಲ್ಪಿಸಿ ಕಣ್ಣೊರೆಸುವ ತಂತ್ರ ನಡೆಸಿತು. ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವಂತು ಕಳೆದ ವರ್ಷ ಬೆಳಗಾವಿಯಲ್ಲಿ ವಿಕಾಸ ಸೌಧಕ್ಕೆ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಲು ಬಂದ ಮುಗ್ಧ ರೈತರು ಕಾರ್ಮಿಕರು, ಯುವಕರು, ವಕೀಲರು, ಮಹಿಳೆಯರನ್ನೂ ಲೆಕ್ಕಿಸದೇ ಪೊಲೀಸರ ಮೂಲಕ ಲಾಠಿ ಚಾರ್ಜ್‌ ಮಾಡಿಸುವ ಮೂಲಕ ನಮ್ಮ ಸಮಾಜದ ಮೇಲೆ ಘೋರ ಅನ್ಯಾಯ ಎಸಗಿದೆ. ನಾವು ಸಿದ್ದರಾಮಯ್ಯ ಸರ್ಕಾರ ಆಡಳಿತದಲ್ಲಿ ಇರುವ ತನಕ ಮೀಸಲಾತಿ ಭಿಕ್ಷೆ ಕೇಳಿಕೊಂಡು ಅವರ ಮನೆ ಬಾಗಿಲಿಗೆ ಹೋಗುವುದಿಲ್ಲ. ಮೀಸಲಾತಿ ನಮ್ಮ ಹಕ್ಕು ಅದನ್ನು ಪಡದೇ ತೀರುತ್ತೇವೆ ಎಂದು ಪ್ರತಿಜ್ಞೆಗೈದರು.ಸುಪ್ರೀಂಕೋರ್ಟ್‌ ಹಿರಿಯ ವಕೀಲ ಸಂಕೇತ್ ಏಣಗಿ ಮಾತನಾಡಿ ಲಿಂಗಾಯತರು ಜಾತಿ ಜನಗಣತಿಯಲ್ಲಿ ತಮ್ಮ ಹೆಸರನ್ನು ಬರೆಸುವಲ್ಲಿ ಗೊಂದಲದಲ್ಲಿದ್ದು, ಕೆಲವರು ಹಿಂದೂ ಪಂಚಮಸಾಲಿ, ವೀರಶೈವ ಪಂಚಮಸಾಲಿ, ಲಿಂಗಾಯತ ಪಂಚಮಸಾಲಿ ಎಂದು ಅನೇಕ ರೀತಿ ಬರೆಸುತ್ತಿದ್ದು ಈ ಗೊಂದಲ ನಿವಾರಣೆಯಾಗಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೊರಡಿಸುವ ಜಾತಿ ಜನಗಣತಿ ಪಟ್ಟಿಯಲ್ಲಿ ಪಂಚಮಸಾಲಿ ಜಾತಿ ಮತ್ತು ಕೋಡ್ ಸಂಖ್ಯೆ ನಮುದಾಗಿದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ತಮ್ಮ ಪ್ರಕಾರ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ, ಉಪಪಂಗಡ ಕಾಲಂದಲ್ಲಿ ಪಂಚಮಸಾಲಿ ಬರೆಸಬಹುದೆಂದು ಅಭಿಪ್ರಾಯಪಟ್ಟರು.  

ಚಿಂತನಾ ಸಭೆಯಲ್ಲಿ ಪ್ರಮುಖ ಮೂರು ನಿರ್ಣಯ ಕೈಗೊಳ್ಳಲಾಯಿತು. ಸಪ್ಟೆಂಬರ್ ತಿಂಗಳ 21ರಂದು. ಬೆಳಗಾವಿ ಜಿಲ್ಲೆಯ ಸೌದತ್ತಿಯಲ್ಲಿ ಜಾತಿ ಜನಗಣತಿ ಹೆಸರು ನಮೂದು ಮತ್ತು ಮೀಸಲಾತಿಯ ಕುರಿತು ಚರ್ಚಿಸಲು ಎರಡನೇ ಬಾರಿ ವಕೀಲರ ಚಿಂತನಾ ಸಭೆ ಕರೆಯಲಾಗಿದೆ ಎಂದರು.  

