2ನೇ ಬೆಳೆಗೆ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಮನವಿ

2ನೇ ಬೆಳೆಗೆ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಮನವಿ Request to release water to Vijayanagar canals for 2nd crop

ಹೊಸಪೇಟೆ 22: ಈಗಾಗಲೆ ತುಂಗಭದ್ರ ಜಲಾಶಯದಲ್ಲಿ 80ಟಿ.ಎಂ.ಸಿ. ನೀರು ಅಧಿಕ ಇದ್ದು, ತುಂಗಭದ್ರ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆ ಎಲ್‌.ಎಲ್‌.ಸಿ. ಮತ್ತು ತುಂಗಭದ್ರ ಜಲಾಶಯದ ಎಡದಂಡೆ ಕಾಲುವೆಗಳಿಗೆ ನೀರು ಹರಿಸಿ 2ನೇ ಬೆಳೆಗೆ ವಿಜಯನಗರ ಕಾಲುವೆಗಳಿಗೆ ಮೇ-30 ರವರೆಗೆ ನೀರು ಹರಿಸಲು ಯಾವುದೇ ತೊಂದರೆ ಇರುವುದಿಲ್ಲ. ಆದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ನೀರಿನ ಯಾವುದೇ ಸಮಸ್ಯೆ ಇರುವುದಿಲ್ಲ. ನೀರಾವರಿ ಅಧಿಕಾರಿಗಳು ಕಟ್ರಸ್ಟ್‌ಗೇಟ್‌ಗಳನ್ನು ಅಳವಡಿಸಲು ಇಲ್ಲ ಸಲ್ಲದ ಕಾರಣ ಹಾಗೂ ಹಾರಿಕೆ ಉತ್ತರವನ್ನು ಹೇಳುತ್ತಿದ್ದಾರೆ. ಇದರಿಂದ 4-ಜಿಲ್ಲೆಯ ರೈತರಿಗೆ 2ನೇ ಬೆಳೆ ಬೆಳೆಯಲು ನೀರು ಸಿಗುವುದಿಲ್ಲ ಎಂಬ ಆತಂಕದಲ್ಲಿ ಇದ್ದಾರೆ.  

ಆದ ಕಾರಣ ಅಧ್ಯಕ್ಷರು ಹಾಗೂ ಶಾಸಕರು, ಸಚಿವರು ಹಾಗೂ ನೀರಾವರಿ ಅಧಿಕಾರಿಗಳು, ಜಿಲ್ಲಾಧಿಕಾರಿಗಳೂ ಹಾಗೂ ಕೃಷಿ ಅಧಿಕಾರಿಗಳು ಮತ್ತು ರೈತ ಸಂಘದ ಮುಖಂಡರ ಸಮ್ಮುಖದಲ್ಲಿ ಚರ್ಚಿಸಿ 2ನೇ ಬೆಳೆಗೆ ನೀರು ಕೊಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ (ಜೆ.ಕಾರ್ತಿಕ್ ಬಣ) ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ಪಿ.ನಾರಾಯಣ ರೆಡ್ಡಿ, ಜೆ.ಉಮಾದೇವಿ, ಹೆಚ್‌.ಜೆ.ಮಲ್ಲಿಕಾರ್ಜುನ, ಜೆ.ಎನ್‌.ಕಾಳಿದಾಸ್, ಹೇಮರೆಡ್ಡಿ, ಎಲ್‌.ಎಸ್‌.ರುದ್ರ​‍್ಪ ಕೆ.ಎಚ್‌.ಮಹಾಂತೇಶ್, ನಾಗರಾಜ್, ನಲ್ಲಪ್ಪ, ಹನುಮಂತಪ್ಪ, ಕೆ.ಹನುಮಂತಪ್ಪ, ಮುತ್ತಯ್ಯ, ಹನುಯ್ಯ, ಜೆ.ಮಲ್ಲಪ್ಪ, ಹಾಗೂ ಇನ್ನಿತರರು ಭಾಗಿಯಾಗಿದ್ದರು.