ಏ.14ರಂದು ಬಿ.ಆರ್‌.ಅಂಬೇಡ್ಕರ್ ಜಯಂತಿ ಆಚರಿಸಲು ಮನವಿ

ಏ.14ರಂದು ಬಿ.ಆರ್‌.ಅಂಬೇಡ್ಕರ್ ಜಯಂತಿ ಆಚರಿಸಲು ಮನವಿ Request to celebrate BR Ambedkar Jayanti on Oct.14

ಲೋಕದರ್ಶನ ವರದಿ 

ಸಿಂದಗಿ 13: ಆರ್‌ಬಿಐ ಅಧೀನದಲ್ಲಿ ಬರುವ ಪಿಕೆಪಿಎಸ್, ಡಿಸಿಸಿ ಬ್ಯಾಂಕ್, ಪೈನಾನ್ಸ್‌ಗಳಲ್ಲಿ ಏ.14ರಂದು ಡಾ. ಬಿ.ಆರ್‌.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸುವಂತೆ ಆದೇಶ ನೀಡಬೇಕು ಎಂದು ಭೀಮ ಸೇನೆ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಿಗೆ ಮನವಿ ಸಲ್ಲಿಸಿದರು. 

 ಈ ವೇಳೆ ಭೀಮ್ ಸೇನೆ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಅನಿಲ ಹೊಸಮನಿ, ಸಮಾಜ ಹೋರಾಟಗಾರ ಹರ್ಷವರ್ಧನ ಪೂಜಾರಿ ಮಾತನಾಡಿ, ಸಿಂದಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಆರ್‌ಬಿಐ ಅಧೀನದಲ್ಲಿ ಬರುವ ಪಿಕೆಪಿಎಸ್, ಡಿಸಿಸಿ ಬ್ಯಾಂಕ್, ಪೈನಾನ್ಸ್‌ಗಳಲ್ಲಿ ಏ.14 ರಂದು ಕಡ್ಡಾಯವಾಗಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಜಯಂತಿ ಆಚರಿಸುವಂತೆ ಲಿಖಿತ ರೂಪದಲ್ಲಿ ಆದೇಶ ನೀಡಬೇಕು ಎಂದು ಮನವಿ ಮಾಡಿಕೊಂಡರು. 

 ಮನವಿ ಸ್ವೀಕರಿಸಿ ತಹಶೀಲ್ದಾರ ಕರೆಪ್ಪ ಬೆಳ್ಳಿ ಮಾತನಾಡಿ, ಆರ್‌ಬಿಐ ಅಧೀನದಲ್ಲಿ ಬರುವ ಆರ್ಥಿಕ ವ್ಯವಹಾರ ಸಂಸ್ಥೆಗಳಲ್ಲಿ ಏ.14ರಂದು ಡಾ.ಬಿ.ಆರ್‌.ಅಂಬೇಡ್ಕರ್ ಜಯಂತಿಯನ್ನು ಆದೇಶ ಆಚರಿಸುವಂತೆ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ತಾಲೂಕಾಧ್ಯಕ್ಷ ಪ್ರಜ್ವಲ್ ಮಲ್ಲಾರಿ, ದ್ಯಾವಪ್ಪ ಕುದರಗುಂಡ, ಲಕ್ಷ್ಮಣ ಓಲೇಕಾರ ಸೇರಿದಂತೆ ಇತರರು ಇದ್ದರು.