ಜಾತಿ ಜನಗಣತಿಯಲ್ಲಿ ಪಂಚಮಸಾಲಿ ಹೆಸರು ಮತ್ತು ಕೋಡ್ ಸಂಖ್ಯೆ ಕುರಿತು ಮಾಹಿತಿ ಸಂಗ್ರಹಿಸಲು ಸುಪ್ರೀಂ ಕೋರ್ಟ್‌ ಹಿರಿಯ ವಕೀಲರಾದ ಸಂಕೇತ್ ಏಣಗಿ ನೇತೃತ್ವದ ನಿಯೋಗ ಕೊಂಡೊಯ್ಯಲಾಗುವುದು. ಡಿಸೆಂಬರ್ 10 ರಂದು ಪಂಚಮಸಾಲಿ ಹೋರಾಟಗಾರರ ಮೇಲೆ ಪೊಲೀಸ್ ಲಾಠಿ ಚಾರ್ಜ್‌ ಮಾಡಿದ ಅಮಾನುಷ ಕೃತ್ಯ ಖಂಡಿಸಿ. ದೌರ್ಜನ್ಯ ದಿನಾಚರಣೆ ಎಂದು ಬೆಳಗಾವಿಯಲ್ಲಿ ಬ್ರಹತ್ ಪಂಚಮಸಾಲಿ ಬಾವುಟ ಆರ್ಭಟ ಎಂದು ಸಮಾವೇಶ ಸಂಘಟಿಸುವ ನಿರ್ಣಯ ಕೈಗೊಳ್ಳಲಾಯಿತು.  

ವಿಶ್ವಗುರು ಬಸವಣ್ಣನವರ ವಚನಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದ ಡಿವೈಎಸ್‌ಪಿ ಬಸವರಾಜ ಯಲಿಗಾರ ಅವರನ್ನು ಶಾಲು ಹೊದಿಸಿ ಫಲಪುಷ್ಪ ವಿತರಿಸಿ ಗೌರವ ಶ್ರೀರಕ್ಷೆ ನೀಡಿ ಆಶೀರ್ವದಿಸಿದರು. ಮಾಜಿ ಕೇಂದ್ರ ಸಚಿವ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಸಿಗೆ ನೀರೆರೆದು ಬಸವಣ್ಣನವರ ಕಿತ್ತೂರು ಚೆನ್ನಮ್ಮರ ಭಾವಚಿತ್ರಗಳಿಗೆ ಪುಷ್ಪವೃಷ್ಟಿ ಸಲ್ಲಿಸಿದರು. ಜಿಲ್ಲೆಯ ಮತ್ತು ಇತರ ಜಿಲ್ಲೆಯ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಪರಿಷತ್ತನ್ನು ಸಂಘಟಿಸಿ ಉತ್ತಮ ಕಾರ್ಯ ನಿರ್ವಹಿಸಲು ಶುಭ ಕೋರಿದರು.ವಿವಿಧ ಜಿಲ್ಲೆಗಳಿಂದ ಸುಮಾರು 400ಕ್ಕೂ ಹೆಚ್ಚು ಜನ ವಕೀಲರು ಭಾಗವಹಿಸಿದ್ದರು.  

