ಶಹಪುರ ಮಾರ್ಗವಾಗಿ ಹೊಸಪೇಟೆ-ಕುಷ್ಟಗಿ ಬಸ್ ಓಡಿಸಲು ಮನವಿ
Request to run Hospet-Kushtagi bus via Shahpur route
ಕೊಪ್ಪಳ 08: ಕಳೆದ ಎರಡು ದಶಕಗಳಿಂದ ಹೊಸಪೇಟೆಯಿಂದಕುಷ್ಟಗಿ-ಕುಷ್ಟಗಿಯಿಂದ ಹೊಸಪೇಟೆಯೆಡೆಗೆ ಸಂಚರಿಸುತ್ತಿರುವ ಸಂಖ್ಯೆ 10ರ ಬಸ್ ಬೆಳಿಗ್ಗೆ 7 ಗಂಟೆಯಿಂದ ಹೊಸಪೇಟೆತೊರೆದು ಹುಲಿಗಿ ಮುನಿರಾಬಾದ್ ಮಾರ್ಗವಾಗಿ ಅಗಳಕೇರಾ, ಕೆರೆಹಳ್ಳಿ ಮತ್ತು ಬೂದುಗಂಪಾ ಮಾರ್ಗವಾಗಿ ಕುಷ್ಟಗಿಗೆ ತೆರಳುತ್ತದೆ. ವಾಪಸ್ಸುಕುಷ್ಟಗಿಯಿಂದ ಸಂಜೆ 4 ಗಂಟೆಗೆ ಹೊರಟು ಹೊಸಪೇಟೆಗೆ ಬರುವಾಗ ಶಹಪುರಗ್ರಾಮದ ಮಾರ್ಗವಾಗಿ ಸಂಜೆ 5 ಗಂಟೆಗೆ ಈ ಮೊದಲು ಬರುತ್ತಿತ್ತು.ಇದರಿಂದಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ, ಸರ್ಕಾರಿ ಮತ್ತುಅರೆ ಸರ್ಕಾರಿ ನೌಕರಿ ಮಾಡುವವರು, ಮಹಿಳೆಯರು, ಕೃಷಿಕರು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗುತ್ತಿತ್ತು.ಹೀಗಾಗಿ ಮೊದಲಿನಂತೆ ಸದರಿ ಬಸ್ ಅನ್ನು ಶಹಪುರಗ್ರಾಮದ ಮಾರ್ಗವಾಗಿಓಡಿಸಬೇಕೆಂದುಗ್ರಾಮಸ್ಥರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಈ ಕುರಿತುಗ್ರಾಮಸ್ಥರಾದ ಎಸ್.ಎಚ್.ಕಿನ್ನಾಳ್, ಸುರೇಶ್ ಪಾಟೀಲ್ ಮತ್ತು ಮಲ್ಲಿಕಾರ್ಜುನಕುರಿಇವರು ಪತ್ರಿಕಾ ಪ್ರಕಟಣೆ ನೀಡಿದ್ದು, ಸದರಿ ಬಸ್ ಇತ್ತೀಚಿನ ದಿನಗಳಲ್ಲಿ ಶಹಪುರಗ್ರಾಮದ ಮಾರ್ಗವಾಗಿ ಬರದೇ ಹುಲಿಗಿ, ಅಗಳಕೇರಿ ಮಾರ್ಗವಾಗಿ ಕೆರೆಹಳ್ಳಿ ಮೂಲಕ ಕುಷ್ಟಗಿಗೆ ತೆರಳುತ್ತಿದೆ.ವಾಪಸ್ಸು ಬರುವಾಗಲೂಇದೇ ಹಾದಿ ಹಿಡಿದಿದೆ. 