ಕೃಷ್ಣಾ ಹಡಪದರಿಗೆ ಸವಿತಾ ನಿಗಮ ಅಧ್ಯಕ್ಷ ಸ್ಥಾನ ನೀಡಬೇಕೆಂದು ಮನವಿ

ಕೃಷ್ಣಾ ಹಡಪದರಿಗೆ ಸವಿತಾ ನಿಗಮ ಅಧ್ಯಕ್ಷ ಸ್ಥಾನ ನೀಡಬೇಕೆಂದು ಮನವಿ Request to give Krishna Hadapada the post of Savita Corporation President

ಗದಗ 28: ಸವಿತಾ ಸಮಾಜದ ಗದಗ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದರಿಗೆ ಗದಗ ಜಿಲ್ಲಾ ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರ ಪಾಟೀಲರವರಿಂದ ಮತ್ತು ಹಿರಿಯ ಸಚೀವರಾದ ಎಚ್ ಕೆ ಪಾಟೀಲರು ಹಾಗೂ ಹಿರಿಯರಾದ ಡಿ ಆರ್ ಪಾಟೀಲಜಿ ಅವರ ಆಶೀರ್ವಾದದಿಂದ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ಅಧ್ಯಕ್ಷ ಸ್ಥಾನ ಸಿಗುವ ವಿಸ್ವಾಸವಿದೆ ಎಂದುರಾಜ್ಯ ಸವಿತಾ ಸಮಾಜದಉತ್ತರಕರ್ನಾಟಕ ವಿಭಾಗೀಯ ಕಾರ್ಯದರ್ಶಿಗಳಾದ ಹನಮಂತಪ್ಪರಾಂಪೂರ ಹೇಳಿದರು.        

ಅವರು ತಮ್ಮ 64ನೇ ವರ್ಷದ ಜನ್ಮದಿನ ನಿಮಿತ್ಯ ಜಿಲ್ಲಾ ಸವಿತಾ ಸಮಾಜವು ಸಲ್ಲಿಸಿದ ಗೌರವ ಸನ್ಮಾನ ಸ್ವಿಕರಿಸಿ ಮಾತನಾಡಿ ಎಲ್ಲರೀತಿ ಹಾಗೂ ರಂಗಗಳಿಂದ ಹಿಂದುಳಿದ ಶೋಷಿತ ಹಾಗೂ ಬಡ ಸವಿತಾ ಸಮಾಜದಒಗ್ಗಟ್ಟಿಗೆ ಮತ್ತು ಬಲಿಷ್ಠ ಸಂಘಟನೆಗಾಗಿ ಹಲವು ರೀತಿಯ ಪ್ರತಿಭಟನೆಗಳು ಹೋರಾಟಗಳು ಮತ್ತು ಸವಿತಾ ಸಮಾಜದ ಬಲವರ್ಧನೆಗಾಗಿ ನಿರಂತರ ಜಾಗೃತ ಸಭೆ ಸಮಾರಂಭಗಳನ್ನು ಹಮ್ಮಿಕೊಂಡು ಸವಿತಾ ಸಮಾಜವನ್ನು ಮುಖ್ಯವಾಹಿನಿಗೆ ತರಲು ಹಗಲು ರಾತ್ರಿ ಎನ್ನದೆ ಸಮಾಜದ ಸಂಘಟಿಕರನ್ನು ಹಾಗೂ ಹಿರಿಯರನ್ನು ಜೊತೆಗೂಡಿ ಸೇರಿಕೊಂಡು ಯಶಸ್ವಿಯಾಗಿ ಶ್ರಮವಹಿಸುತ್ತಿರುವ ಕರ್ನಾಟಕ ರಾಜ್ಯ ಸವಿತಾ ಸಮಾಜ ಗದಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸವಿತಾ ಸಮಾಜ ಅಭಿವೃಧ್ಧಿ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಹನಮಂತಪ್ಪ ರಾಂಪೂರ ಅವರು ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರ ಪಾಟೀಲಜಿ ಅವರಿಗೆ ಮತ್ತು ಹಿರಿಯ ಸಚೀವರಾದ ಎಚ್ ಕೆ ಪಾಟೀಲಜಿ ಅವರಿಗೆ ಹಾಗೂ ಹಿರಿಯರಾದ ಡಿ ಆರ್ ಪಾಟೀಲಜಿ ಅವರಗೆ ಹಾಗೂ ಸರಕಾರಕ್ಕೆ ಮನವಿ ಮಾಡಿ ಒತ್ತಾಯಿಸಿದರು. 

