ಸಾಲ ಪಡೆದು ಸಕಾಲಕ್ಕೆ ಮರುಪಾವತಿಸಿ: ಬಸನಗೌಡ ಬಸರ್ಕೋಡ

ಸಾಲ ಪಡೆದು ಸಕಾಲಕ್ಕೆ ಮರುಪಾವತಿಸಿ: ಬಸನಗೌಡ ಬಸರ್ಕೋಡ   Repay loans on time: Basanagouda Basarkoda


ತಾಳಿಕೋಟೆ, ಸೆ.18: ಸಂಘದಿಂದ ಸಾಲ ಪಡೆದ ರೈತರು ಸಾಲವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಅವಧಿಯಲ್ಲಿ ಮರುಪಾವತಿಸಲು ಪ್ರಯತ್ನಿಸಬೇಕು. ಇದು ಸಂಘದ ಅಭಿವೃದ್ಧಿಗೆ ಅತ್ಯವಶ್ಯಕವಾಗಿದೆ ಎಂದು ಲಿಂಗದಹಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಬಸನಗೌಡ ಬಸರ್ಕೋಡ ಹೇಳಿದರು.  ತಾಲೂಕಿನ ಲಿಂಗದಹಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 50ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಸಂಘ ಆರಂಭವಾಗಿ 50 ವರ್ಷಗಳು ಕಳೆದಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದೆ. ಇದಕ್ಕೆ ಎಲ್ಲ ಷೇರುದಾರರ ಸಹಕಾರವೇ ಪ್ರಮುಖ ಕಾರಣವಾಗಿದೆ. ಸಭೆಯಲ್ಲಿ ಸದಸ್ಯರು ನೀಡಿದ ಸಲಹೆ-ಸೂಚನೆಗಳನ್ನು ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ, ಸಂಘದ ನಿಯಮಾವಳಿಗಳ ಅನ್ವಯ ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದರು.  

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ರ. ತಳಗೂರು ವಾರ್ಷಿಕ ವರದಿ ಮಂಡಿಸಿ, ಪ್ರಸಕ್ತ ವರ್ಷದಲ್ಲಿ ಸಂಘವು 1,233 ಷೇರುದಾರರನ್ನು ಹೊಂದಿದ್ದು, ?9.25 ಲಕ್ಷ ಠೇವಣಿ, ?9.50 ಲಕ್ಷ ಷೇರು ಬಂಡವಾಳ ಹಾಗೂ ?9.70 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ?7.58 ಕೋಟಿ ಸಾಲ ವಿತರಿಸಲಾಗಿದ್ದು, 2025-26ನೇ ಸಾಲಿನಲ್ಲಿ ?5.12 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.  

ಸಂಘದಿಂದ ಸಾಲ ಪಡೆದ ರೈತರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿಸುವ ಮೂಲಕ ಸಂಘದ ಆರ್ಥಿಕ ಪ್ರಗತಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.  ಶಿಕ್ಷಕ ಅಪ್ಪಾಸಾಹೇಬಗೌಡ ಮೂಲಿಮನಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸನಗೌಡ ಈ. ಬಸರ್ಕೋಡ ಹಾಗೂ ಉಪಾಧ್ಯಕ್ಷೆ ನೀಲಮ್ಮ ಮಾ. ಪೀರಾಪೂರ ಅವರನ್ನು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.  

ಆಡಳಿತ ಮಂಡಳಿ ಸದಸ್ಯರಾದ ಗುರ​‍್ಪ ಮೇಟಿ, ಬಸನಗೌಡ ಬಿರಾದಾರ, ಹಣಮಗೌಡ ಮುದುನೂರು, ಶರಣಪ್ಪ ಪಾಟೀಲ, ಹಣಮಂತರಾಯ ಬಿರಾದಾರ, ನಿಂಗಪ್ಪ ಹೊಸಮನಿ, ಗಂಗಮ್ಮ ಶಂ. ನಾಡಗೌಡ, ಜ್ಞಾನಪ್ಪ ವಾಲಿಕಾರ, ರಾಮಚಂದ್ರ ಹೊಸಮನಿ, ನೇತ್ರಾ ಶಿ. ವಾಲಿಕಾರ ಸೇರಿದಂತೆ ಷೇರುದಾರರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.