1ನೇ ಸಿಂಗಲ್ ನಲ್ಲಿ ಬೆಳಿಗ್ಗೆ 7 ಗಂಟೆಗೆ ಹೊಸಪೇಟೆ ಬಿಟ್ಟು ಮುನಿರಾಬಾದ್, ಹುಲಿಗಿ ಮತ್ತು ಅಗಳಕೇರಿ ಮಾರ್ಗವಾಗಿ 10ಗಂಟೆಗೆ ಕುಷ್ಟಗಿ ತಲುಪುತ್ತದೆ. 2ನೇ ಸಿಂಗಲ್ ಬಸ್ ಕುಷ್ಟಗಿಯನ್ನು ಬೆಳಿಗ್ಗೆ 10-30ಕ್ಕೆ ಬಿಟ್ಟುಅದೇ ಮಾರ್ಗವಾಗಿ ಮಧ್ಯಾಹ್ನ 1 ಗಂಟೆಗೆ ಹೊಸಪೇಟೆತಲುಪುತ್ತದೆ.3ನೇ ಸಿಂಗಲ್ ಬಸ್ ಹೊಸಪೇಟೆಯನ್ನು ಮಧ್ಯಾಹ್ನ 1-30ಕ್ಕೆ ಬಿಟ್ಟು ಸದರಿ ಮಾರ್ಗದಲ್ಲಿ ಸಂಚರಿಸಿ ಕುಷ್ಟಗಿಯನ್ನು ಸಂಜೆ 4 ಗಂಟೆಗೆತಲುಪುತ್ತದೆ.4ನೇ ಸಿಂಗಲ್ ಬಸ್ ಕುಷ್ಟಗಿಯನ್ನು 4-15ಕ್ಕೆ ಬಿಟ್ಟು ಶಹಪುರ ಮಾರ್ಗವಾಗಿ ಹೊಸಪೇಟೆಗೆ 6-15ಕ್ಕೆ ಹೊಸಪೇಟೆತಲುಪುತ್ತಿತ್ತು.ಇದರಿಂದ ಶಹಪುರಗ್ರಾಮಸ್ಥರು ಹೊಸಪೇಟೆ ಸಂಪರ್ಕ ಸಂವಹನ ಮಾಡಲು ಅನುಕೂಲವಾಗುತ್ತಿತ್ತು.ಶಹಪುರಗ್ರಾಮದ ಮಹಿಳೆಯರು, ಮಕ್ಕಳು ಮತ್ತುರೈತರು ಪ್ರಾಥಮಿಕಆರೋಗ್ಯಕೇಂದ್ರಕ್ಕೆ ತೆರಳಲು ಇದೇ ಬಸ್ ಅನ್ನು ಅವಲಂಬಿಸಿದ್ದರು.
ವಿಶೇಷವಾಗಿ ಗರ್ಭಿಣಿ ಮಹಿಳೆಯರು ಆಸ್ಪತ್ರೆಗೆ ತೆರಳಲು ಈ ಬಸ್ ತುಂಬಾ ಸಹಕಾರಿಯಾಗಿತ್ತು.ಇದೀಗ ಈ ಬಸ್ ಶಹಪುರಗ್ರಾಮದ ಮಾರ್ಗವನ್ನು ಸಂಪೂರ್ಣ ಕಡೆಗಣಿಸಿದೆ.ಇದರಿಂದಗ್ರಾಮಸ್ಥರಿಗೆಲ್ಲ ಸಮಸ್ಯೆಆಗಿದೆ.ಇತ್ತೀಚೆಗೆ ಸದರಿ ಬಸ್ ಅನ್ನುಆರ್ ಟಿ ಓ ನಿಲುಗಡೆಯ ಅಗಳಕೇರಿ ಗ್ರಾಮದರಸ್ತೆಯಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಿ, ಶಹಪುರ ಮಾರ್ಗವಾಗಿ ಸಂಚರಿಸುವಂತೆಒತ್ತಾಯಿಸಲಾಗಿತ್ತು.ಆದರೂ ಬಸ್ ಶಹಪುರಗ್ರಾಮದತ್ತ ಬರುತ್ತಿಲ್ಲಎಂದುಗ್ರಾಮಸ್ಥರಾದಉದಯರಾಟಿ, ಶಂಕ್ರ್ಪಕುರಿ, ಶರಣಪ್ಪಚೌಡ್ಕಿ, ಹೊನ್ನಪ್ಪ ಮತ್ತುಯಲ್ಲಪ್ಪಇನ್ನಿತರರುತಮ್ಮ ಅಳಲನ್ನುತೋಡಿಕೊಂಡಿದ್ದಾರೆ.