ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ವೆ ಹಾಕಿರುವುದಕ್ಕೆ ವಿನಾಯಿತಿ ನೀಡಲು ಮನವಿ

ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ವೆ ಹಾಕಿರುವುದಕ್ಕೆ ವಿನಾಯಿತಿ ನೀಡಲು ಮನವಿ Request to exempt Anganwadi workers from conducting surveys

ವಿಜಯಪುರ  25 : ಕರ್ನಾಟಕ ರಾಝ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆ ಸಮೀಕ್ಷೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ವೆ ಹಾಕಿರುವುದಕ್ಕೆ ವಿನಾಯಿತಿ ನೀಡುವಂತೆ ವಿನಂತಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲೂಕ ಸಮಿತಿ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಅವರಿಗೆ ಮನವಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ವಿಜಯಪುರ ತಾಲೂಕಾ ಅಧ್ಯಕ್ಷರಾದ ಸುನಂದಾ ನಾಯಕ ಮಾತನಾಡಿ, ಅಂಗನವಾಡಿ ಕೇಂದ್ರದ 3-6 ವರ್ಷದ ಮಕ್ಕಳಿಗೆ ಬೆಳಿಗ್ಗೆ ಮದ್ಯಾಹ್ನ ಉಪಹಾರ ವಿತರಿಸುವದು. ಮತ್ತು ಪೂರ್ವ ಶಿಕ್ಷಣ ಚಟುವಟಿಕೆ ಮಾಡಬೇಕು. ಅಂಗನವಾಡಿ ಕೇಂದ್ರದ ಸ್ವಚ್ಚತೆ ಕಾಪಾಡಬೇಕು. ಕೇಂದ್ರ ಸರಕಾರದ ಪೋಷಣ ಟ್ರ್ಯಾಕರ್‌ನಲ್ಲಿ 3-6, 6-3, ಗರ್ಭಿಣಿ ಬಾಣಂತಿಯರ ಮುಖ ಚರ್ಚೆ ಗುರುತಿಸುವಿಕೆ (ಎಫ್‌.ಆರ್‌.ಎಸ್‌.) ಮತ್ತು 3-6 ಮಕ್ಕಳ ಅಪಾರ ಐ.ಡಿ. ಈ ಕೆವೈಸಿ ಮತ್ತು ಮಾಡುವುದು. ಪೋಷಣ ಅಭಿಯಾನ ಜನಾಂದೋಲನದ ಕಾರ್ಯಕ್ರಮ ಮಾಡಿ ಫೋಟೋ ಸಲ್ಲಿಸುವದು.  6-3 ಮಕ್ಕಳಿಗೆ ಮತ್ತು ಗರ್ಭಿಣಿ ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ ಮಾಡುವದು. ಕಾರ್ಯಕರ್ತೆಯರು ಬಿ.ಎಲ್‌.ಓ. ಸವೇ ಕಾರ್ಯವನ್ನು ಮಾಡುವದು. ಕೇಂದ್ರದಲ್ಲಿ ಎಲ್ಲ ದಾಖಲಾತಿಗಳನ್ನು ನಿರ್ವಹಿಸುವುದಿರುತ್ತದೆ. ಅದರಂತೆ ವಿಜಯಪುರ ತಾಲೂಕಿನಲ್ಲಿ ಸಾಕಷ್ಟು ಕೇಂದ್ರಗಳಿಗೆ ಸಹಾಯಕಿಯರು ಇರುವದಿಲ್ಲ. ನೇಮಕಾತಿ ಆದರೂ ನೇಮಕಾತಿ ಆದೇಶ ಇನ್ನೂ ಕೊಟ್ಟಿರುವದಿಲ್ಲ. ಹಾಗಾಗಿ ಕೇಂದ್ರದ ಎಲ್ಲ ಕೆಲಸಗಳನ್ನು ಕಾರ್ಯಕರ್ತೆಯೇ ಮಾಡಬೇಕು. ಕೆಲ ಕಾರ್ಯಕರ್ತೆಯರಿಗೆ ಆರೋಗ್ಯ ಸಮಸ್ಯೆ ಇರುವದು ಕೌಟುಂಬಿಕ ಸಮಸ್ಯೆ ಇರುವುದು 55 ವರ್ಷ ಮೇಲ್ಪಟ್ಟವರು ಇರುವರು. ಈ ಸಮೀಕ್ಷೆಯನ್ನು ನಮಗೆ ವಹಿಸಿರುವದರಿಂದ ನಮ್ಮ ಅಂಗನವಾಡಿ ಕೇಂದ್ರದ ಚಟುವಟಿಕೆಗಳನ್ನು ಪರಿಣಾಮಕಾರಿಯ ಮಾಡಲು ತೊಂದರೆಯಾಗುತ್ತಿದೆ. ಕಾರಣ ದಯಾಳುಗಳಾದ ತಾವು ನನ್ನನ್ನು ಈ ಸಮೀಕ್ಷೆ ಕಾರ್ಯದಿಂದ ಬಿಡುವು ಮಾಡಿಸಬೇಕೆಂದು ವಿನಂತಿಸಿಕೊಂಡರು. 

ಈ ಸಂದರ್ಭದಲ್ಲಿ ಗೀತಾ ನಾಯಕ, ರಾಜೇಶ್ವರಿ ಸಂಕದ, ರಿಜ್ವಾನ ಕೊರೋಶೆ, ಗೀತಾ ಭಜಂತ್ರಿ, ಶ್ರೀದೇವಿ ವಗ್ಯಾನವರ, ರೇಣುಕಾ ಸೊನ್ನದ, ವಿಜಯಲಕ್ಷ್ಮೀ ನಾಯಕ, ಭಾರತಿ ಕಡಿಮನಿ, ಜರೀನಾ ಸೊನ್ನದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.