ಹಿರಿಯರಾದ ರಮೇಶ ರಾಂಪೂರ ಅವರು ಮಾತನಾಡಿ ಕೃಷ್ಣಾ ಎಚ್ ಹಡಪದ ಅವರ ಮುಂದಾಳತ್ವದಲ್ಲಿ ರಾಜ್ಯಕ್ಕೆ ಮಾದರಿಯಾದ ಹತ್ತಾರುಕಾರ್ಯ ಕೆಲಸಗಳಲ್ಲಿ ಒಂದಾದ ಗದಗಿನಲ್ಲಿ ರಾಜ್ಯದ ಪ್ರಥಮ ಸವಿತಾ ಮಹರ್ಷಿ ವೃತ್ತ ನಿರ್ಮಿಸಿ ಸರಕಾರಿ ಆದೇಶ ಮಾಡಿಸುವ ಮೂಲಕ ರಾಜ್ಯ ಸವಿತಾ ಸಮಾಜದಲ್ಲೇ ಸಮಾಜ ಸಂಘಟನೆಗೆ ಹೊಸ ಅಲೆಯ ದೀಪ ಹಚ್ಚಿದ ಜತೆಗೆ ಸಮಾಜಕ್ಕೆ ಅನೇಕ ರೀತಿಯ ಸೇವೆ ಸಮರ​‍್ಿಸಿ ಸವಿತಾ ಸಮಾಜಕ್ಕೆ ಮಹತ್ವದ ಕೊಡುಗೆ ನಿಡುವುದರೊಂದಿಗೆ ಸವಿತಾ ಸಮಾಜದ ಹತ್ತಾರು ಉನ್ನತ ಹುದ್ದೆಗಳ ಅಧ್ಯಕ್ಷ ಮತ್ತು ಇತರೆ ಅನೇಕ ಸ್ಥಾನದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ದಾಖಲೆ ರೂಪದಲ್ಲಿ ನಿಭಾಯಿಸಿದ್ದಾರೆ. ಎಂದು ಹೇಳಿದರು       ಸಮಾಜದ ಸಲಹಾ ಸಮಿತಿಯ ಜಿಲಾ ್ಲಉಪಾಧ್ಯಕ್ಷರಾದ ಬಸುವರಾಜ ಗೌಡರ ಮಾತನಾಡಿ ಸದ್ಯ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾಗಿ ಸೇವೆ ಮುಂದುವರಿಸಿರುವ ಗದಗ ಕೃಷ್ಣಾ ಎಚ್ ಹಡಪದ ಅವರು ಕಾಂಗ್ರೇಸ್ ಪಕ್ಷದಲ್ಲಿ ಸುಮಾರು 18 ರಿಂದ 20 ವರ್ಷಗಳಿಂದ ಗುರುತಿಸಿಕೊಂಡು ಗದಗ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಎಚ್ ಕೆ ಪಾಟೀಲ ಅವರ ಹಿತೈಷಿ ಹಾಗೂ ಆಪ್ತರುಗಳಲ್ಲಿ ಒಬ್ಬರಾಗಿ ಗದಗ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದ ಪರವಾಗಿ ಸದಾ ಸೇವೆಯನ್ನು ಸಲ್ಲಿಸುತ್ತಿರುವ ಅವರು ಸಮಾನ ಮನೋಭಾವ ಮತ್ತು ಎಲ್ಲ ಸಮುಧಾಯದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸರಳ ವ್ಯಕ್ತಿತ್ವ ಹೊಂದಿದ್ದಾರೆಂದು ಸಂತಸ ವ್ಯಕ್ತ ಪಡಿಸಿದರು. 

