ಆತ್ಮ ಸ್ವಾಸ್ತ್ಯದ ಬಗ್ಗೆ ಸಂಶೋಧನೆ ಇಂದಿನ ಅಗತ್ಯ: ಬಿ.ಕೆ.ಡಾ. ಅನಿಲ್ ಭತಿಜಾ

Research on Self-Wellness Needed Today: B.K.Dr. Anil Bhatija

ಆತ್ಮ ಸ್ವಾಸ್ತ್ಯದ ಬಗ್ಗೆ ಸಂಶೋಧನೆ ಇಂದಿನ ಅಗತ್ಯ: ಬಿ.ಕೆ.ಡಾ. ಅನಿಲ್ ಭತಿಜಾ

ಬೆಳಗಾವಿ; ಶರೀರಕ್ಕೆ ಚಿಕಿತ್ಸೆ ನೀಡುವ ಶರೀರ ಸ್ವಾಸ್ಥ್ಯದ ಬದಲಾಗಿ ಆತ್ಮಕ್ಕೆ ಚಿಕಿತ್ಸೆ ನೀಡುವ ಆತ್ಮ ಸ್ವಾಸ್ಥ್ಯದ ಕುರಿತು ಸಂಶೋಧನೆ ನಡೆಸುವ ಅಗತ್ಯ ಇಂದು ಹಿಂದೆಂದಿಗಿಂತಲೂಜಿ ಹೆಚ್ಚಾಗಿದೆ ಎಂದುಗುಜರಾತ್ ರಾಜ್ಯ ಪಾಟನದ  ಅಂಗರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ  ಬಿ.ಕೆ. ಡಾ. ಅನಿಲ ಬಥಿಜಾ ಹೇಳಿದರು.   ಅವರಿಂದು ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ. ಮಹಾಸ್ವಾಮಿಗಳವರ 135ನೇ ಜಯಂತಿ ಮಹೋತ್ಸವದಲ್ಲಿ ಶ್ರೀಮಠದಿಂದ ಕೊಡಮಾಡಲಾದ ಆತ್ಮ ಸ್ವಾಸ್ಥ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು. ವೈದ್ಯಶಾಸ್ತ್ರದಲ್ಲಿ ವಿವಿಧ ರೋಗಗಳಿಗೆ ಶರೀರಕ್ಕೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಆದರೆ ಶರೀರವನ್ನು ನಡೆಸುವ ಆತ್ಮಕ್ಕೆ ಚಿಕಿತ್ಸೆ ನೀಡುವ ಆತ್ಮಸ್ವಾಸ್ಥ್ಯದ ಕುರಿತಾದ ಉಲ್ಲೇಖ ಎಲ್ಲಿಯೂ ಇಲ್ಲ ಇದರಿಂದಾಗಿ ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ರೋಗಗಳ ಸಂಖ್ಯೆ ಮತ್ತು ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆತ್ಮ ಸ್ವಾಸ್ಥ್ಯದ ಕುರಿತು ಮಠಮಾನ್ಯಗಳಲ್ಲಿ ಧಾರ್ಮಿಕ ಸಂಸ್ಥೆಗಳಲ್ಲಿ ಚಿಂತನೆ ನಡೆಯುತ್ತದೆ. ಅಧ್ಯಾತ್ಮ ಮತ್ತು ವಿಜ್ಞಾನ ಎರಡು ಜೊತೆಯಾಗಿ ಹೋದಾಗ ಇಂದಿನ ಅತಿಯಾದ ಒತ್ತಡದ ಜೀವನದಿಂದ ಹೊರಬರಲು ಸಾಧ್ಯವಾಗುವ ಸಾಧ್ಯತೆ ಇದೆ. ಅಧ್ಯಾತ್ಮವನ್ನು ಬಿಟ್ಟು ವಿಜ್ಞಾನವಿಲ್ಲ ವಿಜ್ಞಾನವನ್ನು ಬಿಟ್ಟು ಅಧ್ಯಾತ್ಮವಿಲ್ಲ ಆದರೆ ಈ ಕುರಿತು ಯಾರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದವರು ಕಳವಳ ವ್ಯಕ್ತಪಡಿಸಿದರು.ಇಂದಿನ ದಿನಮಾನದ ಅತಿ ಭಯಂಕರ ರೋಗವೆಂದರೆ ಅದು ಹೃದಯಘಾತ. ಹಿಂದೆಲ್ಲ 45 ವರ್ಷದವರ ಕ್ಕಿಂತ ಹೆಚ್ಚಿನ ವಯೋಮಾನದವರು ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿದ್ದರು. ಆದರೆ ಇತ್ತೀಚಿನ 10 ವರ್ಷಗಳಲ್ಲಿ 25ರಿಂದ 30 ವರ್ಷದೊಳಗಿನ ಯುವಕರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಹೃದಯ ಸಂಬಂಧಿ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದ ಅವರು ಹೃದಯ ಸಂಬಂಧಿ ರೋಗಗಳನ್ನು ಎಂಜಿಯೋಪ್ಲಾಸ್ಟಿ ಮತ್ತು ಬೈಪಾಸ್ ಸರ್ಜರಿಗಳಿಂದ ಮಾತ್ರ ಗುಣಪಡಿಸುವ ವ್ಯವಸ್ಥೆ ಅಲೋಪತಿ ವೈದ್ಯಕೀಯ ಕ್ಷೇತ್ರದಲ್ಲಿದೆ. ಮೌಂಟ್ ಅಬು ಆಸ್ಪತ್ರೆಯಲ್ಲಿ ಹೊಸದೊಂದು ಅಧ್ಯಾತ್ಮ ರೀತಿಯ ಉಪಚಾರವನ್ನು 11,000ಕ್ಕೂ ಅಧಿಕ ಹೃದಯ ಸಂಬಂಧಿ ರೋಗಿಗಳಿಗೆ ನೀಡಲಾಯಿತು. ಕೇವಲ ಧ್ಯಾನ ಮತ್ತು ನಿಯಮಿತವಾದ ವ್ಯಾಯಾಮದಿಂದ ರೋಗಗಳನ್ನು ಗುಣಪಡಿಸಲಾಯಿತು. ಹೃದಯದಲ್ಲಿರುವ ಎಲ್ಲ ಬ್ಲಾಕ್‌ಗಳು ಗುಣಮುಖವಾಯಿತು ಎಂದವರು ವಿವರಿಸಿದರು.  

