ಅನುಭವ ಮಂಟಪದ ನಿರ್ವಹಣೆಯನ್ನು ಜೆಎಲ್ಎಂ ಗೆ ನೀಡಲು ಸರ್ಕಾರಕ್ಕೆ ಮನವಿ
Request to the government to hand over the management of Anubhava Mantapa to JLM
ಬೆಳಗಾವಿ: ಬಸವಕಲ್ಯಾಣದಲ್ಲಿ ನಿರ್ಮಿಸಲಾಗುತ್ತಿರುವ ಅನುಭವ ಮಂಟಪದ ಸಂಪೂರ್ಣ ನಿರ್ವಹಣೆಯನ್ನು ಜಾಗತೀಕ ಲಿಂಗಾಯತ ಮಹಾ ಸಭೆಗೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಜಾಗತಿಕ ಲಿಂಗಾಯತ ಮಹಾಸಭೆಯು ಮಹತ್ವದ ನಿರ್ಣಯವನ್ನು ಕೈಗೊಂಡಿತು.
ಬೆಳಗಾವಿಯಲ್ಲಿಂದು ಮುಕ್ತಾಯಗೊಂಡ ಎರಡು ದಿನಗಳ ವಾರ್ಷಿಕ ಸರ್ವಸಾಮಾನ್ಯ ಸಭೆ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಮಂಡಳಿಯ ಸಭೆಯಲ್ಲಿ ಈ ನಿರ್ಣಯವನ್ನು ಒಕ್ಕೊರಲಿನಿಂದ ಕೈಗೊಳ್ಳಲಾಯಿತು.
ಸಿದ್ದರಾಮಯ್ಯನವರ ಕಾಲದಲ್ಲಿ ಆರಂಭವಾದ ಅನುಭವ ಮಂಟಪದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಈಗಾಗಲೇ 400 ಕೋಟಿ ರೂಪಾಯಿಗಳ ಖರ್ಚಾಗಿದೆ ಕಟ್ಟಡ ಮುಕ್ತಾಯಗೊಳ್ಳಲು ಇನ್ನೂ ಕನಿಷ್ಠ 450 ಕೋಟಿ ರೂಪಾಯಿಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಮುಂಬರುವ ಮಾರ್ಚ್ ಅಂತ್ಯದಲ್ಲಿ ಕಟ್ಟಡ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ ಆದರೂ ಅದಕ್ಕೆ ಅಗತ್ಯವಿರುವ ಹಣವನ್ನು ಪ್ರಸ್ತುತ ಮುಂಗಡಪತ್ರದಲ್ಲಿ ನೀಡಲಾಗಿಲ್ಲ ಹೀಗಿದ್ದಾಗ ಮಾರ್ಚ್ ಅಂತ್ಯಕ್ಕೆ ಕಟ್ಟಡ ಪೂರ್ಣಗೊಳ್ಳುವುದು ಅಸಾಧ್ಯದ ಮಾತು. ಕಟ್ಟಡವನ್ನು ಅರ್ಧಮರ್ಧ ಸ್ಥಿತಿಯಲ್ಲಿ ಉದ್ಘಾಟನೆ ಮಾಡಲು ಅವಕಾಶ ನೀಡಬಾರದು ಎಂದು ಸಭೆಯು ನಿರ್ಣಯ ಕೈಗೊಂಡಿತು.
ಕಟ್ಟಡ ಪೂರ್ಣಗೊಂಡ ನಂತರ ಅದರ ಸಂಪೂರ್ಣ ನಿರ್ವಹಣೆ ಅಂದರೆ ಅನುಭವ ಮಂಟಪದಲ್ಲಿ ಯಾವ ಯಾವ ಚಟುವಟಿಕೆಗಳು ನಡೆಯಬೇಕು ಅಲ್ಲಿ ಏನು ಇರಬೇಕು ಮತ್ತು ಏನು ಇರಬಾರದು ಎಂಬುದರ ನಿರ್ಧಾರವನ್ನು ಜಾಗತೀಕ ಲಿಂಗಾಯತ ಮಹಾಸಭೆ ಗೆ ಬಿಡಬೇಕು ಎನ್ನುವ ಕುರಿತು ಸರ್ಕಾರಕ್ಕೆ ಮನವಿ ಒಂದನ್ನು ಇದೇ ಡಿಸೆಂಬರ್ ಅಂತ್ಯದೊಳಗಾಗಿ ಸಲ್ಲಿಸಲು ಸಭೆ ನಿರ್ಧರಿಸಿತು.
ಅರ್ಧಕ್ಕೆ ನಿಂತ ಚನ್ನಮ್ಮ ಪ್ರತಿಮೆ ಕಾಮಗಾರಿ: ಅವ್ಯವಹಾರದ ಶಂಕೆ : ಲೆಕ್ಕ ಕೊಡಿ ಹೋರಾಟಕ್ಕೆ ಕನ್ನಡ ಹೋರಾಟಗಾರರು ಸಜ್ಜು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ 