ದಕ್ಷಿಣ ಕೊರಿಯಾದಲ್ಲಿ ಕೊವಿಡ್‍-19ನ ಹೊಸ 18 ಪ್ರಕರಣಳು ವರದಿ;, ಒಟ್ಟು ಸಂಖ್ಯೆ 10,653ಕ್ಕೆ ಏರಿಕೆ

ಸಿಯೋಲ್, ಏಪ್ರಿಲ್ 18, ದಕ್ಷಿಣ ಕೊರಿಯಾದಲ್ಲಿ ಶನಿವಾರ ಮಧ್ಯರಾತ್ರಿಯ ವೇಳೆಗೆ 24 ಗಂಟೆಗಳ ಅವಧಿಯಲ್ಲಿ ಕೊವಿಡ್‍-19 ನ 18 ಹೊಸ ಪ್ರಕರಣಗಳು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 10,653ಕ್ಕೆ ಏರಿದೆ.ಸುಮಾರು ಎರಡು ತಿಂಗಳಲ್ಲೇ ಮೊದಲ ಬಾರಿಗೆ ಒಂದು ದಿನದಲ್ಲಿ ದೃಢಪಟ್ಟ ಪ್ರಕಣಗಳ ಸಂಖ್ಯೆ 20 ಕ್ಕಿಂತ ಕಡಿಮೆಯಾಗಿದೆ. ಸತತ ಆರನೇ ದಿನ ಈ ಸಂಖ್ಯೆ 30 ಕ್ಕಿಂತ ಕಡಿಮೆಯಾಗಿದೆ. ಹೊಸ ಪ್ರಕರಣಗಳ ಪೈಕಿ  9 ಮಂದಿ ವಿದೇಶಕ್ಕೆ ಪ್ರಯಾಣ ಬೆಳೆಸಿದವರಾಗಿದ್ದಾರೆ. ವಿದೇಶದಿಂದ ಬಂದವರಲ್ಲಿ ಸೋಂಕು ದೃಢಪಟ್ಟ ಸಂಖ್ಯೆ 993 ಕ್ಕೆ ಏರಿದೆ. ಹೊಸದಾಗಿ ಇನ್ನೂ ಎರಡು ಸಾವು ವರದಿಯಾಗುವುದರೊಂದಿಗೆ  ಸಾವಿನ ಸಂಖ್ಯೆ 232 ಕ್ಕೆ ಏರಿದೆ. ಒಟ್ಟು ಸಾವಿನ ಪ್ರಮಾಣ ದೃಢಪಟ್ಟ ಪ್ರಕರಣಗಳ ಪೈಕಿ ಶೇ 2.18 ರಷ್ಟಿದೆ. ಸಂಪೂರ್ಣ ಚೇತರಿಸಿಕೊಂಡ ಒಟ್ಟು 108 ರೋಗಿಗಳನ್ನು ಸಂಪರ್ಕತಡೆಯಿಂದ ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ಈ ಸಂಖ್ಯೆ 7,937 ಕ್ಕೆ ಏರಿದೆ. ಒಟ್ಟು ದೃಢಪಟ್ಟ ಪ್ರಕರಣಗಳ ಪೈಕಿ ಗುಣಮುಖರಾದವರ ಪ್ರಮಾಣ ಶೇ 74.5ರಷ್ಟಿದೆ.  ಕೊವಿಡ್‍-19 ಮಾಹಿತಿಯನ್ನು ಪ್ರತಿದಿನ ಬೆಳಿಗ್ಗೆ 10 ಗಂಟೆಗೆ  ಕೊರಿಯಾ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಕೆಸಿಡಿಸಿ) ನವೀಕರಿಸುತ್ತದೆ. ಮೊದಲ 30 ಪ್ರಕರಣಗಳನ್ನು ಹೊರತುಪಡಿಸಿ, ಎಲ್ಲಾ ಸೋಂಕು ಪ್ರಕರಣಗಳು ಫೆಬ್ರವರಿ 18ರ ನಂತರವೇ ವರದಿಯಾಗಿವೆ. ದೇಶದಲ್ಲಿ  ನಾಲ್ಕು ಹಂತದ ವೈರಸ್ ಎಚ್ಚರಿಕೆಯನ್ನು ಇದೀಗ  ‘ಕೆಂಪು" ಮಟ್ಟ’ಕ್ಕೆ ಏರಿಸಿದೆ.