ಹಿರಿಯ ವಕೀಲರಾದ ಬಿ. ಎಲ್‌.ಪಾಟೀಲ್ ಧಾರವಾಡ, ಪಂಚನಗೌಡ ದ್ಯಾಮನಾಗೌಡರ, ನಿಂಗಪ್ಪ ಫಿರೋಜಿ ಬೆಳಗಾವಿ, ಸಂಗನಗೌಡ ಪಾಟೀಲ, ಎಸ್ ಎಸ್‌. ಮೂಡಲಗಿ, ಈರಣ್ಣ ಚಾಗಶೆಟ್ಟಿ, ಎಸ್‌.ವಿ.ಪಾಟೀಲ್, ಶ್ರೀಶೈಲ ಮುಳಜಿ,  ಜಿ.ಬಿ.ಕೋಳೂರು, ಬಾಪೂಗೌಡ ಬಿರಾದಾರ ಹಡಗಲಿ, ದಾನೇಶ ಅವಟಿ, ಸಿದ್ದನಗೌಡ ಪೊಲೀಸ್ ಪಾಟೀಲ್, ಈರಣ್ಣ ಗಾಳಿ, ವಿ.ಎನ್‌. ಪಾಟೀಲ್ ಟಕ್ಕೆ, ಆರ್‌. ಎಸ್‌.ಹಳ್ಳಿ, ಸಿ.ಎಂ.ಅಂಗಡಿ, ಎಸ್‌.ಆರ್‌.ಬಿರಾದಾರ ಇಂಡಿ, ಎಸ್ ಎಸ್‌. ಬಿರಾದಾರ ಬರಡೋಲ, ಎನ್‌.ಎಮ್‌. ಕಲ್ಯಾಣಿ ಕನಮಡಿ, ವಿಶ್ವನಾಥ ಅಲೊಳ್ಳಿ, ಬಾಬು ಹಿಪ್ಪರಗಿ, ಮಹಿಳಾ ನ್ಯಾಯವಾದಿಗಳಾದ ವೀಣಾ ಜಾಮನಗೌಡರ, ಭುವನೇಶ್ವರ ಆಲಗೊಂಡ, ಮಹಾನಂದ ಗುಡದಿನ್ನಿ, ಜಿಲ್ಲಾ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಎಂ. ಎಸ್‌.ರುದ್ರಗೌಡ, ಜಿಲ್ಲಾ ಅಧ್ಯಕ್ಷ ಬಿ.ಎಂ.ಪಾಟೀಲ ದೇವರ ಹಿಪ್ಪರಗಿ, ಕಾರ್ಯದರ್ಶಿ ನಿಂಗನಗೌಡ ಸೊಲ್ಲಾಪುರ, ನಗರಾಧ್ಯಕ್ಷ ಶ್ರೀಶೈಲ ಬುಕ್ಕಣ್ಣಿ, ಸಿದ್ದು ಹಳ್ಳೂರ, ಪಂಚಾಸೇನೆ ಅಧ್ಯಕ್ಷ ಶರಣಬಸಪ್ಪ ಗಂಗಶಟ್ಟಿ, ಶ್ರೀಶೈಲ ಮುಂಜಣ್ಣಿ ಇದ್ದರು .  

ದೂರದರ್ಶನ ಆಕಾಶವಾಣಿ ಕಲಾವಿದ ವೀರೇಶ ವಾಲಿ ಸ್ವಾಗತ ಗೀತೆ. ರೈತ ಗೀತೆ ಹಾಡಿದರು. ನ್ಯಾಯವಾದಿ ಬಸವರಾಜ ಯಾದವಾಡ ನಿರೂಪಿಸಿ ವಂದಿಸಿದರು.ಸಿದ್ಧೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಪದಾಧಿಕಾರಿಗಳು, ಸಂಸ್ಥೆಯ ಸಿಬ್ಬಂದಿ ವರ್ಗ ಮುಂತಾದವರು ಉಪಸ್ಥಿತರಿದ್ದರು, ನಂತರ ಸಿದ್ದೇಶ್ವರ ಸಂಸ್ಥೆಯವರು ದಾಸೋಹ ಸೇವೆ ಏರಿ​‍್ಡಸಿದ್ದರು.