ಕಳೆದ 25 ವರ್ಷಗಳಿಂದ ನಮ್ಮಗ್ರಾಮದ ಮೂಲಕ ಸಂಚರಿಸುತ್ತಿದ್ದಕೊನೆಯಅವಧಿಯ ಬಸ್ ಅನ್ನು ಅಗಳಕೇರಿ ಗ್ರಾಮಸ್ಥರುತಮ್ಮಗ್ರಾಮದ ಮಾರ್ಗವಾಗಿ ಸಂಚರಿಸುವಂತೆ ಎಳಸಿದ್ದಾರೆ.ಈ ಬಸ್ ದಿನದಅವಧಿಯಲ್ಲಿ ನಾಲ್ಕು ಬಾರಿ ಅಗಳಕೇರಿ ಮೂಲಕ ಸಂಚರಿಸುತ್ತಿದೆ.ಕೊನೆಯ ಸಿಂಗಲ್ ವೇಳೆಯಲ್ಲಿ ಅಂದರೆ ಸಂಜೆ 4 ಗಂಟೆಗೆಕುಷ್ಟಗಿಯಿಂದ ಹೊರಡುವ ಬಸ್ ಅನ್ನು ಶಹಪುರಗ್ರಾಮದ ಮೂಲಕ ಸಂಚರಿಸುವಂತೆ ಆದೇಶಿಸಬೇಕು.
ಮೊದಲಿನಂತೆಗ್ರಾಮಸರಿಗೆ ನೆರವಾಗಬೇಕು.ಈ ಕುರಿತು ಹೊಸಪೇಟೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ಮತ್ತು ವಿಜಯನಗರಜಿಲ್ಲಾ ಸಾರಿಗೆ ನಿಯಂತ್ರಣಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದೆ.ಇತ್ತೀಚಿನ ನಾಲ್ಕು ದಿನಗಳಿಂದ ಈ ಬಸ್ ಸಂಚಾರ ನಿಲುಗಡೆಆಗಿದೆ.ಹೀಗಾಗಿ ಸಾರಿಗೆಇಲಾಖೆಯ ಮೇಲಾಧಿಕಾರಿಗಳು ಹೊಸಪೇಟೆ-ಕುಷ್ಟಗಿ, ಕುಷ್ಟಗಿ-ಹೊಸಪೇಟೆ ಬಸ್ ಅನ್ನು ಶಹಪುರಗ್ರಾಮದ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಬೇಕು.ಇಲ್ಲದೇ ಹೋದರೆಗ್ರಾಮಸ್ಥರೆಲ್ಲ ಸಾರಿಗೆ ಬಸ್ ತಡೆದು ಹೋರಾಟ ಮಾಡಬೇಕಾಗುತ್ತದೆಎಂದುಗ್ರಾಮಸ್ಥರಾದ ಬಾಳಪ್ಪ ಭಜಂತ್ರಿ, ಗೋಪಾಲ್, ರಾಮಣ್ಣಚೌಡ್ಕಿ, ಹನುಮಂತ, ಮುಕ್ಕಣ್ಣ, ನಾಗರಾಜ, ಶಾಂತಪ್ಪ, ಚಿದಾನಂದ, ಶರಣಪ್ಪಚೌಡ್ಕಿ ಸೇರಿದಂತೆಗ್ರಾಮದಅನೇಕರುಎಚ್ಚರಿಕೆ ನೀಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 