ಆರೋಗ್ಯ ಸುರಕ್ಷಾ ಸಾಮಗ್ರಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಮನವಿ

ಲೋಕದರ್ಶನ ವರದಿ

ಶಿಗ್ಗಾವಿ ೦೧: ಆರೋಗ್ಯ ಇಲಾಖೆಯಡಿ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕತರ್ೆಯರಿಗೆ ನಿಗದಿಪಡಿಸಿರುವ ಪ್ರೋತ್ಸಾಹಧನ ಮತ್ತು ಗೌರವಧನ ಒಟ್ಟಿಗೆ ಸೇರಿಸಿ ಮಾಸಿಕ ಒಂದೆ ನಿಶ್ಚಿತ ಗೌರವಧನ 12.000 ಪ್ರತಿ ತಿಂಗಳು ನೀಡುವಂತೆ ಹಾಗೂ ಆರೋಗ್ಯ ಸುರಕ್ಷಾ ಸಾಮಗ್ರಿ ನೀಡುವಂತೆ ಸಕರ್ಾರಕ್ಕೆ ಒತ್ತಾಯಿಸಿ ಕನರ್ಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕತರ್ೆಯರ ಸಂಘದ ತಾಲೂಕ ಸಮಿತಿ ವತಿಯಿಂದ ತಾಲೂಕ ದಂಡಾಧಿಕಾರಿಗಳಿಗೆ  ಮನವಿ ಅಪರ್ಿಸಿದರು.

  ಮನವಿಯಲ್ಲಿ 2020 ಜನೆವರಿಯಿಂದ ಸಕರ್ಾರಕ್ಕೆ 10 ಬಾರಿ ಮನವಿ ಸಲ್ಲಿಸಲಾಗಿದೆ ಸಕರ್ಾರ ಈ ಬಗ್ಗೆ ಸ್ಪಂದಿಸಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಆದಷ್ಟು ಬೇಗ ಸೇವೆಗೆ ತಕ್ಕ ಗೌರವ ಧನ ನೀಡಬೇಕು.

 ಆಶಾ ಕಾರ್ಯಕತರ್ೆಯರಿಗೆ ಆರೋಗ್ಯ ಸುರಕ್ಷಾ ಸಾಮಗ್ರಿಗಳನ್ನು ಹಾಗೂ ಉಚಿತ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸೇವೆ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ. ಇದೆ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೂ ಮನವಿ ಸಲ್ಲಿಸಿದ್ದಾರೆ.

ಆಶಾ ಕಾರ್ಯಕತರ್ೆಯರಾದ ರೇಖಾ ಬೆಟಗೇರಿ, ಶಾಂತಾ ಮತ್ತೂರ, ಭಾಗೀರತಿ ಮಾಳವದೆ,ಲಕ್ಷ್ಮವ್ವ ಮಾವೂರ, ಶೋಭಾ ಗಾಜಿ, ಶಮಶಾದ ನೀರಲಗಿ, ಪ್ರೇಮಾ ರಾಮಪ್ಪನವರ, ಸುಮಿತ್ರಾ ಹಿರೇಮಠ, ಅನ್ನಪೂಣರ್ಾ ಇಂಗಳಗಿ, ಕವಿತಾ ಹೂಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.