ಸಕಾರಾತ್ಮಕ ವಿಚಾರಗಳು ಒತ್ತಡ ರಹಿತವಾದ ಜೀವನ ಸಣ್ಣ ಸಣ್ಣ ವಿಷಯಗಳಿಗೆ ಸಿಟ್ಟಿಗೇಳುವುದು ಬಿಡಬೇಕು. ರಾತ್ರಿ 10ಗಂಟೆಗೆ ಮಲಗಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ 4 ಗಂಟೆಗೆ ಏಳುವುದನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದೆ ಆದರೆ ಖಂಡಿತವಾಗಿ ಆತ್ಮ ಸ್ವಾಸ್ಥ್ಯವನ್ನು ಹೊಂದುತ್ತಿರಿ. ಆಗ ಶರೀರ ಸ್ವಾಸ್ಥ್ಯ ತಾನಾಗಿಯೇ ಬರುತ್ತದೆ. ಅಧ್ಯಾತ್ಮವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿ ದಿವಸ ತಪ್ಪದೇ ಧ್ಯಾನವನ್ನು ಮಾಡಬೇಕು ಎಂದವರು ಹೇಳಿದರು. ಹಂದಿಗುಂದ ವಿರಕ್ತಮಠದ ಶಿವಾನಂದ ಮಹಾ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಸಾನಿಧ್ಯದಲ್ಲಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಚೆನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ  ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಸಮ್ಮುಖದಲ್ಲಿ ಮಲ್ಲಾಪುರ- ನೇಸರಗಿ ಗಾಳೇಶ್ವರ ಮಠದ ಚಿದಾನಂದ ಮಹಾಸ್ವಾಮಿಗಳು ಉಪಸ್ಥಿತರಿದ್ದರು. ನೇತೃತ್ವವನ್ನು ಯಮಕನಮರಡಿ ಹುಣಸಿಕೊಳ್ಳ ಮಠದ ಸಿದ್ದಬಸವ ದೇವರು ವಹಿಸಿಕೊಂಡಿದ್ದರು.  ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ನಿವೃತ್ತ ಆದಾಯ ತೆರಿಗೆ ಇಲಾಖೆ ಅಧಿಕಾರಿ ಗೋವಿಂದಪ್ಪ ಗೌಡಪ್ಪಗೋಳ ಆಗಮಿಸಿದ್ದರು.  

ಗೋಕಾಕದ ವಿನಯಾ ಗಲಗಲಿ ಇವರಿಗೆ ಬಾಲಯೋಗಿನಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಬಸವ ತತ್ವ ಅನುಭವ ಕೇಂದ್ರದ ಶರಣೆ ವಾಗ್ದೇವಿ ತಾಯಿ ಮತ್ತು ಶರಣೆ ಕುಮದಿನಿ ತಾಯಿ, ಕಾರಂಜಿ ಮಠದ ಗುರುಸಿದ್ಧ ದೇವರು ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಕಾಶ್ ಗಿರಿಮಲ್ಲನವರ್ ವಿರಚಿತ  ಡಾ. ಗುರುದೇವಿ ಹುಲೆಪ್ಪನವರಮಠ ಮತ್ತು ರೀತಾ ಬಣಗಾರ ಅವರು ಇಂಗ್ಲಿಷ ಭಾಷೆಗೆ ಅನುವಾದಿಸಿರುವ ಗ್ರಂಥ  ‘ಎ ಬ್ರೀಫ್ ಬಯೋಗ್ರಾಫಿ ಆಫ್ ಡಾ. ಸಿದ್ದರಾಮ ಸ್ವಾಮೀಜಿ’ ಲೋಕಾರೆ​‍್ಣಗೊಳಿಸಲಾಯಿತು. ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು 2011 ರಲ್ಲಿ ‘ಆತ್ಮಸ್ವಾಸ್ಥ್ಯ ಶ್ರೀ’  ಪ್ರಶಸ್ತಿಯನ್ನು ಸ್ಥಾಪಿಸಿದ ಮೆಡಿಕಲ್ ಹಳೆಯ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಎಚ್‌.ಬಿ. ರಾಜಶೇಖರ್ ಮತ್ತು ಪಾರ್ವತಿ ರಾಜಶೇಖರ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಎ.ಕೆ. ಪಾಟೀಲ ಮತ್ತು ರಾಜಶೇಖರ್ ಪಾಟೀಲ ನಿರ್ವಹಿಸಿದರು.