ಲೋಕದರ್ಶನ ವರದಿ
ರಾಣೆಬೆನ್ನೂರ 06 :ತಾಲೂಕಾ ಕನರ್ಾಟಕ ಭೂ ಹಕ್ಕುದಾರರ ವೇದಿಕೆ ಮತ್ತು ನೀಡ್ಸ್ ಸಂಸ್ಥೆಯ ಸಹಯೋಗದಲ್ಲಿ ಹಗರಿಬೊಮ್ಮನಹಳ್ಳಿ ಶಾಸಕರಾದ ಮಾನ್ಯ ಭೀಮನಾಯ್ಕರವರಿಗೆ ಬಗರ್ ಹುಕುಂ ಮತ್ತು ಅರಣ್ಯ ಭೂ ಸಾಗುವಳಿದಾರರಿಗೆ ಹಕ್ಕು ಪತ್ರಕೊಡಲು ಮನವಿಯನ್ನು ಸಲ್ಲಿಸಲಾಯಿತು.
ವಿಧನಾ ಸಭಾಕ್ಷೇತ್ರ ಸಂಚಾಲಕರಾದ ರಾಜಪ್ಪ ಡಿ ಮಾತನಾಡಿ 1991-92 ಇಸವಿಗಿಂತಲು ಮುಂಚಿತವಾಗಿ ಬಗರ್ ಹುಕುಂ ಮತ್ತು ಅರಣ್ಯ ಭೂಮಿಯನ್ನು ರೈತರು ಸಾಗುವಳಿ ಮಾಡುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.
ಸುಮಾರು 50 ರಿಂದ 60ವರ್ಷಗಳ ಕಾಲ ಉಳಿಮೆ ಮಾಡಿ, ಹಕ್ಕು ಪತ್ರಕ್ಕೆ ಅವಶ್ಯವಿರುವ ದಾಖಲಾತಿಗಳೂಂದಿಗೆ ಫಾರಂ ನಂ 50 ಮತ್ತು 53ರಲ್ಲಿ ಅಜರ್ಿ ಸಲ್ಲಿಸಿದರೂ ಸಹ ಇದುವರೆಗೂ ಅವರಿಗೆ ಹಕ್ಕು ಪತ್ರದೊರೆತಿಲ್ಲ. ಇನ್ನು ಮಳೆಗಾಲದಲ್ಲಿ ಅರಣ್ಯ ಮತ್ತು ತಾಲೂಕಾ ಕಛೇರಿ ಅಧಿಕಾರಿಗಳು ಭೂಮಿಯನ್ನು ಉಳಿಮೆ ಮಾಡದಂತೆ ರೈತರಿಗೆ ಸಮಸ್ಯ ಮಾಡುತ್ತಿದ್ದಾರೆ. ಅದಕ್ಕಾಗಿ ತಾವುಗಳು ಅಜರ್ಿ ಸಲ್ಲಿಸಿದಂತಹ ರೈತರಿಗೆ ಹಕ್ಕು ಪತ್ರ ನೀಡಬೇಕೆಂದು ಮಾನ್ಯ ಶಾಸಕರನ್ನು ಒತ್ತಾಯಿಸಿದರು.
ಜಿಲ್ಲಾ ಕನರ್ಾಟಕ ಭೂ ಹಕ್ಕುದಾರರ ವೇದಿಕೆಯ ಅಧ್ಯಕ್ಷರಾದ ಭರಮಣ್ಣ ಮಾತನಾಡಿ ರೈತರು ಹಕ್ಕು ಪತ್ರ ಪಡೆಯುವ ಸಂಬಂಧ ತಮ್ಮ ನಿತ್ಯ ಕೃಷಿ ಚಟುವಟಿಕೆಗಳನ್ನು ಬಿಟ್ಟು ಶಾಸಕರ ಮನೆಗಳಿಗೆ, ತಾಲ್ಲೂಕಾ ದಂಡಾಧಿಕಾರಿಗಳ ಕಛೇರಿಗಳಿಗೆ, ಅರಣ್ಯ ಇಲಾಖೆಗೆ, ಜಿಲ್ಲಾಧಿಕಾರಿಗಳ ಕಛೇರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಹತ್ತಿರ ಸುಮಾರು 40ರಿಂದ50 ವರ್ಷಗಳ ತನಕ ನಮ್ಮ ಪೂರ್ವಜರು ಈಗ ನಾವು ಅಲೆದಾಡುತ್ತಲೇ ಇದ್ದೇವೆ. ಆದರೆ ಅಧಿಕಾರಿಗಳು ರೈತರ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ತಿಳಿಸಿದರು.
ಹಕ್ಕು ಪತ್ರಕ್ಕೆ ಮನವಿ ಹಾಲಪ್ಪ. ಹೆಚ್. ಚಂದ್ರು, ರಮೇಶ ವಟಿಮನಹಳ್ಳಿ ಮತ್ತು ಹಗರಿಬೊಮ್ಮನಹಳ್ಳಿ 50ಬಗರ್ ಹುಕುಂ ರೈತರು ಭಾಗವಹಿಸಿದ್ದರು.