ನವದೆಹಲಿ, ಜ 21 : ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಂಪೂರ್ಣ ಮಹಿಳಾ ಯೋಧರ ತಂಡ ಇದೇ 26 ಗಣರಾಜ್ಯ ದಿನದ ಪರೇಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಬೈಕ್ ಸಾಹಸ ಪ್ರದರ್ಶಿಸಲಿದೆ.
ತಂಡದಲ್ಲಿ ಒಟ್ಟು 65 ಮಂದಿ ಸದಸ್ಯರಿದ್ದು, 350 ಸಿಸಿಯ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ 90 ನಿಮಿಷಗಳ ಕಾಲ ಪ್ರದರ್ಶನ ನೀಡಲಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆ ಪಡೆಯಲ್ಲಿ ನಿಯೋಜಿತರಾಗಿರುವ ಇನ್ಸ್ಪೆಕ್ಟರ್ ಸೀಮಾ ಅವರು ತಂಡ ಮುನ್ನಡೆಸಲಿದ್ದಾರೆ. 2014ರಲ್ಲಿ ಸಂಪೂರ್ಣ ಮಹಿಳೆಯರನ್ನು ಒಳಗೊಂಡ ತಂಡ ರಚಿಸಲು ಚಿಂತನೆ ನಡೆಸಿ, ಅದನ್ನು ಸಜ್ಜುಗೊಳಿಸಲಾಗಿದೆ ಎಂದು ಸಿಆರ್ಪಿಎಫ್ ವಕ್ತಾರ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮೋಸೆಸ್ ದಿನಕರನ್ ತಿಳಿಸಿದ್ದಾರೆ.