ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಮೊಟಾರ್ ಅಳವಡಿಸಲು ಮನವಿ

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಮೊಟಾರ್ ಅಳವಡಿಸಲು ಮನವಿ Request to install motor in borewell under Ganga Kalyan Yojana

ಲೋಕದರ್ಶನ ವರದಿ 

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಮೊಟಾರ್ ಅಳವಡಿಸಲು ಮನವಿ 

ಮುದ್ದೇಬಿಹಾಳ 03: ತಾಲೂಕಿನ ಕೋಳೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಸರಕಾರದಿಂದ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಕೊಳವೆ ಬಾವಿ ಕೊರೆದಿದ್ದು ಸದ್ಯ ಇಲಾಖೆಯ ಅಧಿಕಾರಿಗಳು ಅದಕ್ಕೆ ಮೋಟಾರ್ ಅಳವಡಿಸದೆ ವ್ಯರ್ಥ ಸಮಯ ಹಾಳು ಮಾಡುವ ಮೂಲಕ ಅರ್ಹ ಫಲಾನುಭವಿಗಳಿಗೆ ತೊಂದರೆ ಮಾಡುತ್ತಿದ್ದಾರೆ.  

ಈ ಕೂಡಲೇ ಕೊಳವೆ ಬಾವಿಗೆ ಮೋಟಾರು ಅಳವಡಿಸುವ ಮೂಲಕ ದಲಿತ ಸಮುದಾಯ ರೈತ ಕುಟುಂಭಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕೋಳೂರು ಗ್ರಾಮದ ರೈತ ಮಹಿಳೆ ಸಹನಾ ಮಲ್ಲಿಕಾರ್ಜುನ ತಂಗಡಗಿ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ, ಎಚ್ ಸಿ ಮಹಾದೇವಪ್ಪನವರಿಗೆ ಪತ್ರ ಬರೆದಿದ್ದಾರೆ. 

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕೋಳೂರ ಗ್ರಾಮದ ನನ್ನ ಸ್ವಂತ ಮಾಲ್ಕಿ ಕಬ್ಬಾ ವಹಿವಾಟಿಯಲ್ಲಿನ ಜಮೀನು ಸರ್ವೆ ನಂ: 346/1 ಕ್ಷೇತ್ರ: 2 ಎಕರೆ ಜಮೀನಿನಲ್ಲಿ  2021-22 ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಫಲಾನುಭವಿಯಗಿ ಆಯ್ಕೆಗೊಂಡು ಅದರಂತೆ 2024 ನೇ ಸಾಲಿನಲ್ಲಿ ಡಾಽಽ ಬಿ.ಆರ್‌. ಅಂಬೇಡ್ಕರ್ ಅಭಿವೃದ್ಧಿ ನಿಗಮ ವಿಜಯಪುರ ಇವರು ನನ್ನ ಜಮೀನು ಸೇರಿದಂತೆ ಇದೇ ರೀತಿ ಅನೇಕ ಬಡ ದಲಿತ ಸಮಾಜದ ರೈತರ ಹೊಲಗಳಿಗೆ ಕೊಳವೆ ಬಾವಿ ಕೊರೆಯಲಾಗಿದೆ ಸಧ್ಯ ಅದರಂತೆ 2025 ರಲ್ಲಿ ವಿದ್ಯುತ್ ಸಂಪರ್ಕದ ಕಂಬಗಳನ್ನು, ತಂತಿಗಳನ್ನು ಮತ್ತು ವಿದ್ಯುತ್ ಪರಿವರ್ತಕವನ್ನು ಅಳವಡಿಸುವ ಕಾರ್ಯವೂ ಮುಕ್ತಾಯಗೊಂಡಿದೆ. ಆದರೆ  ವಿಯಪುರದ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧಿಕಾರಿಗಳು ಕೊರೆದ ಕೊಳವೆ ಬಾವಿಯಲ್ಲಿ ನೀರೆತ್ತುವ ಮೋಟಾರ್ ಪಂಪ್ ಇಳಿಸದೇ ಸುಖಾಸುಮ್ಮನೆ ಕಾಲಹರಣ ಮಾಡುತ್ತಿದ್ದಾರೆ ಎಣಿಸುತ್ತಿದ್ದಾರೆ ಮಾತ್ರವಲ್ಲದೇ ನಿತ್ಯ ಕಚೇರಿಗೆ ಅಲೆದಾಡಿದರೂ ಯಾವೂದೇ ಪ್ರಯೋಜನವಾಗಿಲ್ಲ.  

ಈ ಕುರಿತು ಮೇಲಿಂದ ಮೇಲೆ ಮೌಖಿಕವಾಗಿ ಮತ್ತು ದೂರವಾಣಿ ಮುಖಾಂತರ ಸಂಪರ್ಕಿಸಿದರೆ ಅಧಿಕಾರುಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ ಈ ಕೂಡಲೇ ನಮ್ಮ ಹೊಲಗಳಿಗೆ ಮೋಟಾರ ಪಂಪಸೆಟ್ಟ್‌ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ನಮ್ಮ ದಲಿತ ಸಮುದಾಯದ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.