ಜಾನಪದ ವಿಷಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಆಗ್ರಹಿಸಿ ಮನವಿ

ಧಾರವಾಡ 24: ಜಾನಪದ ಸಾಹಿತ್ಯ ನೆಲಮೂಲ ಮತ್ತು ದೇಶಿಯ ಸಂಸ್ಕೃತಿಯಿಂದ ಬಂದಿರುವ ಹಿನ್ನೆಲೆಯಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ಕರ್ನಾ ಟಕ ವಿಶ್ವವಿದ್ಯಾಲಯದ ಎಲ್ಲ ಅಧೀನ ಮಹಾವಿದ್ಯಾಲಯಗಳಲ್ಲಿ ಜಾನಪದ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದು ಆಗ್ರಹಿಸಿ ಕರ್ನಾ ಟಕ ಜಾನಪದ ಪದವೀಧರ ಸಂಘದ ಪದಾಧಿಕಾರಿಗಳು ಸೋಮವಾರ ಕವಿವಿ ಕುಲಪತಿ ಪ್ರೊ.ಎ.ಎಸ್.ಶಿರಾಳಶೆಟ್ಟಿ ಹಾಗೂ ಕುಲಸಚಿವರು ಪ್ರೊ.ಹೊನ್ನು ಸಿದ್ಧಾರ್ಥ ಅವರಿಗೆ ಮನವಿ ಅಪರ್ಿಸಿದರು. 

ಕಲೆ, ಸಾಹಿತ್ಯ, ಮೌಖಿಕ ಪರಂಪರೆಗಳ ಅಧ್ಯಯನ ಸಂಶೋಧನೆ ಸೇರಿದಂತೆ ಹಲವಾರು ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಸಮಾಜಕ್ಕೆ ಕೊಡುಗೆಯಾಗಿ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ಈಗಾಗಲೇ ಕೆಲವು ಕಾಲೇಜುಗಳಲ್ಲಿ ಜನಪದ ಸಾಹಿತ್ಯ ವಿಷಯ ಅಧ್ಯಯನ ಮಾಡಲಾಗುತ್ತಿತು. ಕೆಲ ಕಾರಣಗಳಿಂದ ಜಾನಪದ ಸಾಹಿತ್ಯ ವಿಷಯ ಪಠ್ಯದಿಂದ ಬಿಡಲಾಗಿದ್ದು, ಈ ವಿಷಯವನ್ನು ಪುನರ್ ಪ್ರಾರಂಭಿಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.

ಪ್ರಾಚೀನ ಮತ್ತು ಪಾರಂಪರಿಕ ಕಾಲಘಟ್ಟದಿಂದ 1846ನೇ ವರ್ಷದಿಂದ ಬೆಳೆದುಬಂದ ದೇಶ-ವಿದೇಶ ಜ್ಞಾನ ವಿಜ್ಞಾನವನ್ನು ಸಂಗ್ರಹಿಸಿ ನಿರಂತರವಾಗಿ ಹೊಸ ಹೊಸ ಜ್ಞಾನ ಶೋಧನೆ, ಸಂಸ್ಕೃತಿಯನ್ನು ಅತ್ಯಂತ ವೈಜ್ಞಾನಿಕ ತಳಹದಿಯ ಮೇಲೆ ಜಾನಪದ ಪದ್ಧತಿಯು ಬೆಳೆದುಬಂದಿದೆ. ಈ ಹಿನ್ನಲೆಯಲ್ಲಿ ಜಾನಪದವು ಬಹುಶಿಸ್ತಿನ ಅಧ್ಯಯನವಾಗಿರುವುದರಿಂದ ಭಾಷೆ-ಸಂಸ್ಕೃತಿ, ವೃತ್ತಿ, ಜನಾಂಗ, ರೂಢಿ, ಸಂಪ್ರದಾಯ ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಂಡು ನೆಮ್ಮದಿಯ ಜೀವನವನ್ನು ಸಮಾಜಕ್ಕೆ ನೀಡುವ ಗುರಿಯು ಜಾನಪದ ಸಾಹಿತ್ಯಕ್ಕೆಯಿದೆ.  

ಪ್ರಸ್ತುತ ಜಾನಪದ ವಿಷಯದಲ್ಲಿ ಎಂ.ಎ. ಎಂಫಿಲ್, ಪಿಎಚ್.ಡಿ., ನೆಟ್, ಸೆಟ್, ಪದವಿಗಳನ್ನು ಪಡೆದರೂ ಉದ್ಯೋಗದಿಂದ ವಂಚಿತರಾಗಿದ್ದಾರೆ. ಯುಜಿಸಿ ನಿಯಮಾವಳಿ ಪ್ರಕಾರ ಎಲ್ಲಾ ಅರ್ಹತೆಯಿದ್ದರೂ ಉದ್ಯೋಗದಿಂದ ವಂಚಿತರಾಗುತ್ತಿದ್ದೇವೆ.  ಜಾನಪದ ವಿದ್ಯಾರ್ಥಿ ಗಳ ಸಂಖ್ಯೆ ಮತ್ತು ಜಾನಪದ ಪದವೀಧರರು ಹೆಚ್ಚಾಗುತ್ತಿದ್ದು, ಶಿಗ್ಗಾಂವಿಯ ಗೊಟಗೋಡಿಯಲ್ಲಿ ಕನರ್ಾಟಕ ಜಾನಪದ ವಿಶ್ವವಿದ್ಯಾಲಯ ಕೂಡ ಇದೆ. ಈ ಹಿನ್ನೆಲೆಯಲ್ಲಿ  ಜಾನಪದ ವಿಷಯವನ್ನು ಪದವಿ ಮಹಾವಿದ್ಯಾಲಯಗಳಲ್ಲಿ ಐಚ್ಛಿಕ ವಿಷಯವನ್ನಾಗಿ ಪ್ರಾರಂಭಿಸಲು ಎಲ್ಲಾ ಕಾಲೇಜುಗಳಿಗೆ ಆದೇಶಿಸಬೇಕು ಎಂದು ಮನವಿಯಲ್ಲಿ ಆಗ್ರಹಪಡಿಸಿದ್ದಾರೆ. 

ಸಿಂಡಿಕೇಟ್ ಸದಸ್ಯರು ರವಿಕುಮಾರ ಮಾಳಿಗೇರ, ಸುಧೀಂದ್ರ ದೇಶಪಾಂಡೆ, ಕರ್ನಾ ಟಕ ಜಾನಪದ ಪದವಿಧೀದರ ಸಂಘದ ಅಧ್ಯಕ್ಷ ಡಾ.ಎಂ.ವೈ. ಬ್ಯಾಲಾಳ, ಡಾ.ಶಿವಸೋಣ್ಣ ನಿಟ್ಟೂರು, ಡಾ.ಬಸವರಾಜ ದುಗಾಣಿ, ಕವಿವಿ ಸಹಾಯಕ ಅಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷರು ಡಾ.ವಿಶ್ವನಾಥ ಚಿಂತಾಮಣಿ ಹಾಗೂ ವಿದ್ಯಾರ್ಥಿ ಗಳು ಇದ್ದರು.