ಸಕಾಲದಲ್ಲಿ ಸಾಲ ಮರುಪಾವತಿಸಿ: ಉಪನ್ಯಾಸಕಿ ಹಿರೇಮಠ

ಸಕಾಲದಲ್ಲಿ ಸಾಲ ಮರುಪಾವತಿಸಿ: ಉಪನ್ಯಾಸಕಿ ಹಿರೇಮಠ Repay loans on time: Lecturer Hiremath

ತಾಳಿಕೋಟಿ, 22 ; ಸಾಲ ಪಡೆದವರು ಸಕಾಲಿಕವಾಗಿ ಮರುಪಾವತಿ ಮಾಡಿದರೆ ಸಹಕಾರಿ ಸಂಘಗಳ ಪ್ರಗತಿಗೆ ಅನುಕೂಲವಾಗುತ್ತದೆ. ಸಾಲ ಪಡೆಯುವಾಗ ಇರುವ ಆಸಕ್ತಿ ಮರಳಿಸುವಾಗಲೂ ಇರುವುದು ಅಗತ್ಯವಾಗಿದೆ ಎಂದು ಎಸ್ ಕೆ ಪ.ಪೂ. ಮಹಿಳಾ ಕಾಲೇಜ ಪ್ರಾಚಾರ್ಯರಾದ ಜ್ಯೋತಿ ಹಿರೇಮಠ ಹೇಳಿದರು.ತಾಲೂಕಿನ ಗುಂಡಕನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿಯಮಿತ ಇದರ 49ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು. ಸಹಕಾರ ಸಂಘಗಳು ಲಾಭದಾಯಕ ಸಂಸ್ಥೆಗಳಾಗಿರದೇ ಸೇವಾ ಸಂಸ್ಥೆಗಳಾಗಿವೆ. ರೈತರ ಕಲ್ಯಾಣ ಇವುಗಳ ಮುಖ್ಯ ಉದ್ದೇಶವಾಗಿದೆ, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ. ಸದಸ್ಯರು ತಾವು ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಅತಿಯಾದ ಸಾಲುಗಳು ಆತ್ಮಹತ್ಯೆಗೆ ಕಾರಣವಾಗುತ್ತವೆ ಹೀಗಾಗಬಾರದು ನಮ್ಮ ರೈತರು ಸ್ವಾಭಿಮಾನದ ಬದುಕನ್ನು ನಡೆಸುವಂತವರಾಗಬೇಕು ಎಂದರು.  

ಕಾರ್ಯಕ್ರಮದ ಸಾನಿಧ್ಯ ವಹಿಸಿ ಗುಂಡಕನಾಳದ ಪ.ಪೂ.ಗುರುಲಿಂಗ ಶಿವಾಚಾರ್ಯರು ಮಾತನಾಡಿ ಈ ಸಂಘವು ಇಷ್ಟೊಂದು ಅಭಿವೃದ್ಧಿಯನ್ನು ಸಾಧಿಸಲು ಇಲ್ಲಿರುವ ಆಡಳಿತ ಮಂಡಳಿಯವರ ಕಳಕಳಿ, ಸಿಬ್ಬಂದಿಗಳ ಕರ್ತವ್ಯೆ ನಿಷ್ಠೆ ಹಾಗೂ ಸಂಘದ ಸದಸ್ಯರ ಪರಸ್ಪರ ಸಹಕಾರವೇ ಕಾರಣವಾಗಿದೆ. ಬರುವ ವರ್ಷ ಸಂಘವು ಸುವರ್ಣ ಮಹೋತ್ಸವವನ್ನು ಆಚರಿಸಲಿದೆ ಈ ಕಾರ್ಯಕ್ರಮವನ್ನು ಒಂದು ಐತಿಹಾಸಿಕ ಕಾರ್ಯಕ್ರಮವನ್ನಾಗಿ ಮಾಡಲು ಸಂಘದ ಆಡಳಿತ ಮಂಡಳಿಯವರು ಪ್ರಯತ್ನಿಸಬೇಕು. ಹಿರಿಯರ ಕಷ್ಟಪಟ್ಟು ಕಟ್ಟಿದ ಈ ಸಂಘವನ್ನು ಬೆಳೆಸಿಕೊಂಡು ಹೋಗುವಂತ ಕಾರ್ಯ ಆಗಬೇಕು ಎಂದರು.  

ಕೊಡಗಾನೂರದ ಪ.ಪೂ. ಕುಮಾರ ದೇವರು ಸಮ್ಮುಖವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಬಿ.ರಾಮಗಿರಿಮಠ ವರದಿ ವಾಚಿಸಿದರು. ಸಂಘದ ಅಧ್ಯಕ್ಷ ಮಲ್ಲನಗೌಡ ನಿಂ.ಬಿರಾದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಉಪಾಧ್ಯಕ್ಷ ಗುರಣ್ಣಗೌಡ ಬಿರಾದಾರ, ಗಣ್ಯರಾದ ಚನ್ನಾರೆಡ್ಡಿ ಪಾಟೀಲ,ಬಸನಗೌಡ ಗಬಸಾವಳಗಿ, ಮಲ್ಲನಗೌಡ ದೊಡ್ಡಮನಿ, ಶ್ರೀಶೈಲ ಗುಂಡಕನಾಳ, ನಿರ್ದೇಶಕರಾದ ಬಸನಗೌಡ ಹಳ್ಳಿಪಾಟೀಲ, ಪ್ರಭುಗೌಡ ಪಾಟೀಲ, ಬಸವರಾಜ ಬಿರಾದಾರ, ಕಸ್ತೂರಿಬಾಯಿ ಭೀ.ಪಾಟೀಲ, ನಿರ್ಮಲಾ ಚ.ಪಾಟೀಲ, ಶಾಂತಮ್ಮ ಬ.ಗಬಸಾವಳಗಿ, ಅಲ್ಲಿಸಾ ಪಿಂಜಾರ, ಉಸ್ಮಾನಸಾ ಮುಲ್ಲಾ, ಮಲ್ಲಣ್ಣ ಅಸ್ಕಿ,ಹಣಮಂತ ಕೊಡಗಾನೂರ ಕ್ಷೇತ್ರಾಧಿಕಾರಿ ಎಸ್‌.ಬಿ.ಬಿರಾದಾರ, ವೃತ್ತಿಪರ ನಿರ್ದೇಶಕ ಸಿದ್ದನಗೌಡ ಬಿರಾದಾರ, ಸಿಬ್ಬಂದಿಗಳಾದ ಎಂ.ಆರ್‌. ವಾಡೇದ,ಬಿ.ಆರ್‌.ಪಾಟೀಲ, ಎಸ್‌.ಎಂ.ಗುಂಡಕನಾಳ ಹಾಗೂ ಸಂಘದ ಸದಸ್ಯರು ಇದ್ದರು. ಶಿಕ್ಷಕ ಅಶೋಕ ಪತ್ತಾರ ನಿರೂಪಿಸಿದರು.