ಬೀಳಗಿ 14: ಒಳಮೀಸಲಾತಿ ವರ್ಗೀಕರಣ ಕುರಿತು ಸುಪ್ರೀಂ ಕೋರ್ಟ ತೀರ್ಪಿನಂತೆ ಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ, ಸಮಗಾರ, ಮಚಗಾರ, ಡೋಹರ ಹಾಗೂ ಡಕ್ಕಲಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟ ಬೀಳಗಿ ಘಟಕದವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಿ ಸಂಘಟನೆಯವರು ತಮಟೆ ಬಾರಿಸುತ್ತಾ ಆಗಮಿಸಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯಕ್ಕೆ ತೆರಲಿ ಕಾಂಗ್ರೆಸ್ ಪಕ್ಷದ ತಾಲೂಕಾ ಅಧ್ಯಕ್ಷ ಹಣಮಂತ ಕಾಖಂಡಕಿಯವರ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿದರು.
ಡಿಎಸ್ಸೆಸ್(ಭೀಮವಾದ)ರಾಜ್ಯ ಕಾರ್ಯದರ್ಶಿ ಸೋಮು ಚೂರಿ ಮಾತನಾಡಿ ಮಾಧುಸ್ವಾಮಿಯವರ ಸಮಿತಿ ಏಕೆ (ಆದಿ ಕರ್ನಾಟಕ) ಏಡಿ (ಆದಿ ದ್ರಾವಿಡ) ಸಮಸ್ಯೆಗೆ ಪರಿಹಾರ ಒದಗಿಸಿದೆ. 2011ರ ಜನಗಣತಿಯ ಅಂಕಿಅಂಶಗಳ ಆಧಾರದಲ್ಲಿ ವರ್ಗೀಕರಣ ಮಾಡಿದೆ. ಈಗ ಮತ್ತೆ ನಾಗಮೋಹನ್ ದಾಸ್ ಆಯೋಗಕ್ಕೆ ಅದೇ ಕೆಲಸ ಕೊಡಲಾಗಿದೆ. ಸರಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಇವರಿಗೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟ್ಟವಾಗುತ್ತದೆ. ಒಳಮೀಸಲಾತಿ ಜಾರಿ ಆಗುವರೆಗೆ ಸರಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು ಆದರೆ ಈ ಭರವಸೆ ಜಾರಿಯಾಗಿಲ್ಲ. ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲೆ ಇದೆ, ಇದು ಖಂಡನಾರ್ಹವಾಗಿದೆ ಎಂದರು.
ಕಾಂಗ್ರೆಸ್ ಸರಕಾರದ ಈ ಒಳಮೀಸಲಾತಿ ವಿರೋಧಿ ಧೋರಣೆ ಖಂಡಿಸಿ ಇದೇ ಡಿ.16 ರಂದು ಸೋಮವಾರ ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶಕ್ಕೆ ಕರೆ ಕೊಡಲಾಗಿದೆ. ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟಿನ ತೀರ್ು ಬಂದ ಮೊದಲವಾರದಲ್ಲೆ ಒಳಮೀಸಲಾತಿಯನ್ನು ಜಾರಿಮಾಡಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ದಯನವರ ನೇತೃತ್ವದ ಕಾಂಗ್ರೆಸ್ ಪಕ್ಷದ ಸರಕಾರ ಬದ್ಧತೆ ತೋರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಹೇಳಿ ಅಧಿಕಾರ ಹಿಡಿದ ಕಾಂಗ್ರೆಸ್ ನಾಯಕರು ಮಾದಿಗ ಜನತೆಗೆ ವಿಶ್ವಾಸದ್ರೋಹ ಎಸಗಿದ್ದಾರೆ. ನೀವು ಶಾಸಕರಾಗಿ ಆಯ್ಕೆ ಆಗುವಲ್ಲಿ ನಮ್ಮ ಸಮಾಜದ ಬೆಂಬಲ ನಿರ್ಣಾಯಕವಾಗಿದೆ. ನೀವು ಬೆಳಗಾವಿ ಅಧಿವೇಶನದಲ್ಲಿ ಒಳಮೀಸಲಾತಿಯ ವಿಷಯವನ್ನು ಪ್ರಸ್ಥಾಪಿಸಿ ಬೆಂಬಲ ಸೂಚಿಸಬೇಕೆಂದು ನಮ್ಮ ವಿನಂತಿ. ಹಾಗೆಯೇ ಬೆಳಗಾವಿಯ ಹಕ್ಕೊತ್ತಾಯ ಸಮಾವೇಶದಲ್ಲಿ ಸಮುದಾಯ ಹೆಚ್ಚಿನ ಸಂರ್ಕಯೆಯಲ್ಲಿ ಭಾಗವಹಿಸಬೇಕೆಂದರು.
ಮಾದಿಗ ಸಮಾಜದ ಮುಖಂಡ ಸಿದ್ದು ಮಾದರ. ಪಡಿಯಪ್ಪ ಕಳ್ಳಿಮನಿ, ಶಿವಾನಂದ ಮಾದರ, ರವಿ ಮಂಟೂರ, ಆನಂದ ಮಂಟೂರ, ನಾಗೇಶ ಸಿಡ್ಲನ್ನವರ, ಆಶೋಕ ಚಲವಾದಿ, ಮಹೇಶ ಮಾದರ, ರಮೇಶ ಅನಗವಾಡಿ, ಮಹೇಶ ನಾಗರಾಳ, ಆನಂದ ಗಲಗಲಿ ಇತರರು ಇದ್ದರು.