ಲಿಂ. ಅಪ್ಪಣಗೌಡಾ ಪಾಟೀಲರ ಪುಣ್ಯಸ್ಮರಣೆ ಸಮಾರಂಭ ವರದಿ - ಎಂ.ಬಿ. ಘಸ್ತಿ
Report on the memorial service of Lt. Appanagowda Patil - M.B. Ghasti
ಲಿಂ. ಅಪ್ಪಣಗೌಡಾ ಪಾಟೀಲರ ಪುಣ್ಯಸ್ಮರಣೆ ಸಮಾರಂಭ ವರದಿ - ಎಂ.ಬಿ. ಘಸ್ತಿ
ಸಂಕೇಶ್ವರ, 17 : ಸ್ವಾತಂತ್ರ್ಯ ಹೋರಾಟಗಾರ ರೈತರ ಕನ್ಮಣಿ ಕನಸುಗಾರ ಸಹಕಾರಿ ತತ್ವದ ಮೇಲೆ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ದಿ. ಹುಕ್ಕೇರಿ ತಾಲೂಕಾ ಗ್ರಾಮೀಣ ವಿದ್ಯುಚ್ಛಕ್ತಿ ಸಂಘ ಮತ್ತು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದ ಕ್ರಾಂತಿ ಹಾಗೂ ಹರಿಕಾರ ದಿ. ಅಪ್ಪಣಗೌಡಾ ಪಾಟೀಲರ 51 ಪುಣ್ಯಸ್ಮರಣೆ ನಿಮಿತ್ಯ ಎಸ್.ಡಿ.ವ್ಹಿ.ಎಸ್. ಸಂಘದ ಆಶ್ರಯದಲ್ಲಿ ಎಸ್.ಡಿ.ವ್ಹಿ.ಎಸ್. ಪ್ರೌಢ ಶಾಲೆಯಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಈ ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸತ್ಕಾರ ಸಮಾರಂಭ ಹಾಗೂ ಪ್ರಶಸ್ತಿ ನೀಡಿ ಗೌರವಿಸುವುದು ಪ್ರಾಧ್ಯಾಪಕ ಹಾಗೂ ಸೇವಾನಿವೃತ್ತಿ ಸಿಬ್ಬಂದಿಯವರ ಸನ್ಮಾನ ಈ ಎಲ್ಲ ಕಾರ್ಯಕ್ರಮಗಳು ಸಿದ್ಧ ಸಂಸ್ಥಾನ ಮಠ ನಿಡಸೋಶಿಯ ಡಾ: ಶಿವಲಿಂಗೇಶ್ವರ ಮಹಾಸ್ವಾಮಿಗಳು ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸುವರು.
ಈ ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಮಾಜಿ ಸಚಿವ ಹಾಗೂ ಎಸ್.ಡಿ.ವ್ಹಿ.ಎಸ್. ಸಂಘದ ಚೇರಮನ್ ಹಾಗೂ ಕಾರ್ಯಾಧ್ಯಕ್ಷ ಎ.ಬಿ. ಪಾಟೀಲರು ವಹಿಸುವರು, ಮುಖ್ಯ ಅತಿಥಿಗಳಾಗಿ ರಾಣಿ ಚೆನ್ನಮ್ಮಾ ವಿಶ್ವ ವಿದ್ಯಾಲಯ ಬೆಳಗಾವಿಯ ಪ್ರೊ. ಸಿ.ಎಂ. ತ್ಯಾಗರಾಜ, ಕುಲಪತಿಗಳು ಆಗಮಿಸುವರೆಂದು ಸಂಘದ ಹಿರಿಯ ನಿರ್ದೇಶಕ ಹಾಗೂ ನ್ಯಾಯವಾದಿ ಆರ್.ಬಿ. ಪಾಟೀಲ, ಸಂಘದ ಕಾರ್ಯದರ್ಶಿ ಜಿ.ಎಸ್. ಕೋಟಗಿ, ಎಸ್.ಎಸ್. ಆರ್ಟ್ಸ ಕಾಲೇಜಿನ ಪ್ರವೀಣ ಬುರ್ಜಿ, ಇವರೆಲ್ಲರೂ ವೇದಿಕೆಯ ಮೇಲೆ ಉಪಸ್ಥಿತರಿದ್ದರು ಆರ್.ಬಿ. ಪಾಟೀಲರು ಮತ್ತು ಕಾರ್ಯದರ್ಶಿಗಳು ಈ ಸಮಾರಂಭದ ಮಾಹಿತಿಯನ್ನು ಲೋಕದರ್ಶನ ಪ್ರತಿನಿಧಿಗೆ ತಿಳಿಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 