ಕಳಪೆ ಕಾಮಗಾರಿಗಳಿಗೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡುವಂತೆ ಒತ್ತಯಿಸಿ ಮನವಿ

ಕಳಪೆ ಕಾಮಗಾರಿಗಳಿಗೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತು  ಮಾಡುವಂತೆ ಒತ್ತಯಿಸಿ ಮನವಿ Request to immediately suspend officials who have abetted shoddy works

                       ಹೊಸಪೇಟೆ 02: ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಹೊಸಪೇಟೆ ನಗರವೂ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಸ್ತೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳು ಅತ್ಯಂತ ಭರದಿಂದ ಸಾಗುತ್ತಿರುವುದು ತಮ್ಮ ಗಮನಕ್ಕೂ ಬಂದಿರಬಹುದು ಎಂದು ಭಾವಿಸಿದ್ದೇವೆ ಆದರೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ತಮ್ಮ ಅವಗಾಹನೆಗೆ ತರುವ ವಿಷಯವೆನೆಂದರೆ ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿರುವ ಈ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿಗಳು ಎಂದು ವಿಜಯನರ ಕ್ಷೇತ್ರದ ಶಾಸಕರಾದ ಎಚ್ ಆರ್ ಗವಿಯಪ್ಪ ಅವರ ಪುತ್ರ ವಿರೂಪಾಕ್ಷ ಅವರು ಖುದ್ದು ರಸ್ತೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಈ ಕಳಪೆ ಕಾಮಗಾರಿಗಳ ಬಗ್ಗೆ ಧ್ವನಿ ಎತ್ತಿದ್ದಾರೆ ಅಷ್ಟೇ ಅಲ್ಲದೇ, ಈ ಕಳಪೆ ಕಾಮಗಾರಿಯ ವಿಡಿಯೋ ಚಿತ್ರಣವನ್ನೂ ಮಾಡಿದ್ದಾರೆ,

                        50 ಎಂ.ಎಂ ಹಾಕಬೇಕಿದ್ದ ಡಾಂಬರ್ ರಸ್ತೆಯು ಅದನ್ನ ಕೇವಲ 20 ಎಂ.ಎಂ ರಸ್ತೆಗೆ ಸೀಮಿತಗೊಳಿಸಿರುವುದು ಮೇಲ್ನೋಟಕ್ಕೆ ಆ ವಿಡಿಯೋ ಚಿತ್ರೀಕರಣದಲ್ಲಿ ಕಂಡು ಬಂದಿದೆ, ಆ ಚಿತ್ರೀಕರಣವು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಮತ್ತು ಹಲವು ಪತ್ರಿಕೆಗಳಲ್ಲಿಯೂ ಸಹ ಪ್ರಕಟಗೊಂಡಿವೆ, ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರವು ಸಾರ್ವಜನಿಕರ ಉಪಯೋಗಕ್ಕೆಂದು ಬಳಸುವ ಹಣವನ್ನ ಈ ರೀತಿ ದುರ್ಬಳಕೆ ಆಗುತ್ತಿರುವುದು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಸಹಿಸಲು ಸಾಧ್ಯವಿಲ್ಲ. ಇಂತಹ ಇನಷ್ಟು ಅಕ್ರಮಗಳು ಬಯಲಾಗಬೇಕಿವೆ, ಇತ್ತೀಚಿನ ಅವಧಿಯಲ್ಲಿ ಅತಿ ಹೆಚ್ಚು ಅಕ್ರಮಗಳು ನಡೆದಿರುವ ಬಗ್ಗೆ ನಮಗೆ ಬಹುದೊಡ್ಡ ಅನುಮಾನುವು ಇದೆ, ಲೊಕೋಪಯೋಗಿ ಇಲಾಖೆಯ ಅಧಿಕಾರಿಗಳು ಈ ಅಕ್ರಮಗಳಲ್ಲಿ ಭಾಗಿಯಾಗಿರುವುದಕ್ಕೆ ಹಲವು ಉದಾಹರಣೆಗಳಿವೆ ಹಾಗಾಗಿ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್  

                       ಆದ ದೇವದಾಸ್ (ಇಇ) ಮತ್ತು ಉಪ ಮುಖ್ಯ ಇಂಜಿನಿಯರ್ ಆದ ರವಿನಾಯ್ಕ (ಂಇಇ) ಮತ್ತಿತರರನ್ನು ಸೂಕ್ತ ತನಿಖೆಗೊಳಪಡಿಸಬೇಕು ಮತ್ತು ಇವರ ಅವಧಿಯಲ್ಲಿ ನಡೆಸಿದ ಕಾಮಗಾರಿಗಳ ಬಗ್ಗೆ ಈ ಇಬ್ಬರು ಅಧಿಕಾರಿಗಳನ್ನ ಅಮಾನತ್ತಿನಲ್ಲಿಟ್ಟು ಲೋಕಾಯುಕ್ತ ಸಂಸ್ಥೆ ಅಥವಾ ಸ್ವಂತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಮತ್ತು ಜಿಲ್ಲೆಯ ವಿವಿದ ಇಲಾಖೆಗಳಲ್ಲಿಯೂ ಭ್ರಷ್ಟಚಾರ ತಾಂಡವ ಆಡುತ್ತಿದೆ ಹಾಗಾಗಿ ತಾವು ಎಲ್ಲಾ ಇಲಾಖೆಗಳ ಮೇಲೆ ನಿಗಾ ವಹಿಸಬೇಕೆಂದು ವಿಜಯನಗರ ಜಿಲ್ಲಾ ಬಬಾಸಾಹೇಬ್ ಡಾಽಽ ಬಿ.ಆರ್‌.ಅಂಬೇಡ್ಕರ್ ಸಂಘವು ಆಗ್ರಹಿಸುತ್ತದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಮಟ್ಟದ ಹೋರಾಟಕ್ಕೆ ತಾವು ಎಡೆಮಾಡಿಕೊಡುವುದಿಲ್ಲ ಎಂದು ನಂಬಿದ್ದೇವೆ. ಈ ಅಧಿಕಾರಿಗಳ ಮೇಲೆ ತನಿಖೆ ಮತ್ತು ಕ್ರಮಕೈಗೊಂಡ ಬಗ್ಗೆ ನಮ್ಮ ಸಂಘಕ್ಕೆ ಮಾಹಿತಿ ನೀಡಬೇಕೆಂದು ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 

                     ಈ ಸಂಧರ್ಭದಲ್ಲಿ ಸಂಘದ ಪ್ರದಾನ ಕಾರ್ಯದರ್ಶಿಗಳಾದ ಸೋಮಶೇಖರ್ ಬಣ್ಣದಮನೆ, ಪ್ರಗತಿಪರ ಚಿಂತಕರು ಪೀರ್ ಬಾಷ, ಜೆ.ಶಿವಕುಮಾರ್, ಹೆಚ್, ವಿನೋದ್, ಸಣ್ಣವೀರ​‍್ಪ, ಸುರ್ಯನರಾಯಣ, ಮಂಜುನಾಥ್, ಗೀರೀಶ್,ಕುಮಾರ್, ಅರೋಲ್, ಜಯಪ್ಪಪಟ್ಟಿ, ಸಿ.ಪ್ರಕಾಶ್, ವೆಂಕಟೇಶ, ಇಂತಿಯಾಜ್, ಮಾಲತೇಶ್, ಅಲ್ತಾಫ್ ಇತರರು ಇದ್ದರು.  ಈ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಗೊಳಿಸಲು ಕೋರಲಾಗಿದ