ಜಿಲ್ಲಾ ಖಜಾಂಚಿ ಅರೂಣ ರಾಂಪೂರ ಮಾತನಾಡಿ ಸವಿತಾ ಸಮಾಜ ಪರ ಮತ್ತು ಕಾಂಗ್ರೇಸ್ ಪಕ್ಷದ ಪರ ಅತ್ಯಂತ ಕಾಳಜಿಯೊಂದಿಗೆೆ ಉತ್ಸಾಹದ ಸಂಕಲ್ಪದೊಂದಿಗೆ ನಿರಂತರವಾಗಿ ಸಮಾಜ ಸೇವೆ ಮಾಡುತ್ತಿರುವ ಗದಗ ಜಿಲ್ಲೆಯ ಕೃಷ್ಣಾ ಎಚ್ ಹಡಪದರವರನ್ನು ಕರ್ನಾಟಕ ಸವಿತಾ ಸಮಾಜದ ಅಭಿವೃದ್ಧಿ ನಿಗಮ ಮಂಡಳಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿ ಮಾತನಾಡಿದ ಅವರು ಈ ಆಯ್ಕೆಯಿಂದ ಉತ್ತರ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಟ್ಟಂತೆ ಆಗುತ್ತದೆ ಮತ್ತು ಕರ್ನಾಟಕ ರಾಜ್ಯ ಸವಿತಾ ಸಮಾಜಕ್ಕೂ ಅನುಕೂಲವಾಗುತ್ತದೆ. ಎಂದು ಗದಗ ಜಿಲ್ಲಾ ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷರಾದ ಕೃಷ್ಣಗೌಡ್ರ ಪಾಟೀಲರಿಗೆ. ಹಿರಿಯ ಸಚಿವರಾದ ಎಚ್ ಕೆ ಪಾಟೀಲರಿಗೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ. ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವುಕುಮಾರ ಅವರಿಗೆ ಮತ್ತು ಪಕ್ಷದ ವರೀಷ್ಠರುಗಳಿಗೆ ಅರೂಣ ರಾಂಪೂರ ಹಾಗೂ ಕಾರ್ಯಕ್ರಮದಲ್ಲಿ ಹಾಜರಿದ್ದ ವಿವಿಧ ಭಾಗಗಳ ಮುಖಂಡರು ಮನವಿ ಮಾಡಿ ಒತ್ತಾಯಿಸಿದ್ದಾರೆ     ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್ ಹಡಪದ ಅವರು ಮಾತನಾಡಿ ಸರಳ ಸ್ವಭಾವ, ನೇರ ನಡೆ-ನುಡಿಗೆ ಹೆಸರಾಗಿರುವ, ಹೃದಯ ಶ್ರೀಮಂತಿಕೆಯನ್ನು ಹೊಂದಿರುವ ಸವಿತಾ ಸಮಾಜದ ಪ್ರೀತಿಯ ನಲುಮೆಯ ಹಿರಿಯರು ಹಾಗೂ ಸವಿತಾ ಸಮಾಜದ ಉತ್ತರ ಕರ್ನಾಟಕ ವಿಭಾಗೀಯ ರಾಜ್ಯ ಕಾರ್ಯದರ್ಶಿಗಳಾದ ಹನಮಂತಪ್ಪ ನಾಗಪ್ಪ ರಾಂಪೂರ ಅವರಿಗೆ ಗದಗ ಜಿಲ್ಲಾ ಸವಿತಾ ಸಮಾಜದ ಸಮಸ್ತ ಸಕಲ ಬಂಧುಗಳ ಪರವಾಗಿ 64ನೇ ಜನ್ಮ ದಿನಕ್ಕೆ ಶುಭಕೊರಿ ಗೌರವಿಸಿ ಮಾತನಾಡಿದರು. ಯುವ ನಾಯಕ ವಿನಾಯಕ ರಾಯಚೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸವಿತಾ ಸಮಾಜದ ಜಿಲ್ಲಾ ಪದಾಧಿಕಾರಿಗಳು ಸಮಾಜದ ಗುರು ಹಿರಿಯರು ಯುವಕರು ಬಂಧು ಬಾಂಧವರು ಉಪಸ್ತಿತರಿದ್ದರು.