ತಾಲೂಕ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ತಹಸಿಲ್ದಾರ್ ಗೆ ಮನವಿ
Request to the Tehsildar to convert it into a taluk hospital
ತಾಳಿಕೋಟಿ 24: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯವಿರುವ ಆರೋಗ್ಯ ಸಂಪನ್ಮೂಲಗಳು ಹಾಗೂ ತಜ್ಞ ವೈದ್ಯರನ್ನು ಒದಗಿಸಿ ಪ್ರಸ್ತುತ ಸಮುದಾಯ ಕೇಂದ್ರವನ್ನು ತಾಲೂಕ ಆಸ್ಪತ್ರೆಯನ್ನಾಗಿ ಉನ್ನತಿ ಕರಿಸಲು ಕ್ರಮ ವಹಿಸುವಂತೆ ಒತ್ತಾಯಿಸಿ ಸೋಲಿಡಾರಿಟಿ ಯೂಥ್ ಮೊಮೆಂಟ್, ಜಾಂಭವ ಯುವ ಸಂಘ, ಅಂಬೇಡ್ಕರ್ ಸೇನೆ ಹಾಗೂ ಮೌಲಾನಾ ಅಬುಲ್ ಕಲಾಂ ಆಜಾದ್ ಸಂಘಟನೆಯ ಪದಾಧಿಕಾರಿಗಳು ಬುಧವಾರ ತಹಸಿಲ್ದಾರ್ ಡಾ.ವಿನಯಾ ಹೂಗಾರ ಇವರಿಗೆ ಮನವಿ ಸಲ್ಲಿಸಿದರು. ಮನವಿ ಪತ್ರದಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ 30 ಹಾಸಿಗೆಯ ಸೌಕರ್ಯವಿದೆ ಆದರೆ ಇಲ್ಲಿಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನ ಹೆಚ್ಚುತ್ತಿದೆ ತಾಳಿಕೋಟಿ ನೂತನ ತಾಲೂಕ ಕೇಂದ್ರವಾಗಿ 6 ವರ್ಷಗಳಾಗಿವೆ. ಇದರ ವ್ಯಾಪ್ತಿಗೆ ಸುಮಾರು 54 ಗ್ರಾಮಗಳು ಬರುತ್ತವೆ ಈಗಿರುವ 30 ಹಾಸಿಗೆ ಸೌಕರ್ಯವನ್ನು 100 ಕ್ಕೇರಿಸಬೇಕು.
ಇದರ ಜೊತೆಗೆ ಇಲ್ಲಿ ಎಕ್ಸ್ರೇ ಯೂನಿಟ್, ಚಿಕ್ಕ ಮಕ್ಕಳ ಐಸಿಯು ಸಿಬ್ಬಂದಿಗಳು, ದಂತ ವೈದ್ಯರು,ರಕ್ತ ಭಂಡಾರ ಹೀಗೆ ಹಲವಾರು ಸೌಕರ್ಯಗಳ ಅಗತ್ಯವಿದೆ. ತಾಲೂಕ ಆಸ್ಪತ್ರೆ ಇಲ್ಲದೆ ಇರುವುದರಿಂದ ಜನರು ರೆಫರೆನ್ಸ್ ಪತ್ರ ತರಲು ಮುದ್ದೇಬಿಹಾಳಕ್ಕೇ ಹೋಗಬೇಕಾಗುತ್ತದೆ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಬಹುತೇಕರು ಬಡ ಹಾಗೂ ಮಧ್ಯಮ ವರ್ಗದ ಜನರು ಸಮುದಾಯ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳು ಇಲ್ಲದೆ ಇರುವುದರಿಂದ ಅನಿವಾರ್ಯವಾಗಿ ಅವರು ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ದುಡ್ಡು ಕೊಟ್ಟು ಆರೈಕೆ ಮಾಡಿಕೊಳ್ಳಬೇಕಾಗುತ್ತದೆ ಇದರಿಂದ ಬಡವರಿಗೆ ತುಂಬಾ ತೊಂದರೆಯಾಗುತ್ತಿದೆ ಆದ್ದರಿಂದ ತಾವುಗಳು ಆದಷ್ಟು ಬೇಗ ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮ ವಹಿಸಬೇಕೆಂದು ವಿನಂತಿ ಮಾಡಿಕೊಳ್ಳಲಾಗಿದೆ.
ಈ ಸಮಯದಲ್ಲಿ ಸೋಲಿಡಾರಿಟಿ ಯೂಥ್ ಮೂಮೆಂಟ್ ಅಧ್ಯಕ್ಷ ಮೈನು ಮಕಾನದಾರ, ಮೌಲನಾ ಅಬುಲ್ ಕಲಾಂ ಆಜಾದ್ ಅಧ್ಯಕ್ಷ ಮೊಹಮ್ಮದ್ ಶಫೀಕ್ ಇನಾಮ್ದಾರ, ಜಾಂಭವ ಯುವಸೇನಾ ಅಧ್ಯಕ್ಷ ಕಾಳಪ್ಪ ಮಾದರ, ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷ ಗೋಪಾಲ್ ಕಟ್ಟಿಮನಿ, ಜಿಲ್ಲಾ ಉಪಾಧ್ಯಕ್ಷ ಬಸ್ಸು ಮಾದರ, ಕಾಶಿನಾಥ ಮಾದರ, ಪರಶುರಾಮ ನಾಲತವಾಡ, ಮಿಣಸಗಿ ಪರಶುರಾಮ್,ಕಾಸೀಮ ಅಲಿ ಮನ್ಸೂರ್, ಹನೀಫ ಜಮಾದಾರ, ಯಾಸಿನ್ ಬಾಗವಾನ, ಮೆಹಬೂಬ, ಗೀರೀಶ್ ಕಟ್ಟಿಮನಿ, ರಾಘವೇಂದ್ರ ದೊಡ್ಡಮನಿ, ಚನ್ನು ಹೊಸಮನಿ, ಕಾಡಪ್ಪ ಮಾದರ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 